ಅಮೆರಿಕ: ಭಾರತೀಯ ಕುಟುಂಬದ ಮೇಲೆ ಗುಂಡಿನ ದಾಳಿ, ಒಬ್ಬ ಸಾವು

Posted By:
Subscribe to Oneindia Kannada

ಚಿಕಾಗೊ, ಡಿಸೆಂಬರ್ 29: ಅಮೆರಿಕದ ಚಿಕಾಗೊ ಸಮೀಪದ ಡೆಲ್ಟನ್ ನಗರದಲ್ಲಿ ಭಾರತೀಯ ಮೂಲದ ಕುಟುಂಬವೊಂದರ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದು, 19 ವರ್ಷದ ಭಾರತೀಯ ಮೂಲದ ಯುವಕ ಹತನಾಗಿದ್ದಾನೆ.

ಭಾರತೀಯ ಕುಟುಂಬವರು ನಡೆಸುತ್ತಿದ್ದ ಪೆಟ್ರೊಲ್ ಪಂಪ್ ಮೇಲೆ ದಾಳಿ ನಡೆಸಿದ ದರೋಡೆಕೋರರು ತಡೆಯಲು ಬಂದ ಕುಟುಂಬ ಸದಸ್ಯರ ಮೇಲೆ ಗುಂಡು ಹಾರಿಸಿದ್ದಾರೆ, ಈ ದಾಳಿಯಲ್ಲಿ ಅರ್ಷದ್ ವೋರಾ (19) ಸಾವನ್ನಪ್ಪಿದ್ದು, ಇನ್ನುಳಿದವರು ತೀರ್ವವಾಗಿ ಗಾಯಗೊಂಡಿದ್ದಾರೆ.

Indian origin man shot dead in Chicago

ಪ್ರಕರಣ ಕುರಿತಂತೆ ಈ ವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಸ್ಥಳೀಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದು, ಕೃತ್ಯ ಎಸಗಿದವರ ಬಗ್ಗೆ ಸುಳಿವು ನೀಡಿದವರಿಗೆ 12000 ಡಾಲರ್ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಗುಜರಾತ್ ಮೂಲಕ ಅರ್ಷದ್ ವೋರಾ ಮತ್ತು ಆತನ ಕುಟುಂಬ ಸದಸ್ಯರು ಇಲ್ಲಿಯೇ ಪೆಟ್ರೊಲ್ ಪಂಪ್ ಮತ್ತು ಅಂಗಡಿಯನ್ನು ನಡೆಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian origin 19 year old boy Arshad Vora shot dead in Chicago by robbers. His relative critically wounded by armed robbers who struck their petrol station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ