ಮೀನಾಕ್ಷಿ-ವಿಷ್ಣು ಸಾವಿನ ಆಟಾಪ್ಸಿ ವರದಿಯಲ್ಲಿದೆ ಬೇರೆಯದೇ ಕತೆ!

ಕ್ಯಾಲಿಫೋರ್ನಿಯಾ, ಜನವರಿ 24: ಕಳೆದ ಅಕ್ಟೋಬರ್ ನಲ್ಲಿ ಸೆಲ್ಫಿ ಹುಚ್ಚಿಗೆ ಬಲಿಯಾದ ಭಾರತೀಯ ಮೂಲದ ದಂಪತಿಯ ಸಾವು ಹೊಸ ತಿರುವು ಪಡೆದಿದೆ.

ಸಾಯುವ ಮುನ್ನ ವಿಷ್ಣು ಮತ್ತು ಮೀನಾಕ್ಷಿ ಇಬ್ಬರೂ ಮದ್ಯ ಸೇವನೆ ಮಾಡಿದ್ದರು ಎಂದು ಅಟಾಪ್ಸಿ ವರದಿ ತಿಳಿಸಿದೆ. ಸುಮಾರು 800 ಅಡಿ ಎತ್ತರದ ಪರ್ವತದಿಂದ ಬಿದ್ದಿದ್ದರಿಂದ ಇಬ್ಬರ ದೇಹವೂ ಗುರುತಿಸದ ಸ್ಥಿತಿಯಲ್ಲಿದ್ದರಿಂದ, ದೇಹದಲ್ಲಿ ಆಲ್ಕೋಹಾಲ್ ಪ್ರಮಾಣ ಎಷ್ಟಿತ್ತು ಎಂಬ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ.

ತಮಿಳುನಾಡಿನ ತಿರುಚಿಯ ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಎಂಬ ದಂಪತಿ ಕಳೆದ ನಾಲ್ಕು ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ವಾಸವಿದ್ದರು. ಪ್ರವಾಸವೆಂದರೆ ಹುಚ್ಚು ಹಿಡಿವಷ್ಟು ಇಷ್ಟಪಡುತ್ತಿದ್ದ ಈ ದಂಪತಿ ಸದಾ ಸಾಹಸದ ಪ್ರದೇಶಗಳಿಗೆ ತೆರಳಿ ಸಂಭ್ರಮಿಸುತ್ತಿದ್ದರು.

ಏನಿದು ಘಟನೆ?

ಏನಿದು ಘಟನೆ?

ಕಳೆದ ಅಕ್ಟೋಬರ್ ನಲ್ಲಿ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಗೆ ತೆರಳಿದ್ದ ದಂಪತಿ 800 ಅಡಿ ಎತ್ತರದಿಂದ ಬಿದ್ದು ಮೃತರಾಗಿದ್ದರು. ಅವರ ಸಾವಿಗೆ ಸೆಲ್ಫಿ ಹುಚ್ಚೇ ಕಾರಣ ಎನ್ನಲಾಗಿತ್ತು. ಅ.25 ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.

ಜೋಡಿಹಕ್ಕಿ

ಜೋಡಿಹಕ್ಕಿ

ವಿಷ್ಣು ವಿಶ್ವನಾಥ್ ಅವರು ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತಿ-ಪತ್ನಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿ ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದರು. ಇಬ್ಬರೂ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಮದುವೆಯ ನಂತರ ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದ ದಂಪತಿ ಪ್ರತಿ ವಾರಾಂತ್ಯವೂ ಪ್ರವಾಸಕ್ಕೆ ತೆರಳುವ ಪರಿಪಾಠ ಇಟ್ಟುಕೊಂಡಿದ್ದರು.

ಸೆಲ್ಫಿ ಬಗ್ಗೆ ಎಚ್ಚರಿಕೆ ನೀಡಿದ್ದ ಮೀನಾಕ್ಷಿ

ಸೆಲ್ಫಿ ಬಗ್ಗೆ ಎಚ್ಚರಿಕೆ ನೀಡಿದ್ದ ಮೀನಾಕ್ಷಿ

ತಾವು ಸಾಯುವ ಒಂದು ತಿಂಗಳ ಹಿಂದಷ್ಟೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸೆಲ್ಫಿ ಹುಚ್ಚಿನ ಬಗ್ಗೆ ಬರೆದುಕೊಂಡಿದ್ದ ಮೀನಾಕ್ಷಿ, 'ನಾವೆಲ್ಲರೂ ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದೇವೆ. ಆದರೆ ಆಯಕಟ್ಟಿನ, ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರ ದುರಂತದ ಬಗ್ಗೆ ನಮಗೆ ಅರಿವಿಲ್ಲ. ಗಾಳಿಯ ಪ್ರಚಂಡ ಶಕ್ತಿಯ ಬಗ್ಗೆ ಗೊತ್ತೆ? ನಮ್ಮ ಜೀವಕ್ಕಿಂತ ಒಂದು ಫೋಟೋ ಹೆಚ್ಚೇ?' ಎಂದು ಮೀನಾಕ್ಷಿ ಪ್ರಶ್ನಿಸಿದ್ದರು. ಆದರೆ ಅದೇ ಒಂದು ಫೋಟೋ ಹುಚ್ಚಿಗೆ ಅವರೇ ಬಲಿಯಾಗಿದ್ದರು!

ಅಟಾಪ್ಸಿ ವರದಿ

ಅಟಾಪ್ಸಿ ವರದಿ

ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಗೆ ಪ್ರವಾಸಕ್ಕೆ ತೆರಳಿದ್ದವರಲ್ಲಿ ಇದುವರೆಗೂ ಯಾರೂ ಬಿದ್ದಿರಲಿಲ್ಲ. ಸಾಕಷ್ಟು ಸುರಕ್ಷತಾ ಕಾರ್ಯಕ್ರಮಗಳ ಹೊರತಾಗಿಯೂ ದಂಪತಿ ಮೇಲಿನಿಂದ ಬಿದ್ದಿದ್ದು ಹೇಗೆ ಎಂಬುದು ಕುತೂಹಲ ಕೆರಳಿಸಿತ್ತು. ಆದರೆ ಇದೀಗ ಅಟಾಪ್ಸಿ ವರದಿಯಿಂದಾಗಿ, ದಂಪತಿ ಮದ್ಯಪಾನ ಮಾಡಿದ್ದರಿಂದ ಸ್ಥಿಮಿತ ಕಳೆದುಕೊಂಡು ಪರ್ವತದಿಂದ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+