ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಸೆನೆಟ್ ಗೆ ಭಾರತ ಮೂಲದ ಕಮಲಾ ಆಯ್ಕೆ

By Prithviraj
|
Google Oneindia Kannada News

ನ್ಯೂಯಾರ್ಕ್, ನವೆಂಬರ್, 9: ಕ್ಯಾಲಿಫೋರ್ನಿಯಾ ರಾಜ್ಯದ ಅಟಾರ್ನಿ ಜನರಲ್ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಬುಧವಾರ ಅಮೆರಿಕ ಸೆನೆಟ್ ಗೆ ಆಯ್ಕೆಯಾಗಿದ್ದಾರೆ.

ಕಮಲಾ ಅವರ ಆಯ್ಕೆ ಐತಿಹಾಸಿಕ ಜಯವಾಗಿದ್ದು, ಅಮೆರಿಕ ಸೆನೆಟ್ ಗೆ ಆಯ್ಕೆಯಾದ ಭಾರತ ಮೂಲದ ಮೊದಲ ಸೆನೆಟರ್ ಎಂಬ ಹೆಗ್ಗಳಿಕೆಗೆ ಕಮಲಾ ಅವರು ಪಾತ್ರರಾಗಿದ್ದಾರೆ.

51 ವರ್ಷದ ಕಮಲಾ ಅವರು ಕ್ಯಾಲಿಫೋರ್ನಿಯಾದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರತಿಸ್ಪರ್ಧಿ ಲೊರೆಟ್ಟಾ ಸಾಂಕೆಜ್ ಅವರನ್ನು ಅವರ ವಿರುದ್ಧ ಅಭೂತಪೂರ್ವ ಜಯ ದಾಖಲಿಸಿದ್ದಾರೆ.

Indian-American Kamala Harris wins U.S. Senate seat

ಕಳೆದ ಎರಡು ದಶಕಗಳ ಅವಧಿಯಲ್ಲಿ ಅಮೆರಿಕದ ಮೇಲ್ಮನೆಗೆ ಆಯ್ಕೆಯಾದ ಮೊದಲ ಕರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಅವರು ಪಾತ್ರರಾಗಿದ್ದಾರೆ.

ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಚೆನ್ನೈನಿಂದ ಅಮೆರಿಕಾಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದರು. ಅವರ ತಂದೆ ಡೊನಾಲ್ಡ್ ಗ್ರೂ ಅವರು ಜಮೈಕಾ ಮೂಲದವರಾಗಿದ್ದಾರೆ.

ಕಮಲಾ ಅವರು ಕ್ಯಾಲಿಫೋರ್ನಿಯಾದ ಓಕ್ ಲ್ಯಾಂಡ್ ನಲ್ಲಿ ಜನಿಸಿದವರಾಗಿದ್ದು, ಕಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.

2014ರಲ್ಲಿ ಸೆನೆಟ್ ಆಯ್ಕೆಯಾಗಿದ್ದ ಬಾರ್ಬಾರ ಬಾಕ್ಸರ್ ಅವರಿಮದ ತೆರವಾಗುವು ಸ್ಥಾನವನ್ನು ಕಮಲಾ ಅವರು ಅಲಂಕರಿಸಲಿದ್ದಾರೆ.

English summary
California’s Attorney General Kamala Harris on Wednesday scripted history as she won the U.S. Senate seat from the state, becoming the first Indian-American to achieve the feat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X