ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಅಕ್ಷಯ್‌ಗೆ 'ಗಣಿತದ ನೊಬೆಲ್' ಫೀಲ್ಡ್ಸ್ ಮೆಡಲ್ಸ್ ಗೌರವ

|
Google Oneindia Kannada News

ಬೆಂಗಳೂರು, ಆಗಸ್ಟ್ 2: ಗಣಿತದ ನೊಬೆಲ್ ಎಂದೇ ಕರೆಯಲಾಗುವ ಪ್ರತಿಷ್ಠಿತ ಫೀಲ್ಡ್ಸ್ ಮೆಡಲ್‌ಗೆ ಭಾರತ ಮೂಲದ ಆಸ್ಟ್ರೇಲಿಯನ್ ಗಣಿತಜ್ಞ ಅಕ್ಷಯ್ ವೆಂಕಟೇಶ್ ಆಯ್ಕೆಯಾಗಿದ್ದಾರೆ.

40 ವರ್ಷ ಒಳಗಿನ ಗಣಿತ ಶಾಸ್ತ್ರಜ್ಞರಿಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಫೀಲ್ಡ್ಸ್ ಮೆಡಲ್ ನೀಡಲಾಗುತ್ತದೆ. ಅಕ್ಷಯ್ ಅವರಲ್ಲದೆ, ಇನ್ನೂ ಮೂವರಿಗೆ ಈ ಗೌರವ ಒಲಿದಿದೆ.

ಬರ್ಮುಡಾ ಟ್ರಯಾಂಗಲ್ 'ಭಯಾನಕ ರಹಸ್ಯ' ಕೊನೆಗೂ ಬಯಲು?ಬರ್ಮುಡಾ ಟ್ರಯಾಂಗಲ್ 'ಭಯಾನಕ ರಹಸ್ಯ' ಕೊನೆಗೂ ಬಯಲು?

ದೆಹಲಿಯಲ್ಲಿ ಜನಿಸಿದ ಅಕ್ಷಯ್ (36) ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದಾರೆ. ಗಣಿತ ಲೋಕಕ್ಕೆ ನೀಡಿದ ಅಗಾಧ ಕೊಡುಗೆಯನ್ನು ಪರಿಗಣಿಸಿದ ಅವರನ್ನು ಫೀಲ್ಡ್ಸ್ ಮೆಡಲ್ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

indian australian akshay venkatesh wins fields medal

ರಿಯೊ ಡಿ ಜನೈರೋದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಗಣಿತಶಾಸ್ತ್ರಜ್ಞರ ಸಮ್ಮೇಳನದಲ್ಲಿ ಅವರಿಗೆ ಪದಕಗಳನ್ನು ವಿತರಿಸಿ ಗೌರವಿಸಲಾಯಿತು.

ಇರಾನ್ ಮೂಲದ ಕುರ್ದಿಶ್ ಗಣಿತಜ್ಞ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಕೌಷರ್ ಬಿರ್ಕಾರ್, ಜರ್ಮನಿಯ ಪೀಟರ್ ಶೋಲ್ಜ್ ಮತ್ತು ಇಟಲಿಯ ಅಲೆಸ್ಸಿಯೊ ಫಿಗಲ್ಲಿ ಈ ಗೌರವಕ್ಕೆ ಪಾತ್ರರಾದ ಇತರೆ ಮೂವರು.

ಪ್ರತಿ ಪುರಸ್ಕೃತರು ಪದಕದ ಜತೆಗೆ 15,000 ಕೆನಡಾ ಡಾಲರ್ ಹಣವನ್ನು ನಗದು ಬಹುಮಾನವಾಗಿ ಪಡೆದುಕೊಂಡರು.

ಸಿರಿವಂತ ಅರಬ್ಬಿಗಳು ಈಗ ರಸ್ತೆಯಲ್ಲಿ ಬರ್ಗರ್ ಮಾರೋದಕ್ಕೂ ಸೈಸಿರಿವಂತ ಅರಬ್ಬಿಗಳು ಈಗ ರಸ್ತೆಯಲ್ಲಿ ಬರ್ಗರ್ ಮಾರೋದಕ್ಕೂ ಸೈ

ಅಕ್ಷಯ್ ಅವರಿಗೆ ಎರಡು ವರ್ಷವಾಗಿದ್ದಾಗ ಅವರ ಪೋಷಕರು ದೆಹಲಿಯಿಂದ ಆಸ್ಟ್ರೇಲಿಯಾದ ಪರ್ತ್‌ಗೆ ಸ್ಥಳಾಂತರಗೊಂಡಿದ್ದರು.

ಗಣಿತದ ಕುರಿತ ಅಧ್ಯಯನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅಕ್ಷಯ್, ಹೈಸ್ಕೂಲು ವಿದ್ಯಾರ್ಥಿಗಳಿಗೆ ನಡೆದ ಫಿಸಿಕ್ಸ್ ಮತ್ತು ಗಣಿತ ಒಲಿಂಪಿಯಾಡ್‌ಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. ಆಗಿನ್ನೂ ಅವರ ವಯಸ್ಸು 11.

1997ರಲ್ಲಿ ಗಣಿತಶಾಸ್ತ್ರದ ಪದವಿ ಪಡೆದ ಅಕ್ಷಯ್, 2002ರಲ್ಲಿ 20ನೇ ವಯಸ್ಸಿಗೇ ಪಿಎಚ್.ಡಿ ಪದವಿ ಪಡೆದರು. ಗಣಿತ ವಿಭಾಗದಲ್ಲಿ ಸಾಕಷ್ಟು ಅಧ್ಯಯನಗಳನ್ನು ನಡೆಸಿರುವ ಅವರು, ಅಸ್ಟ್ರೊವ್‌ಸ್ಕಿ ಪ್ರಶಸ್ತಿ, ಇನ್ಫೊಸಿಸ್ ಪ್ರಶಸ್ತಿ, ಸಲೇಂ ಪ್ರಶಸ್ತಿ ಹಾಗೂ ಸಸ್ತ್ರಾ ರಾಮಾನುಜನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

English summary
Indian Australian Mathematician Akshay Venkatesh has won Fields medal, regarded as the Nobel prize for maths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X