ಅಮೆರಿಕಾದ 'ಸ್ಪೆಲ್ಲಿಂಗ್ ಬೀ' ಸ್ಪರ್ಧೆ ಗೆದ್ದ ಭಾರತೀಯ ಮೂಲದ ಅನನ್ಯ
ವಾಷಿಂಗ್ಟನ್, ಜೂನ್ 2: ಅಮೆರಿಕಾದ ಪ್ರತಿಷ್ಠಿತ 'ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ' ಚಾಂಪಿಯನ್ ಶಿಪ್ ನಲ್ಲಿ ಮತ್ತೆ ಭಾರತೀಯ ಮೂಲದವರು ಪಾರಮ್ಯ ಮೆರೆದಿದ್ದಾರೆ. ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿ ವಾಸವಾಗಿರುವ ಅನನ್ಯ ವಿನಯ್ ಸ್ಪೆಲ್ಲಿಂಗ್ ಬೀ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.
ಅಮೆರಿಕಾ ರಾಜಧಾನಿ ವಾಷಿಂಗ್ಟನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯಿಯಾಗುವ ಮೂಲಕ ಅನನ್ಯ ಸುಮಾರು 25 ಲಕ್ಷ ಮೊತ್ತದ (40,000 ಡಾಲರ್) ಪ್ರಶಸ್ತಿಯನ್ನೂ ಬಾಚಿಕೊಂಡಿದ್ದಾಳೆ.

ಫೈನಲ್ ಸುತ್ತಿನಲ್ಲಿ marocain ಪದದ ಸ್ಪೆಲ್ಲಿಂಗನ್ನು ಸರಿಯಾಗಿ ಹೇಳುವ ಮೂಲಕ ಈಕೆ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ಪ್ರಶಸ್ತಿ ಗೆದ್ದ ನಂತರ ಪ್ರತಿಕ್ರಿಯೆ ನೀಡಿದ ಅನನ್ಯ, "ನನ್ನ ಕನಸು ನನಸಾಗಿದೆ. ಸದ್ಯಕ್ಕೆ ನಾನು ಖುಷಿಯಾಗಿದ್ದೇನೆ," ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಮೆರಿಕಾ ಎಲ್ಲಾ 50 ರಾಜ್ಯಗಳ 6-15 ವರ್ಷ ವಯಸ್ಸಿನ 1.1 ಕೋಟಿ ಮಕ್ಕಳು ಈ ಬಾರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅವರನ್ನೆಲ್ಲಾ ಹಿಂದಿಕ್ಕಿ ಅನನ್ಯ ಈ ಸಾಧನೆ ಮಾಡಿದ್ದಾರೆ.












Click it and Unblock the Notifications