Donald Trump: ಅಮೆರಿಕ ಜೊತೆ ಭಾರತದ ವ್ಯಾಪಾರ ಮಾತುಕತೆ, ಆರ್ಥಿಕತೆಗೆ ಸಿಗುತ್ತಾ ಬಿಗ್ ರಿಲೀಫ್?
ಜಗತ್ತಿನ ಪಾಲಿಗೆ ದೊಡ್ಡಣ್ಣ ಅಂತಾ ತನಗೆ ತಾನೇ ಬಿಲ್ಡಪ್ ಕೊಡುವ ಅಮೆರಿಕ ಆರ್ಥಿಕವಾಗಿ ಈಗ ಬೀದಿಗೆ ಬಿದ್ದಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಅಮೆರಿಕದ ಆರ್ಥಿಕತೆ ಬುಡ ಅಲ್ಲಾಡಿದ್ದು, ಅಲ್ಲಿನ ಜನರಿಗೆ ತಿನ್ನಲು ತುತ್ತು ಅನ್ನ ಸಿಕ್ಕರೆ ಅದೇ ದೊಡ್ಡದು ಎನ್ನುವಂತೆ ಆಗಿದೆ. ಹೊರಗೆ ತಾನು ಶ್ರೀಮಂತ ದೇಶ ಎನ್ನುವಂತೆ ಬಿಲ್ಡಪ್ ಕೊಡುವ ಇದೇ ಅಮೆರಿಕ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನ ಎದುರಿಸುತ್ತಿದೆ. ಇದರ ಜೊತೆಗೆ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಅವಾಂತರಗಳು ಕಡಿಮೆ ಆಗ್ತಿಲ್ಲ.
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕ್ ಈಗ ಜಾಗತಿಕವಾಗಿ ಸಂಚಲನವನ್ನ ಸೃಷ್ಟಿ ಮಾಡಿದೆ. ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ & ಪನಾಮ ವಿಚಾರದಲ್ಲಿ ಬೆಂಕಿ ಹೊತ್ತಿಸಿದ್ರು. ಈ ಘಟನೆಗಳ ಬಳಿಕ ಕೆನಡಾ ದೇಶವನ್ನೇ ಅಮೆರಿಕ ಜೊತೆಗೆ ವಿಲೀನ ಮಾಡುವ ಬಗ್ಗೆ ಮಾತನಾಡಿ ಬಿರುಗಾಳಿ ಎಬ್ಬಿಸಿದ್ದರು. ಇದೆಲ್ಲಾ ಸಾಲದು ಎನ್ನುವಂತೆ ಇದೀಗ ತೆರಿಗೆ ವಾರ್ ಶುರು ಮಾಡಿರುವ ಇದೇ ಟ್ರಂಪ್ ಅವರು, ಭಾರತ ಕೂಡ ಅಮೆರಿಕದ ಸ್ನೇಹ ಬಿಟ್ಟು ಹೋಗುವಂತೆ ಮಾಡಿದ್ದಾರೆ. ಇದು ಜಾಗತಿಕವಾಗಿ ದೊಡ್ಡ ಸಂಚಲನ ಎಬ್ಬಿಸಿದೆ. ಜೊತೆಗೆ ಭಾರತದ ವಿರುದ್ಧ ಭಾರಿ ಪ್ರಮಾಣದಲ್ಲಿ ತೆರಿಗೆ ಕೂಡ ಹೇರಿಕೆ ಮಾಡಿ ತೊಂದರೆ ಕೊಡುತ್ತಿದ್ದಾರೆ ಟ್ರಂಪ್ ಎಂಬ ಆರೋಪವೂ ಇದೆ.

ಕೊನೆಗೂ ದಾರಿಗೆ ಬಂದ್ರಾ ಟ್ರಂಪ್?
ಭಾರತ ಯಾವಾಗ ಚೀನಾ ಜೊತೆಗೆ ಸಂಬಂಧ ಬೆಸೆಯಲು ಮುಂದಾಗಿತ್ತೋ ಅಲ್ಲಿಂದ ಮುಂದೆ ಇದೇ ಅಮೆರಿಕ ತೆಪ್ಪಗಾದಂತೆ ಕಾಣುತ್ತಿದೆ. ಹೀಗಾಗಿ ಇದೀಗ ಭಾರತದ ಜೊತೆಗೆ ಮಹತ್ವದ ವ್ಯಾಪಾರ ಚರ್ಚೆ ಶುರು ಮಾಡಲಾಗಿದೆ. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಾರಿಗೆ ಬಂದ್ರಾ? ಅನ್ನೋ ಚರ್ಚೆ ಕೂಡ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇದು ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದರೂ ಅಚ್ಚರಿ ಇಲ್ಲ. ಆದರೆ ಇನ್ನೂ ಮಾತುಕತೆ ಹಂತದಲ್ಲೇ ಇರುವ ಈ ವಿಚಾರಕ್ಕೆ ಶೀಘ್ರವೇ ಅಂತಿಮ ರೂಪುರೇಷೆ ಸಿಗಬೇಕಿದೆ.
ತೆರಿಗೆ ಕಡಿತ ಮಾಡುತ್ತಾ ಅಮೆರಿಕ?
ಕಳೆದ ತಿಂಗಳು ಅಂದ್ರೆ ಆಗಸ್ಟ್ 27 ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು, ಯಾಕಂದ್ರೆ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿ ಟ್ರಂಪ್ ಆದೇಶ ನೀಡಿದ್ದ ದಿನ ಇದಾಗಿತ್ತು. ಈ ಕಾರಣಕ್ಕೆ ಭಾರತ ಕೂಡ ಅಮೆರಿಕ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಭಾರತ ದೇಶದಿಂದ ಅಮೆರಿಕಗೆ ರಫ್ತು ಮಾಡುವ ವಸ್ತುಗಳ ಮೇಲೆ ಶೇಕಡಾ 25 ತೆರಿಗೆ ಜೊತೆಗೆ ಹೆಚ್ಚುವರಿ ಶೇಕಡಾ 25ರಷ್ಟು ಟ್ಯಾಕ್ಸ್ ಹಾಕಿದ್ದರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದರಿಂದ ಭಾರಿ ದೊಡ್ಡ ಕೋಲಾಹಲ ಸೃಷ್ಟಿಯಾಗಿ ತಲೆನೋವಾಗಿತ್ತು. ಈಗ ಮಾತುಕತೆ ಶುರುವಾದ ಕಾರಣಕ್ಕೆ ತೆರಿಗೆ ಕಡಿತವಾಗುವ ನಿರೀಕ್ಷೆ ಮೂಡಿದೆ.












Click it and Unblock the Notifications