ಭಾರತದ ವಿರುದ್ದ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅಧಿಕ ಪ್ರಸಂಗತನದ ಹೇಳಿಕೆ

ಕರಾಚಿ, ನ 13: ಭಾರತದ ಕೆಲವು ರಾಜಕಾರಣಿಗಳಂತೆ ಸದಾ ವಿವಾದ ಹುಟ್ಟುಹಾಕುವ, ಹರಕು ಬಾಯಿಯ ಪಾಕಿಸ್ತಾನದ ಆಸಾಮಿಯೆಂದರೆ ಮಾಜಿ ಪಾಕ್ ಕ್ರಿಕೆಟ್ ನಾಯಕ ಜಾವೇದ್ ಮಿಯಾಂದಾದ್.

ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಹತ್ತಿರದ ನೆಂಟನಾಗಿರುವ ಮಿಯಾಂದಾದ್, ತನ್ನ ಕ್ರಿಕೆಟ್ ಜೀವನದ ನಿವೃತ್ತಿಯ ಮೊದಲು ಮತ್ತು ನಂತರವೂ ಭಾರತದ ವಿರುದ್ದ ವಿಷ ಕಕ್ಕುವ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾನೆ.

ಪಾಕ್ ವಿರುದ್ದದ ಕ್ರಿಕೆಟ್ ಸರಣಿಯ ರದ್ದಾದ ನಂತರ, ಭಾರತದ ಕ್ರಿಕೆಟಿಗರ ತಾಕತ್ತಿನ ಬಗ್ಗೆ ಮಾತಾನಾಡಿದ್ದ ಮಿಯಾಂದಾದ್, ಈಗ ಭಾರತ ಇಬ್ಭಾಗವಾಗುತ್ತೆ ಮತ್ತು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ.

ಸ್ಥಳೀಯ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಮಿಯಾಂದಾದ್, ಸದ್ಯದಲ್ಲೇ ಭಾರತ ಛಿದ್ರಛಿದ್ರವಾಗಲಿದೆ ಮತ್ತು ಮೋದಿಯೊಬ್ಬ ಹಿಟ್ಲರ್ ಎಂದು ಅಧಿಕ ಪ್ರಸಂಗತನದ ಹೇಳಿಕೆ ನೀಡಿದ್ದಾನೆ.

ಮೊದಲು ತನ್ನ ದೇಶದ ಆಂತರಿಕ ಸಮಸ್ಯೆ, ಉಗ್ರ ಚಟುವಟಿಕೆಯ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಈಗಿನ ಭಾರತವನ್ನು ಎರಡನೇ ಮಹಾಯುದ್ದ ಕಾಲದಲ್ಲಿನ ಜರ್ಮನಿಗೆ ಹೋಲಿಸಿದ್ದಾನೆ.

ಭಾರತಕ್ಕೆ ಹೆಸರು ಬಂದಿರುವುದೇ ಶಾರೂಖ್, ಸಲ್ಮಾನ್ ಅವರಿಂದ.. ಮುಂದೆ ಓದಿ..

ಭಾರತದಲ್ಲಿ ಅಸಹಿಷ್ಣುತೆ

ಭಾರತದಲ್ಲಿ ಅಸಹಿಷ್ಣುತೆ

ಸ್ಥಳೀಯ ವಾಹಿನಿಯು ದಾವೂದ್ ಸಂಬಂಧಿಯಾಗಿರುವ ಮಿಯಾಂದಾದ್ ನನ್ನು (ದಾವೂದ್ ಮಗಳನ್ನು ಮಿಯಾಂದಾದ್ ಮಗ ವರಿಸಿದ್ದು) ಚೋಟಾ ರಾಜನ್ ಬಂಧನದ ನಂತರ ನಡೆಸಿದ ಸಂದರ್ಶನದಲ್ಲಿ, ಭಾರತದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿತ್ತಿದೆ. ಮುಸ್ಲಿಂ ಸಮುದಾಯದವರನ್ನು ಹೀನಾಯವಾಗಿ ನೋಡಲಾಗುತ್ತಿದೆ ಎಂದು ಮಿಯಾಂದಾದ್ ಹೇಳಿದ್ದಾನೆ.

ಪ್ರಧಾನಿ ಮೋದಿ ಹಿಟ್ಲರ್

ಪ್ರಧಾನಿ ಮೋದಿ ಹಿಟ್ಲರ್

ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿದ್ದ ಜರ್ಮನಿ ದೇಶವನ್ನು ಭಾರತಕ್ಕೆ ಹೋಲಿಸಿರುವ ಮಿಯಾಂದಾದ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಅಡಾಫ್ ಹಿಟ್ಲರಿಗೆ ಹೋಲಿಸಿದ್ದಾನೆ.

ಇಂಡಿಯಾ ಪೀಸ್.. ಪೀಸ್

ಇಂಡಿಯಾ ಪೀಸ್.. ಪೀಸ್

ಭಾಷೆ, ಧರ್ಮ ಮತ್ತು ಜಾತಿಯ ವಿಚಾರದಲ್ಲಿ ಹಿಂದೂಸ್ಥಾನ್ ಸದ್ಯದಲ್ಲೆ ಪೀಸ್ ಪೀಸ್ ಆಗಲಿದೆ. ಸಣ್ಣ ಸಣ್ಣ ರಾಷ್ಟ್ರವಾಗಿ 54 ದೇಶವಾಗಿ ವಿಭಜನೆಯಾಗಬಹುದು ಎಂದು ಮಿಯಾಂದಾದ್ ವ್ಯಂಗ್ಯವಾಡಿದ್ದಾನೆ.

ಎಷ್ಟು ರಾಷ್ಟ್ರವಾಗಿ ವಿಭಜನೆ

ಎಷ್ಟು ರಾಷ್ಟ್ರವಾಗಿ ವಿಭಜನೆ

ಭಾರತದ ವಿರುದ್ದ ತನ್ನ ಹೇಟ್ ಸ್ಪೀಚ್ ಮುಂದುವರಿಸುತ್ತಾ ಮಿಯಾಂದಾದ್, ಸಿಖ್ಖರು ಸದ್ಯದಲ್ಲೇ ಪ್ರತ್ಯೇಕ ದೇಶಕ್ಕಾಗಿ ಬೇಡಿಕೆ ಇಡಲಿದ್ದಾರೆ. ಭಾರತ ಒಟ್ಟಾರೆಯಾಗಿ ಎಷ್ಟು ರಾಷ್ಟ್ರವಾಗಿ ವಿಭಜನೆಯಾಗಲಿದೆ ಎನ್ನುವುದೇ ಕುತೂಹಲವಿರುವ ಸಂಗತಿ ಎಂದು ತಮಾಷೆಯಾಡಿದ್ದಾನೆ.

ಭಾರತಕ್ಕೆ ಹೆಸರು ಇರುವುದೇ ಖಾನ್ ಗಳಿಂದ

ಭಾರತಕ್ಕೆ ಹೆಸರು ಇರುವುದೇ ಖಾನ್ ಗಳಿಂದ

ಬಾಲಿವುಡ್ ಬಾದಶಾ ಶಾರೂಖ್ ಖಾನ್ ಅವರಿಗೆ ಭಾರತದಲ್ಲಿ ಅವಮರ್ಯಾದೆಯಾಗುತ್ತಿದೆ. ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರಿಂದಲೇ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಈ ಹೆಸರು ಬಂದಿರುವುದು ಎಂದು ಮಿಯಾಂದಾದ್ ಹೇಳಿದ್ದಾನೆ.

ಭಾರತಕ್ಕೆ ಸೋಲಿನ ಭೀತಿ

ಭಾರತಕ್ಕೆ ಸೋಲಿನ ಭೀತಿ

ಬಿಸಿಸಿಐ ಇತ್ತೀಚೆಗೆ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಸರಣಿ ರದ್ದುಪಡಿಸಿದ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ಮಿಯಾಂದಾದ್, ಭಾರತಕ್ಕೆ ಪಾಕಿಸ್ತಾನದ ವಿರುದ್ದ ಸೋಲಿನ ಭೀತಿಯಿದೆ. ಅದಕ್ಕಾಗಿಯೇ ಬಿಸಿಸಿಐ ಕ್ರಿಕೆಟ್ ಸರಣಿ ರದ್ದು ಪಡಿಸಿದ್ದು ಎಂದು ವಿವಾದಕಾರಿ ಹೇಳಿಕೆ ನೀಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+