ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಬಾರದಂತೆ ಅತಿಥಿಗಳ ತಡೆದ ಪಾಕಿಸ್ತಾನಿ ಅಧಿಕಾರಿಗಳು

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಜೂನ್ 2: ಭಾರತೀಯ ಹೈಕಮಿಷನ್ ಇಸ್ಲಾಮಾಬಾದ್ ನಲ್ಲಿ ಶನಿವಾರ ಆಯೋಜಿಸಿದ್ದ ರಮ್ಜಾನ್ ನ ಇಫ್ತಾರ್ ಕೂಟದಿಂದ ಅತಿಥಿಗಳನ್ನು ಪಾಕಿಸ್ತಾನಿ ಅಧಿಕಾರಿಗಳು ದೂರ ಉಳಿಯುವಂತೆ ಮಾಡಿದ್ದಾರೆ ಎಂದು ಭಾರತದ ರಾಜತಾಂತ್ರಿಕರು ಮಾಹಿತಿ ನೀಡಿದ್ದಾರೆ. ಹೋಟೆಲ್ ಸೆರೆನಾದಲ್ಲಿ ಇಫ್ತಾರ್ ಕೂಟ ಇತ್ತು.

ಆದರೆ, ಆ ಹೋಟೆಲ್ ನ ಸುತ್ತ ಇದ್ದ ಪಾಕಿಸ್ತಾನಿ ಅಧಿಕಾರಿಗಳು ನಿರೀಕ್ಷಿಸಿದ್ದ ನೂರಾರು ಅತಿಥಿಗಳು ಬಾರದಂತೆ ಮಾಡಿದರು ಎಂದು ತಿಳಿದುಬಂದಿದೆ. ನಿನ್ನೆಯ ಇಫ್ತಾರ್ ಕೂಟಕ್ಕೆ ಬಾರದ ಉಳಿದ ಅತಿಥಿಗಳನ್ನು ನಾವು ಕ್ಷಮೆ ಕೋರುತ್ತೇವೆ. ಇಂಥ ಅಡೆತಡೆ ಮಾಡುವ ತಂತ್ರಗಳು ಬಹಳ ನಿರಾಶಾದಾಯಕ ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಹೇಳಿದ್ದಾರೆ.

ಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕ

ಇಂಥ ವರ್ತನೆಯಿಂದ ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗೆ ಹಿನ್ನಡೆ ಉಂಟು ಮಾಡಲಿದೆ ಎಂದಿದ್ದಾರೆ. ರಾಜತಾಂತ್ರಿಕ ನಡತೆ ಹಾಗೂ ನಾಗರಿಕ ಸ್ವಭಾವ ಮೂಲ ತತ್ವಗಳಿಗೆ ವಿರುದ್ಧವಾದ ನಡೆ ಇದು. ನಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ಇದರಿಂದ ಹಿನ್ನಡೆ ಆಗಲಿದೆ ಎಂದು ಹೇಳಿದ್ದಾರೆ.

Indian high commission Iftar guests turned by Pakistani officials in Islamabad

ಪಾಕಿಸ್ತಾನದ ಕೆಲವು ಅಧಿಕಾರಿಗಳು ಅತಿಥಿಗಳಿಗೆ ಇಫ್ತಾರ್ ಕೂಟಕ್ಕೆ ಭಾಗವಹಿಸದಂತೆ ಹೇಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ. ಶನಿವಾರ ನಡೆದ ಘಟನೆಯಂಥದ್ದು ಇದೇ ಮೊದಲ ಸಲವೇನಲ್ಲ. ಭಾರತೀಯ ಅಧಿಕಾರಿಗಳಿಗೆ ಈ ರೀತಿ ಮುಜುಗರ ಉಂಟಾಗುವ ಘಟನೆ ಹಲವು ಸಲ ನಡೆದಿದೆ.

'ಪಾಕಿಸ್ತಾನಕ್ಕೆ ಆಹ್ವಾನ ನೀಡದಿರಲು ಭಾರತದ 'ಆಂತರಿಕ ರಾಜಕೀಯ' ಕಾರಣ' 'ಪಾಕಿಸ್ತಾನಕ್ಕೆ ಆಹ್ವಾನ ನೀಡದಿರಲು ಭಾರತದ 'ಆಂತರಿಕ ರಾಜಕೀಯ' ಕಾರಣ'

ಪಾಕಿಸ್ತಾನವು ದೆಹಲಿಯಲ್ಲಿ ಆಯೋಜಿಸಿದ್ದ ಇಫ್ತಾರ್ ಔತಣ ಕೂಟದಲ್ಲಿ ಬರಹಗಾರರು, ಕಲಾವಿದರು ಹಾಗೂ ಪಾಕಿಸ್ತಾನಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

English summary
Indian high commission Iftar guests turned by Pakistani officials in Islamabad on Saturday evening. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X