ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಅಧ್ಯಕ್ಷ ಹತ್ಯೆ ಸಂಚು ಪ್ರಕರಣದಲ್ಲಿ ಭಾರತೀಯನ ಸೆರೆ

|
Google Oneindia Kannada News

ಕೊಲಂಬೋ, ಅಕ್ಟೋಬರ್ 25: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕೊಲೆ ಯತ್ನ ಪ್ರಕರಣಕ್ಕೂ ಭಾರತೀಯ ತನಿಖಾ ಸಂಸ್ಥೆಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ಸಿಕ್ಕ ಬಳಿಕ, ಮತ್ತೊಂದು ಬೆಳವಣಿಗೆ ನಡೆದಿದೆ. ಈ ಕೇಸಿಗೆ ಸಂಬಂಧಿಸಿದಂತೆ ಓರ್ವ ಭಾರತೀಯನನ್ನು ಬಂಧಿಸಲಾಗಿದ್ದು, ಹೆಚ್ಚುವರಿ ತನಿಖೆಗೆ ಚೀನಾ ನೆರವು ಕೇಳುವ ಸಾಧ್ಯತೆಯಿದೆ.

ಮೈತ್ರಿಪಾಲ ಅವರ ಕೊಲೆ ಸಂಚು ಪ್ರಕರಣದಲ್ಲಿ ಮರ್ಸೆಲಿ ಥಾಮಸ್ ಎಂಬ ವ್ಯಕ್ತಿಯನ್ನು ಸೆಪ್ಟೆಂಬರ್ 22ರಂದು ಬಂಧಿಸಲಾಗಿದ್ದು, ಅಕ್ಟೋಬರ್ 23ರಂದು ಶ್ರೀಲಂಕಾದ ಕೊಲಂಬೋ ಫೋರ್ಟ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.

ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ ಭಾರತ 'ರಾ' ಕೊಲೆ ಸಂಚು ನಡೆಸಿಲ್ಲ : ಸಿರಿಸೇನಾ ಸ್ಪಷ್ಟನೆ

ಆದರೆ, ಕೋರ್ಟಿನಲ್ಲಿ ವಿಚಾರಣೆ ವೇಳೆ ಈ ಆರೋಪವನ್ನು ಥಾಮಸ್ ನಿರಾಕರಿಸಿದ್ದಾರೆ. ಅನವಶ್ಯಕವಾಗಿ ಈ ಪ್ರಕರಣದಲ್ಲಿ ಪೊಲೀಸರು ನನ್ನನ್ನು ಸಿಲುಕಿಸುತ್ತಿದ್ದಾರೆ ಎಂದಿದ್ದಾರೆ.

Indian suspect in Sri Lankan president’s assassination bid alleges frame-up

ಥಾಮಸ್ ಬಳಿ ಇರುವ ಚೀನಾ ಮೊಬೈಲ್ ತಯಾರಕ ಸಂಸ್ಥೆಯ ಮೊಬೈಲ್ ಫೋನ್ ನಲ್ಲಿರುವ ಡೇಟಾ ಬಗ್ಗೆ ತಿಳಿಯಲು ಚೀನಾ ಮೊಬೈಲ್ ಕಂಪನಿ ಹುವೈ ಹಾಗೂ ಚೀನಾ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶ್ರೀಲಂಕಾ ತಿಳಿಸಿದೆ.

ಭಾರತದ ಮೂವರು RAW ಅಧಿಕಾರಿಗಳ ಬಂಧನ:ಪಾಕ್ ಹೇಳಿಕೆಭಾರತದ ಮೂವರು RAW ಅಧಿಕಾರಿಗಳ ಬಂಧನ:ಪಾಕ್ ಹೇಳಿಕೆ

ಸಿರಿಸೇನ ಹತ್ಯೆಗೆ ಭಾರತೀಯ ಗುಪ್ತಚರ ಸಂಸ್ಥೆ ರಾ ಸಂಚು ರೂಪಿಸಿತ್ತು ಎಂದು ಕಳೆದ ವಾರ ವರದಿಯಾಗಿತ್ತು. ಇಂಡಿಯನ್​ ರೀಸರ್ಚ್​ ಅಂಡ್​ ಅನಾಲಿಸಿಸ್​ ವಿಂಗ್​ (R &AW) ನನ್ನನ್ನು ಕೊಲ್ಲಲು ಯತ್ನಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ. ಭಾರತದ ಪ್ರಧಾನಿ ಮೋದಿ ಅವರು ನನ್ನ ಮತ್ರರು ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸ್ಪಷ್ಟಪಡಿಸಿದ್ದರು.

English summary
An Indian national arrested for possible links to an alleged plot to assassinate Sri Lankan President Maithripala Sirisena has told a court that he is innocent saying the police are trying to frame him in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X