ಪಾಕಿಸ್ತಾನದಿಂದ ಇಸ್ಲಮಾಬಾದ್ ನಲ್ಲಿ ಭಾರತೀಯ ಪ್ರಜೆಯ ಬಂಧನ

ಸರಿಯಾದ ಪ್ರಯಾಣ ದಾಖಲೆಗಳಿಲ್ಲದ ಕಾರಣಕ್ಕೆ ಭಾರತೀಯ ಪ್ರಜೆಯನ್ನು ಬಂಧಿಸಿರುವುದಾಗಿ ಪಾಕಿಸ್ತಾನದ 'ಸಮಾ ಟಿವಿ' ವರದಿ ಮಾಡಿದೆ. ಫಾರೇನ್ ಆಕ್ಟ್ ನ ಪರಿಚ್ಛೇದ 14ರ ಅಡಿಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಇಸ್ಲಮಾಬಾದ್, ಮೇ 21: ಕುಲಭೂಷಣ್ ಜಾಧವ್ ಪ್ರಕರಣ ಹಸಿರಾಗಿರುವಾಗಲೇ ಪಾಕಿಸ್ತಾನ ಸರಕಾರ ಭಾರತೀಯರೊಬ್ಬರನ್ನು ಬಂಧಿಸಿದೆ. ಪಾಕಿಸ್ತಾನ ರಾಜಧಾನಿ ಇಸ್ಲಮಾಬಾದ್ ನಲ್ಲಿ ಸರಿಯಾದ ಪ್ರಯಾಣ ದಾಖಲೆಗಳು ಇಲ್ಲ ಎಂಬ ಆರೋಪದ ಮೇಲೆ ಭಾರತೀಯ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ.

ಸರಿಯಾದ ಪ್ರಯಾಣ ದಾಖಲೆಗಳಿಲ್ಲದ ಕಾರಣಕ್ಕೆ ಭಾರತೀಯ ಪ್ರಜೆಯನ್ನು ಬಂಧಿಸಿರುವುದಾಗಿ ಪಾಕಿಸ್ತಾನದ 'ಸಮಾ ಟಿವಿ' ವರದಿ ಮಾಡಿದೆ. ಆದರೆ ಅವರ ಹೆಸರು ತಿಳಿದು ಬಂದಿಲ್ಲ. ವಿದೇಶಿ ಕಾಯ್ದೆಯ ಪರಿಚ್ಛೇದ 14ರ ಅಡಿಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

Indian national arrested in Islamabad allegedly over incomplete travel documents

ಇನ್ನು ಭಾರತೀಯ ನಾಗರೀಕರನ್ನು ಪಾಕಿಸ್ತಾನದ ಕೋರ್ಟಿಗೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆದರೆ ಈ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+