ಉಡುಪಿಯ ಮೀರಾ ಅಮೆರಿಕದ 'ಮಹಾಶಿಕ್ಷಕಿ'

ಮೀರಾ ಅವರಿಗೆ $250,000 ನಗದು ಬಹುಮಾನ ಹಾಗೂ ಹೆಚ್ಚುವರಿಯಾಗಿ $25,000 ಮೊತ್ತ ಅವರು ಕಾರ್ಯನಿರ್ವಹಿಸುತ್ತಿರುವ ಮಿಸ್ಸೌರಿ ವಿಶ್ವವಿದ್ಯಾಲಯದ ವಿಭಾಗಕ್ಕೆ ಸಿಗಲಿದೆ. 2015ರಲ್ಲಿ ಟೆಕ್ಸಾಸ್ ಕ್ರಿಶ್ಚಿಯನ್ ವಿವಿಯಲ್ಲಿ ಮೀರಾ ಅವರು ಉಪನ್ಯಾಸ ನೀಡಲಿದ್ದಾರೆ.
ಕರ್ನಾಟಕದ ಉಡುಪಿಯ ಎಂ.ಜಿ.ಎಂ ಕಾಲೇಜಿನಿಂದ ಬಿಎಸ್ ಸಿ ಡಿಗ್ರಿ ಪಡೆದಿರುವ ಮೀರಾ ಅವರು ಚೆನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂ.ಎಸ್ ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ(1976) ಗಳಿಸಿದ್ದಾರೆ. ಪಶ್ಚಿಮ ಜರ್ಮನಿಯ ಮ್ಯಾಕ್ಸ್ ಪ್ಲಾಂಟ್ ಇನ್ಸ್ಟ್ಯೂಟ್ ನಿಂದ ಫೆಲೋಶಿಫ್ ಪಡೆದಿದ್ದರು. 1978ರಲ್ಲಿ ಮಿಸ್ಸೌರಿ ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ಮೀರಾ ಅವರು ಇಂದಿಗೂ ಭೌತ ವಿಜ್ಞಾನ ಹೇಳಿಕೊಡುತ್ತಿದ್ದಾರೆ.
ಸೆಮಿಕಂಡಕ್ಟರ್ ಗಳ ಆಪ್ಟಿಕಲ್ ಸ್ಪೆಕ್ಟ್ರೋಸ್ಕೋಪಿ, ಸೂಪರ್ ವಾಹಕಗಳು, ಕಾಂಜುಗೇಟೆಡ್ ಪಾಲಿಮಾರ್ಸ್ ಮುಂತಾದ ಕ್ಷೇತ್ರಗಳ ಮೇಲೆ ಸಂಶೋಧನೆ ನಡೆಸಿದ್ದಾರೆ. ಯುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವುದರಲ್ಲಿ ಪ್ರೊ. ಮೀರಾ ಅವರ ಕೊಡುಗೆ ಅಪಾರ.












Click it and Unblock the Notifications