ಅಬ್ಬಬ್ಬಾ ಲಾಟರಿ... ದುಬೈನಲ್ಲಿ ನೆಲೆಸಿರುವ ಈ ಭಾರತೀಯನಿಗೆ ಸಿಕ್ತು ಬರೋಬ್ಬರಿ 33 ಕೋಟಿ ರೂಪಾಯಿ
ದುಬೈ, ಆಗಸ್ಟ್ 05: ದುಬೈನಲ್ಲಿ ನೆಲೆಸಿರುವ ಭಾರತೀಯ ವಲಸಿಗರೊಬ್ಬರು ಅಬುಧಾಬಿ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 15 ಮಿಲಿಯನ್ ದಿರ್ಹಂ ( 33.7 ಕೋಟಿ ರೂ.) ಬಹುಮಾನವನ್ನು ಗೆದ್ದಿದ್ದಾರೆ. ದಿರ್ಹಂ ಎಂಬುದು ಯುಎಇ ಕರೆನ್ಸಿ ಹೆಸರು.
ಸಕಿಲ್ ಖಾನ್ ಶಾರ್ವರ್ ಖಾನ್ ಎಂಬುವವರು ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ ವಿಜೇತರಾಗಿದ್ದಾರೆ. ಟಿಕೆಟ್ ಸಂಖ್ಯೆ 191115 ಅನ್ನು ಜುಲೈ 25 ರಂದು ಅವರು ಡ್ರಾ ಮಾಡಿಕೊಂಡಿದ್ದಾರೆ. ಇತರ 14 ಜನರೊಂದಿಗೆ ರಾಫೆಲ್ ಡ್ರಾ ಸಂಖ್ಯೆ 254 ಅನ್ನು ಅವರು ಖರೀದಿಸಿದ್ದರು.

ಜುಲೈ 25 ಖಾನ್ ಅವರ ಜನ್ಮದಿನವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅಬುಧಾಬಿ ಬಿಗ್ ಟಿಕೆಟ್ ಖರೀದಿಸಿದ್ದರು. ಅವರ ಅದೃಷ್ಟ ಖುಲಾಯಿಸಿದ್ದು, ಅವರು 33.7 ಕೋಟಿ ರೂ ಮೌಲ್ಯದ ಲಾಟರಿಯನ್ನು ಡ್ರಾ ಮಾಡಿಕೊಂಡಿದ್ದಾರೆ.
ದುಬೈನ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರಿಂಗ್ ಕೋಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿರುವ ಖಾನ್, 15 ಜನರೊಂದಿಗೆ ಈ ಬಹುಮಾನವನ್ನು ಪಡೆದುಕೊಳ್ಳಲಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಈ ಕುರಿತು ಬಿಗ್ ಟಿಕೆಟ್ ಸಂಘಟಕರೊಂದಿಗೆ ಮಾತನಾಡಿರುವ ಖಾನ್, 'ಸಾಮಾನ್ಯವಾಗಿ, ನಾನು ರಾಫೆಲ್ ಟಿಕೆಟ್ ಸಂಖ್ಯೆಗಳನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡುತ್ತೇನೆ. ಆದರೆ, ಈ ಬಾರಿ ನಾನು ನನ್ನ ಹುಟ್ಟುಹಬ್ಬದಂದು ಟಿಕೆಟ್‌ಗಳನ್ನು ಖರೀದಿಸಿದೆ. ನಾನು ಆಯ್ಕೆ ಮಾಡಿದ ಸಂಖ್ಯೆಗಳ ಬಗ್ಗೆ ನಿಜವಾಗಿಯೂ ಯೋಚಿಸಿದ್ದೆ' ಎಂದು ತಿಳಿಸಿದ್ದಾರೆ.
ಅವರು 2015 ರಿಂದ ಬಿಗ್ ಟಿಕೆಟ್‌ಗಳನ್ನು ತಮ್ಮ ಸ್ನೇಹಿತರೊಂದಿಗೆ ಖರೀದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಸಾಲವನ್ನು ತೀರಿಸಲು ಮತ್ತು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನಗದು ಬಹುಮಾನವನ್ನು ಖಾನ್ ಬಳಸಲಿದ್ದಾರೆ. ಲಾಟರಿ ಟಿಕೆಟ್‌ಗಳನ್ನು ಖರೀದಿಸುವುದನ್ನು ಮುಂದುವರಿಸಲು ಯೋಜಿಸಿದ್ದಾರೆ.
ಈ ತಿಂಗಳು ರಾಫೆಲ್ ಟಿಕೆಟ್ ಖರೀದಿಸುವ ಅವಕಾಶವಿದೆ. ಇದು ಸೆಪ್ಟೆಂಬರ್ 3 ರಂದು ಲೈವ್ ಡ್ರಾ ಆಗುತ್ತದೆ. ಇದು 20 ಮಿಲಿಯನ್ ದಿರ್ಹಮ್‌ಗಳನ್ನು ಹೊಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬಿಗ್ ಟಿಕೆಟ್‌ಗಳನ್ನು ಪಡೆಯಲು ಬಯಸುವ ಯಾರಾದರೂ ಬಿಗ್ ಟಿಕೆಟ್ ವೆಬ್‌ಸೈಟ್ ಮೂಲಕ ಅಥವಾ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಲ್ ಐನ್ ಏರ್‌ಪೋರ್ಟ್‌ನಲ್ಲಿರುವ ಸ್ಟೋರ್ ಕೌಂಟರ್‌ಗಳಿಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಟಿಕೆಟ್‌ಗಳನ್ನು ಖರೀದಿಸಬಹುದು.












Click it and Unblock the Notifications