
ಉಕ್ರೇನ್ ಮೂಲಕ ಕೊಳಕು ಬಾಂಬ್ ಭೀತಿ; ರಾಜನಾಥ್ ಸಿಂಗ್ ಜೊತೆ ಶೋಯಿಗು ಚರ್ಚೆ
ನವದೆಹಲಿ, ಅಕ್ಟೋಬರ್ 26: ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಬುಧವಾರ ತಮ್ಮ ಭಾರತೀಯ ಸಹವರ್ತಿ ರಾಜನಾಥ್ ಸಿಂಗ್ ಜೊತೆ ದೂರವಾಣಿ ಕರೆಯಲ್ಲಿ ಚರ್ಚೆ ನಡೆಸಿದರು. ಉಕ್ರೇನ್‌ನಿಂದ "ಕೊಳಕು ಬಾಂಬ್" ಅನ್ನು ಬಳಸುವ ಸಾಧ್ಯತೆಯ ಬಗ್ಗೆ ರಷ್ಯಾದ ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ನವದೆಹಲಿಯಲ್ಲಿ ಇರುವ ರಷ್ಯಾದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
"ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ಒಕ್ಕೂಟದ ರಕ್ಷಣಾ ಸಚಿವ ಸರ್ಗೆಯ್ ಶೋಯಿಗು ಜೊತೆಗೆ ಅಕ್ಟೋಬರ್ 26, 2022 ರಂದು ಅವರ ಕೋರಿಕೆಯ ಮೇರೆಗೆ ದೂರವಾಣಿ ಸಂಭಾಷಣೆ ನಡೆಸಿದರು.
ಈ ದೂರವಾಣಿ ಸಂಭಾಷಣೆ ವೇಳೆ, ಉಕ್ರೇನ್‌ನಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಇಬ್ಬರೂ ಸಚಿವರು ಚರ್ಚಿಸಿದರು. ರಕ್ಷಣಾ ಸಚಿವ ಶೋಯಿಗು ಉಕ್ರೇನ್‌ನಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ರಕ್ಷಣಾ ಸಚಿವರಿಗೆ ವಿವರಿಸಿದರು. 'ಕೊಳಕು ಬಾಂಬ್' ಬಳಕೆಯ ಮೂಲಕ ಸಂಭವನೀಯ ಪ್ರಚೋದನೆಗಳ ಬಗ್ಗೆ ಅವರ ಕಳವಳ ವ್ಯಕ್ತಪಡಿಸಿದರು," ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪರಮಾಣು ಶಸ್ತ್ರಾಸ್ತ್ರ ಬಳಕೆಗೆ ಭಾರತದ ವಿರೋಧ:
ಉಕ್ರೇನ್-ರಷ್ಯಾ ನಡುವಿನ ಸಂಘರ್ಷದ ಆರಂಭಿಕ ಪರಿಹಾರಕ್ಕಾಗಿ ಮಾತುಕತೆ ನಡೆಸುವುದು. ರಾಜತಾಂತ್ರಿಕತೆಯ ಹಾದಿಯನ್ನು ಅನುಸರಿಸುವ ಅಗತ್ಯತೆಯ ಬಗ್ಗೆ ರಾಜನಾಥ್ ಸಿಂಗ್ ಭಾರತದ ನಿಲುವನ್ನು ಪುನರುಚ್ಚರಿಸಿದರು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. "ಪರಮಾಣು ಅಥವಾ ವಿಕಿರಣ ಶಸ್ತ್ರಾಸ್ತ್ರಗಳ ಬಳಕೆ ನಿರೀಕ್ಷೆಯು ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಪರಮಾಣು ಆಯ್ಕೆಯನ್ನು ಯಾವುದೇ ಕಡೆಯಿಂದ ಆಶ್ರಯಿಸಬಾರದು ಎಂದು ರಾಜನಾಥ್ ಸಿಂಗ್ ಸೂಚಿಸಿದರು," ಎಂದು ಅದು ಹೇಳಿದೆ.
ನ್ಯಾಟೋ ರಾಷ್ಟ್ರಗಳ ಸಚಿವರೊಂದಿಗೆ ಕರೆ:
ನ್ಯಾಟೋ ರಾಷ್ಟ್ರ ರಕ್ಷಣಾ ಸಚಿವರೊಂದಿಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾದ ಸಚಿವ ಶೋಯಿಗು ಭಾನುವಾರದಿಂದ ಹಲವಾರು ಫೋನ್ ಕರೆಗಳನ್ನು ಮಾಡಿದ್ದಾರೆ. ಉಕ್ರೇನ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ ವಿಕಿರಣಶೀಲ "ಕೊಳಕು ಬಾಂಬ್" ಅನ್ನು ಬಳಸಲು ತಯಾರಿ ನಡೆಸುತ್ತಿದೆ ಎಂಬ ರಷ್ಯಾದ ಆರೋಪವನ್ನು ತಿರಸ್ಕರಿಸಿದೆ ಮತ್ತು ಮಾಸ್ಕೋ ಯುದ್ಧದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲು ನೆಪವಾಗಿ ಇದನ್ನು ಬಳಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಉಕ್ರೇನ್ ವಿರುದ್ಧ ಕೊಳಕು ಬಾಂಬ್ ಸ್ಫೋಟಿಸುವ ಆರೋಪ:
ವಿಕಿರಣಶೀಲ ಮಾಲಿನ್ಯಕಾರಕಗಳೊಂದಿಗೆ "ಕೊಳಕು ಬಾಂಬ್" ಅನ್ನು ಸ್ಫೋಟಿಸಲು ಉಕ್ರೇನ್ ಉದ್ದೇಶಿಸಿದೆ ಎಂದು ನಂಬಿರುವ ಅಂತರಾಷ್ಟ್ರೀಯ ಸಮುದಾಯಕ್ಕೆ ಪ್ರಕರಣವನ್ನು "ತೀವ್ರವಾಗಿ" ಮುಂದುವರಿಸುವುದಾಗಿ ಕ್ರೆಮ್ಲಿನ್ ಹೇಳಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ಮಾಸ್ಕೋ ಅಂತರರಾಷ್ಟ್ರೀಯ ಸಮುದಾಯದಿಂದ ಸಕ್ರಿಯ ಪ್ರತಿಕ್ರಿಯೆಯನ್ನು ಪ್ರೇರೇಪಿಸಲು ಬಯಸಿದೆ ಎಂದು ಹೇಳಿದರು.