ಅಮೆರಿಕಾದಲ್ಲಿ ಇರಿದು ತೆಲಂಗಾಣ ಮೂಲದ ವೈದ್ಯರ ಹತ್ಯೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ವಾಷಿಂಗ್ಟನ್, ಸೆಪ್ಟೆಂಬರ್ 15: ಅಮೆರಿಕಾದಲ್ಲಿ ಮತ್ತೋರ್ವ ಭಾರತ ಮೂಲದ ವೈದ್ಯರನ್ನು ಇರಿದು ಕೊಲೆ ಮಾಡಲಾಗಿದೆ.

ತೆಲಂಗಾಣ ಮೂಲದ ಅಚ್ಚುತ ಎನ್ ರೆಡ್ಡಿ (57) ಸಾವಿಗೀಡಾದವರಾಗಿದ್ದಾರೆ. ಅಚ್ಚುತ ರೆಡ್ಡಿ ಮನಃಶಾಸ್ತ್ರ ತಜ್ಞರಾಗಿದ್ದು ಅಮೆರಿಕಾದ ಕನ್ಸಾಸ್ ನಗರದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು.

Indian origin doctor stabbed to death in US

ಬುಧವಾರ ತಡ ರಾತ್ರಿ ಅವರನ್ನು 21 ವರ್ಷದ ಉಮರ್ ರಶೀದ್ ದತ್ ಎನ್ನುವಾತ ಕನ್ಸಾಸ್ ನ ವಿಶಿತಾ ಕಂಟ್ರಿ ಕ್ಲಬ್ ನಲ್ಲಿ ಇರಿದು ಕೊಲೆ ಮಾಡಿದ್ದಾನೆ. ಕೊಲೆಗಡುಕನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ.

ಉಮರ್ ರಶೀದ್ ರೋಗಿಯಾಗಿದ್ದು ಅಚ್ಚುತ ರೆಡ್ಡಿ ಬಳಿ ಚಿಕಿತ್ಸೆಗೆ ಬರುತ್ತಿದ್ದ ಎನ್ನಲಾಗಿದೆ. ಆತ ಅಚ್ಚುತ ರೆಡ್ಡಿಯನ್ನು ಯಾಕೆ ಕೊಲೆ ಮಾಡಿದ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಅಚ್ಚುತ ರೆಡ್ಡಿ ಹೈದರಾಬಾದ್ ನ ಒಸ್ಮಾನಿಯಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ನಂತರ ಅಮೆರಿಕಾದ ಕನ್ಸಾಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಪಡೆದು ಅಲ್ಲೇ 1989ರಿಂದ ವೈದ್ಯ ವೃತ್ತಿ ನಡೆಸಿಕೊಂಡು ಬರುತ್ತಿದ್ದರು ಎಂದು ತಿಳಿದು ಬಂದಿದೆ.

ಇದೇ ರೀತಿ ಕೆಲವು ತಿಂಗಳ ಹಿಂದೆ ಹೈದರಾಬಾದ್ ಮೂಲದ ವೈದ್ಯ ಶ್ರೀನಿವಾಸ್ ಕುಚಿಭೋತ್ಲಾರನ್ನು ಇದೇ ಕನ್ಸಾಸ್ ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A doctor of Indian origin was stabbed to death in the US state of Kansas. A 21 year old suspect has been arrested on charges of first degree murder. The motive is however unclear.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ