ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ವಿದ್ಯಾರ್ಥಿಗಳು!

ಪಾಕಿಸ್ತಾನ ವಿದ್ಯಾರ್ಥಿಗಳಿಂದ ಭಾರತೀಯ ರಾಷ್ಟ್ರಗೀತೆ ಗಾಯನ. ಭಾರತದ ಮ್ಯೂಸಿಕ್ ತಂಡವೊಂದು ಆಗಸ್ಟ್ 14ರಂದು ಪಾಕಿಸ್ತಾನ ರಾಷ್ಟ್ರಗೀತೆ ಹಾಡಿತ್ತು. ಇದಕ್ಕೆ ಪ್ರತಿಯಾಗಿ ಈಗ ಭಾರತೀಯ ರಾಷ್ಟ್ರಗೀತೆಯ ಗಾಯನ.

ನವದೆಹಲಿ, ಆಗಸ್ಟ್ 18: ಪಾಕಿಸ್ತಾನ ಮತ್ತು ಭಾರತದ ಸ್ವಾತಂತ್ರ್ಯೋತ್ಸವವು ಒಂದರ ಹಿಂದೊಂದರಂತೆ (ಕ್ರಮವಾಗಿ ಆಗಸ್ಟ್ 14 ಮತ್ತು 15) ಬರುತ್ತವೆ. ಈ ಬಾರಿಯ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವದಲ್ಲಿ ಭಾರತೀಯ ಸಂಗೀತಗಾರರ ತಂಡವೊಂದು ಪಾಕಿಸ್ತಾನದ ರಾಷ್ಟ್ರಗೀತೆಯನ್ನು (ಪಾಕ್ ಸರ್ಝಾಮಿನ್) ಹಾಡುವ ಮೂಲಕ ಪಾಕಿಸ್ತಾನದ ಜನತೆಗೆ ಅಚ್ಚರಿಯ ಉಡುಗೊರೆ ನೀಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿ, ಪಾಕಿಸ್ತಾನದ ಜನತೆ ಬಹುವಾಗಿ ಮೆಚ್ಚಿಕೊಂಡರು.

Indian Independence Day 2017: Pakistanis sing Indian national anthem

ಇದೀಗ, ಇದಕ್ಕೆ ಪ್ರತಿಯಾಗಿ ಲಾಹೋರ್ ನ ವಿದ್ಯಾರ್ಥಿಗಳ ವೃಂದವೊಂದು ಭಾರತೀಯ ರಾಷ್ಟ್ರಗೀತೆಯನ್ನು ಹಾಡಿ ಅದರದ್ದೊಂದು ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕಿದೆ. ಉತ್ತಮವಾಗಿ, ಸುಶ್ರಾವ್ಯವಾಗಿ ಹಾಡಲ್ಪಟ್ಟಿರುವ ಈ ಹಾಡು ಈಗ ಫೇಸ್ ಬುಕ್ ನಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ.

ಅದನ್ನು ನೋಡಬಯಸುವವರು, ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು. ಅಥವಾ ಫೇಸ್ ಬುಕ್ ನ ಸರ್ಚ್ ನಲ್ಲಿ voice of rama ಎಂದು ಟೈಪಿಸಿದರೆ ಈ ವಿಡಿಯೋ ಲಭ್ಯವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+