• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯ ನದಿಯಲ್ಲಿ ಮಕ್ಕಳನ್ನು ಕಾಪಾಡಲು ಹೋಗಿ ಪ್ರಾಣಬಿಟ್ಟ ಭಾರತೀಯ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 8: ಕ್ಯಾಲಿಫೋರ್ನಿಯದ ಕಿಂಗ್ ನದಿಯಲ್ಲಿ ಬಿದ್ದಿದ್ದ ಮೂವರನ್ನು ಮಕ್ಕಳನ್ನು ಕಾಪಾಡಲು ಹೋಗಿ 29 ವರ್ಷದ ಭಾರತೀಯ ವ್ಯಕ್ತಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಕಿಂಗ್ ನದಿಯಲ್ಲಿ ಎಂಟು ವರ್ಷದ ಇಬ್ಬರು ಬಾಲಕಿಯರು ಹಾಗೂ ಹತ್ತು ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಅಪಾಯಕ್ಕೆ ಸಿಲುಕಿದ್ದಾರೆ. ಮಕ್ಕಳ ಒದ್ದಾಡುತ್ತಿದ್ದನ್ನು ದಡದಲ್ಲಿ ನಿಂತಿದ್ದ ಮಂಜಿತ್ ಸಿಂಗ್ ಗಮನಿಸಿ ರಕ್ಷಿಸುವುದಕ್ಕೆ ಮುಂದಾಗಿದ್ದಾರೆ.

ಅಮೆರಿಕಾ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ಟಿಕ್‌ ಟಾಕ್ಅಮೆರಿಕಾ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ಟಿಕ್‌ ಟಾಕ್

ಮಕ್ಕಳನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಹಿಂದೂಮುಂದೂ ಯೋಚನೆ ಮಾಡದೆ, ನದಿ ಹಾರಿದ್ದಾರೆ. ಮಂಜೀತ್ ನದಿಗೆ ಹಾರಿದ್ದನ್ನು ಗಮನಿಸಿದ ಇನ್ನಿತರ ಜನರು, ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಸಹಾಯ ಮಾಡಿದರು.

ದುರದೃಷ್ಟವಶಾತ್, ನೀರಿನಲ್ಲಿ ಮುಳುಗಿದ ಮಂಜೀತ್ ಸಿಂಗ್ ಮತ್ತೆ ಮೇಲಕ್ಕೆ ಬರಲೇ ಇಲ್ಲ. ಸುಮಾರು 40 ನಿಮಿಷಗಳ ನಂತರ ಮೃತ ದೇಹ ಪತ್ತೆಯಾಗಿದೆ. ನಂತರ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ, ಅವರು ಮೃತಪಟ್ಟಿರುವುದನ್ನು ದೃಢಿಕರಿಸಲಾಯಿತು.

ಮಂಜಿತ್ ಸಿಂಗ್ ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದಿದ್ದರು. ಇತ್ತೀಚೆಗೆ ಟ್ರಕ್ಕಿಂಗ್ ವ್ಯವಹಾರವನ್ನು ಪ್ರಾರಂಭಿಸಲು ಫ್ರೆಸ್ನೊಗೆ ತೆರಳಿದ್ದರು. ಆಗಸ್ಟ್ 5 ರಂದು ಟ್ರಕ್ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

English summary
Indian-origin Sikh Man Dies While Trying to Save 3 Children From Drowning in California River.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X