• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಬೆಟ್ ಗಡಿಯಲ್ಲಿ ಸೇನಾ ನಿಯೋಜನೆ ಹೆಚ್ಚಿಸುತ್ತಿರುವ ಚೀನಾ

|

ನವದೆಹಲಿ, ಜುಲೈ 27: ಪೂರ್ವ ಲಡಾಖ್‌ನಲ್ಲಿ ಚೀನಾದ ತಕರಾರು ಮುಗಿದ ಬೆನ್ನಲ್ಲೇ ಟಿಬೆಟ್ ಗಡಿಯಲ್ಲಿ ಸೇನೆ ನಿಯೋಜಿಸುತ್ತಿರುವುದು ವರದಿಯಾಗಿದೆ.

   IPL 2020 Dubai : ದುಬೈ ಆತಿಥ್ಯವನ್ನು ಒಪ್ಪಿಕೊಂಡ ಭಾರತ | Oneindia Kannada

   ಎಮಿಸ್ಯಾಟ್ ಉಪಗ್ರಹ ಸಂಗ್ರಹಿಸಿರುವ ಚಿತ್ರಗಳನ್ನು ಆಧರಿಸಿ ಭಾರತೀಯ ಗುಪ್ತಚರ ಸಂಸ್ಥೆಗಳು ಈ ಅಂಶವನ್ನು ಸರ್ಕಾರಕ್ಕೆ ತಿಳಿಸಿದೆ.

   ಚೀನಾ ಗಡಿಯಲ್ಲಿ ಕಣ್ಗಾವಲಿಗೆ ಭಾರತದ ಸ್ವದೇಶಿ ಡ್ರೋನ್

   ಅರುಣಾಚಲ ಪ್ರದೇಶ ಗಡಿಗೆ ಹತ್ತಿರವಾಗಿ ಟಿಬೆಟಿಯನ್ ಪ್ರದೇಶಗಳಲ್ಲಿ ಚೀನಾ ಸೈನಿಕರನ್ನು ಹೆಚ್ಚೆಚ್ಚು ನಿಯೋಜಿಸುತ್ತಿದೆ ಎಂದು ಹೇಳಲಾಗಿದೆ.

   ಕಳೆದ ವಾರ ಪೂರ್ವ ಲಡಾಖ್‌ನಲ್ಲಿ 40 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿರುವ ಸುದ್ದಿ ಬಂದಿತ್ತು, ಇದರ ಬೆನ್ನಲ್ಲೇ ಚೀನಾ ಹಾಗೂ ಭಾರತೀಯ ಸೇನಾ ಅಧಿಕಾರಿಗಳು ಮಾತುಕತೆ ನಡೆಸಿ ಸೇನೆಯನ್ನು ಸಂಪೂರ್ಣ ಹಿಂತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದವು.

   ಆದರೆ ಈ ಕ್ರಮವು ಈಗ ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಸೇನಾ ಮೂಲಗಳ ಪ್ರಕಾರ ಪೂರ್ವ ಲಡಾಖ್‌ನಲ್ಲಿ ಚೀನಾ ಸೇನಾ ನಿಯೋಜನೆ ಹಾಗೆಯೇ ಇದ್ದು, ಗಡಿ ಪ್ರದೇಶದ ತನ್ನ ಕಡೆ ಕೆಲವು ನಿರ್ಮಾಣ ಕಾರ್ಯಗಳನ್ನು ಮಾಡುತ್ತಿದೆ ಎಂದು ವರದಿಯಾಗಿದೆ.

   ಇನ್ನೊಂದೆಡೆ ನೆರೆಹೊರೆಯ ದೇಶಗಳನ್ನು ಚೀನಾ ಎತ್ತಿಕಟ್ಟುತ್ತಿದೆ. ಹಾಗೆಯೇ ಮುಂದಿನ ಚಳಿಗಾಲದಲ್ಲಿ ಪಾಕಿಸ್ತಾನ ಹಾಗೂ ಚೀನಾ ಒಟ್ಟಾಗಿ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

   ಪೂರ್ವ ಲಡಾಖ್ ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ಬಳಿ ಚೀನಾ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಭಾರತೀಯ ಸೇನೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಧೆ(ಡಿಆರ್ಡಿಒ) ನಿರ್ಮಾಣದ ಭಾರತ್ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿದೆ.

   ವಿಶ್ವದ ಅತ್ಯಂತ ಚುರುಕುಬುದ್ಧಿಯ ಮತ್ತು ಹಗುರ ಕಣ್ಗಾವಲು ಡ್ರೋನ್ ಗಳ ಪಟ್ಟಿಗೆ ಭಾರತ್ ಸರಣಿಯ ಡ್ರೋನ್ ಗಳನ್ನು ಸೇರಿಸಬಹುದಾಗಿದೆ.ಈ ಭಾರತ್ ಡ್ರೋನ್ ಸಣ್ಣ ಹಾಗೂ ಶಕ್ತಿಯುತವಾದ ಡ್ರೋನ್ ಆಗಿದ್ದು ಸ್ಥಳದಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸಬಲ್ಲದು. ಮಿತ್ರರು ಹಾಗೂ ವೈರಿಗಳನ್ನು ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಕಾರ್ಯ ನಿರ್ವಹಿಸುತ್ತದೆ.

   English summary
   India's premier intelligence-gathering satellite EMISAT, operated by the Defence Research and Development Organisation (DRDO), has taken a good look at the positions of the Chinese People's Liberation Army (PLA) in occupied Tibet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more