ಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿ
ವಾಶಿಂಗ್ ಟನ್, ಏಪ್ರಿಲ್.12: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿರುವ ಹೈಡ್ರೋಕ್ಸಿ ಕ್ಲೋರೊಕಿನ್ ಔಷಧಿಯನ್ನು ಭಾರತದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ರಫ್ತು ಮಾಡಲಾಗಿದೆ.
ಶನಿವಾರವಷ್ಟೇ ಭಾರತವು ಮಲೇರಿಯಾ ರೋಗ ನಿವಾರಕ ಆಗಿರುವ ಹೈಡ್ರೋಕ್ಸಿ ಕ್ಲೋರೊಕಿನ್ ಔಷಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು. ಇದಾದ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಮನವಿ ಮೇರೆಗೆ ಔಷಧಿಯನ್ನು ರವಾನೆ ಮಾಡಲಾಗಿದೆ.
ಕೊರೊನಾ ವೈರಸ್ ನಿಂದ ಅಮೆರಿಕಾ ನಲುಗಿ ಹೋಗಿದ್ದು, ಚಿಕಿತ್ಸೆಗೆ ಔಷಧಿ ಸಿಗದೇ ವಿಶ್ವದ ದೊಡ್ಡಣ್ಣ ಕಂಗಾಲಾಗಿದ್ದನು. ಕಳೆದ ವಾರವಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 35 ಲಕ್ಷ 82 ಸಾವಿರ ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳನ್ನು ರಫ್ತು ಮಾಡುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು.

ಭಾರತದ ಮಾತ್ರೆಯಲ್ಲಿ ಅಮೇರಿಕಾದ ಸೋಂಕಿತರಿಗೆ ಚಿಕಿತ್ಸೆ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಭಾರತವು ರಫ್ತು ಮಾಡಿದ ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳು ನೆವಾರ್ಕ್ ವಿಮಾನ ನಿಲ್ದಾಣಕ್ಕೆ ತಲುಪಿದೆ ಎಂದು ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧೂ ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಶೇ.70ರಷ್ಟು ಹೈಡ್ರೋಕ್ಸಿ ಕ್ಲೋರೊಕಿನ್ ಉತ್ಪಾದನೆ
ಮಲೇರಿಯಾ ರೋಗ ನಿವಾರಣೆಗೆ ಬಳಸುವ ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳನ್ನು ಭಾರತದಲ್ಲಿ ಅತಿಹೆಚ್ಚಾಗಿ ಉತ್ಪಾದನೆಯಾಗುತ್ತದೆ. ವಿಶ್ವದ ಶೇ.70ರಷ್ಟು ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳು ದೇಶದಲ್ಲಿಯೇ ಉತ್ಪಾದಿಸಲಾಗುತ್ತಿದ್ದು, ಕಳೆದ ಏಪ್ರಿಲ್.07ರಂದು ಈ ಮಾತ್ರೆಗಳ ಅಂತಾರಾಷ್ಟ್ರೀಯ ರಫ್ತಿಗೆ ನಿರ್ಬಂಧ ವಿಧಿಸಲಾಗಿತ್ತು.

ಕೊರೊನಾ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕಿನ್ ಹೆಚ್ಚು ಪರಿಣಾಮಕಾರಿ
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕಾದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಆರಂಭಿಕ ಹಂತದಲ್ಲಿ ಇರುವ ಸೋಂಕಿತರಲ್ಲಿ ಹೈಡ್ರೋಕ್ಸಿ ಕ್ಲೋರೊಕಿನ್ ಹೆಚ್ಚು ಪ್ರಭಾವಕಾರಿಯಾಗಿದೆ. ಈ ಹಿನ್ನೆಲೆ 2 ಕೋಟಿ 90 ಲಕ್ಷ ಪ್ರಮಾಣದ ಮಾತ್ರೆಗಳನ್ನು ತರಿಸಿಕೊಳ್ಳಲು ಟ್ರಂಪ್ ಮುಂದಾಗಿದ್ದಾರೆ. ನ್ಯೂಯಾರ್ಕ್ ನಗರ ಒಂದರಲ್ಲೇ 1,500ಕ್ಕೂ ಅಧಿಕ ಕೊರೊನಾ ಸೋಂಕಿತರಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್ ಸೋಂಕು 10 ದಿನಗಳಲ್ಲೇ ಮಾಯ
ಫ್ರೆಂಚ್ ಅಧ್ಯಯನದ ಪ್ರಕಾರ 1,061 ಕೊರೊನಾ ವೈರಸ್ ಸೋಂಕಿತರ ಪೈಕಿ ಶೇ.91.7ರಷ್ಟು ಮಂದಿ ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳನ್ನು ಸೇವಿಸುತ್ತಿದ್ದಂತೆ ಚೇತರಿಸಿಕೊಂಡಿದ್ದಾರೆ. 15 ದಿನಗಳಲ್ಲಿ ಶೇ.96ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳೆಷ್ಟು ತೆಗೆದುಕೊಳ್ಳಬೇಕು?
ಹೈಡ್ರೋಕ್ಸಿ ಕ್ಲೋರೊಕಿನ್ ಮಾತ್ರೆಗಳಿಂದ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಸುತ್ತದೆ. ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಕೊರೊನಾ ವೈರಸ್ ಸೋಂಕಿತರು ಹೈಡ್ರೋಕ್ಸಿ ಕ್ಲೋರೊಕಿನ್ 400 ಎಂಜಿ ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ಸೇವಿಸಬೇಕು. ತದನಂತರ 200 ಎಂಜಿಯ ಎಂಟು ಮಾತ್ರೆಗಳನ್ನು ದಿನಕ್ಕೆ ಎರಡು ಬಾರಿ ಸೇವಿಸುವಂತೆ ಸಲಹೆ ನೀಡಿದೆ.












Click it and Unblock the Notifications