ಚಿತ್ರ ಸುದ್ದಿ: ಕ್ಯಾಲಿಫೋರ್ನಿಯಾ ಗವರ್ನರ್ ಸ್ಥಾನಕ್ಕೆ ಕಾಶ್ಮೀರಿ

ಬೆಂಗಳೂರು, ಜ.21 : ಅಮೆರಿಕದ ಮಾಜಿ ಹಣಕಾಸು ಅಧಿಕಾರಿ,2008ರಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸೂಚಿಸಿದ ಕಾಶ್ಮೀರ ಮೂಲದ ಅಮೆರಿಕನ್ ನೀಲ್ ಕಶ್ಕರಿ ಅವರು ಈಗ ಕ್ಯಾಲಿಫೋರ್ನಿಯದ ಗವರ್ನರ್ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ತಾನು ಗವರ್ನರ್ ಆಗಿ ಆಯ್ಕೆಯಾದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಮಾಡಲಿರುವುದಾಗಿ ಅವರು ವಾಗ್ದಾನ ನೀಡಿದ್ದಾರೆ. ಜನತೆಗೂ ನೀಲ್ ಅವರ ಮೇಲೆ ಅಪಾರ ನಂಬಿಕೆಯಿದೆ.

'ಉತ್ತಮ ಶಿಕ್ಷಣದ ಪ್ರಯೋಜನಗಳು ಹಾಗೂ ಅದು ಸೃಷ್ಟಿಸುವ ವ್ಯಾಪಕ ಅವಕಾಶಗಳು ಕ್ಯಾಲಿಫೋರ್ನಿಯದ ಲಕ್ಷಾಂತರ ನಾಗರಿಕರನ್ನು ತಲುಪುತ್ತಿಲ್ಲ. ಈ ಕಾರಣಕ್ಕಾಗಿ ನಾನು ಕ್ಯಾಲಿಫೋರ್ನಿಯದ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಉದ್ಯೋಗ ಸೃಷ್ಟಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ನನ್ನ ಉದ್ದೇಶವಾಗಿದೆ. ಇದು ನನ್ನ ಯೋಜನೆಯ ತಳಹದಿಯಾಗಿದೆ' ಎಂದು ರಿಪಬ್ಲಿಕನ್ ಸದಸ್ಯ 40ರ ಹರೆಯದ ನೀಲ್ ಕಶ್ಕರಿ ಕ್ಯಾಲಿಫೋರ್ನಿಯ ಸ್ಟೇಟ್ ಯೂನಿವರ್ಸಿಟಿಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವೊಂದರಲ್ಲಿ ಇತ್ತೀಚೆಗೆ ಹೇಳಿದ್ದಾರೆ.

ಉಳಿದಂತೆ ಇಂದಿನ ಚಿತ್ರಗಳಲ್ಲಿ ಸುದ್ದಿಯಲ್ಲಿ ಗುವಾಹಟಿಯ ಫ್ಯಾಷನ್ ಶೋನಲ್ಲಿ ಬಿಪಾಶಾ ಬಸು, ಕಾಶ್ಮೀರದ ತಂಪು ಹವೆ, ಬಿಕಾನೇರ್ ನಲ್ಲಿ ಉರುಳಿಬಿದ್ದ ಜಾಗ್ವರ್ ವಿಮಾನ, ಗಣತಂತ್ರ ದಿನಕ್ಕಾಗಿ ತಯಾರಿ ಎಲ್ಲವೂ ಇದೆ

ಗುವಾಹಟಿಯಲ್ಲಿ ಬಾಲಿವುಡ್ ತಾರೆ ಬಿಪಾಶಾ

ಗುವಾಹಟಿಯಲ್ಲಿ ಬಾಲಿವುಡ್ ತಾರೆ ಬಿಪಾಶಾ

ಗುವಾಹಟಿಯಲ್ಲಿ ನಡೆದ ರುದ್ರಾಕ್ಷ ನಾರ್ಥ್ ಈಸ್ಟ್ ಹೆಸರಿನ ಫ್ಯಾಷನ್ ಶೋನಲ್ಲಿ ಭಾಗವಹಿಸಿದ ಬಾಲಿವುಡ್ ತಾರೆ ಬಿಪಾಶಾ ಬಸು

ಪೊಲಾರೀಸ್ ಇಂಡಿಯಾ ಹೊಸ ಬೈಕಿನೊಂದಿಗೆ

ಪೊಲಾರೀಸ್ ಇಂಡಿಯಾ ಹೊಸ ಬೈಕಿನೊಂದಿಗೆ

ಪೊಲಾರೀಸ್ ಇಂಡಿಯಾ ಹೊಸ ಬೈಕಿನೊಂದಿಗೆ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಅವರು ಯುಎಸ್ ಸೂಪರ್ ಬೈಕ್ ಬ್ರಾಂಡ್ ಇಂಡಿಯನ್ ಜತೆ

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿನ ದೃಶ್ಯ

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿನ ದೃಶ್ಯ

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಮಡಿಕೆ ಹೊತ್ತು ನಡೆಯುತ್ತಿರುವ ದಕ್ಷಿಣ ಕಾಶ್ಮೀರದ ಯುವತಿ

ರೋಜರ್ ಫೆಡರರ್ ಅಮೋಘ ಗೆಲುವು

ರೋಜರ್ ಫೆಡರರ್ ಅಮೋಘ ಗೆಲುವು

ಆಸ್ಟ್ರೇಲಿಯನ್ ಓಪನ್ ನಲ್ಲಿ ಆಂಡಿ ಮರ್ರೆ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ ಗೆಲುವು ಸಾಧಿಸಿದ ಸ್ವಿಸ್ ದೇಶದ ರೋಜರ್ ಫೆಡರರ್

ಮರಳು ಶಿಲ್ಪಿಯಿಂದ ನೇತಾಜಿಗೆ ನಮನ

ಮರಳು ಶಿಲ್ಪಿಯಿಂದ ನೇತಾಜಿಗೆ ನಮನ

ಪುರಿಯ ಮರಳು ಶಿಲ್ಪಿ ಮನಸ್ ಸಾಹೂ ಅವರಿಂದ ನೇತಾಜಿ ಹುಟ್ಟುಹಬ್ಬಕ್ಕೆ ನಮನ

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ರೈಲು

ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ರೈಲು

ಕಾಶ್ಮೀರದ ದಕ್ಷಿಣ ಭಾಗದ ಅನಂತ್ ನಾಗ್ ಜಿಲ್ಲೆಯ ರೈಲು ನಿಲ್ದಾಣದಲ್ಲಿ ರೈಲೊಂದು ಹಿಮಾವೃತವಾಗಿದೆ. ರೈಲ್ವೆ ಪೊಲೀಸ್ ಗಾರ್ಡ್ ನೋಡುತ್ತಾ ನಿಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+