ಉಕ್ರೇನ್ ವಿರುದ್ಧದ ಯುದ್ಧ ಶಾಂತಿಯಿಂದ ಬಗೆಹರಿಯಲಿ: ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ!
ರಷ್ಯಾ & ಉಕ್ರೇನ್ ಯುದ್ಧದ ಜ್ವಾಲೆಯಲ್ಲಿ ಬಡಿದಾಟ ಹೆಚ್ಚಿಸಿದ್ದು, ಬರೋಬ್ಬರಿ 3 ವರ್ಷ ಕಳೆಯುತ್ತಿದ್ದರೂ ಯುದ್ಧವನ್ನು ನಿಲ್ಲಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಯುರೋಪ್ ನೆಲದಿಂದ ಹಿಡಿದು ಅಮೆರಿಕದ ತನಕ ಈ ಯುದ್ಧ ದೊಡ್ಡ ಪ್ರಮಾದ ಸೃಷ್ಟಿ ಮಾಡಿದೆ. ಇಂತಹ ಸಮಯದಲ್ಲಿ ಭಾರತ ಮಾತ್ರ ಶಾಂತಿ ಮಂತ್ರ ಜಪಿಸುತ್ತಿದೆ. ಇದೇ ಮಾತನ್ನು ಇದೀಗ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎದುರು ಹೇಳಿದ್ದಾರೆ.
ಜಗತ್ತಿನಲ್ಲಿ ಈಗ 3 ದೊಡ್ಡ ದೊಡ್ಡ ಯುದ್ಧಗಳು ನಡೆಯುತ್ತಿವೆ. ರಷ್ಯಾ & ಉಕ್ರೇನ್, ಇಸ್ರೇಲ್ & ಗಾಜಾ, ಇಸ್ರೇಲ್ & ಲೆಬನಾನ್ ನಡುವೆ ಬೆಂಕಿ ಹೊತ್ತಿಕೊಂಡಿದೆ. ಹೀಗಿದ್ದರೂ ಭಾರತ ಮಾತ್ರ ಯಾವುದೇ ದೇಶದ ಪರವಾಗಿ ನಿಲ್ಲುತ್ತಿಲ್ಲ. ಇದರ ಬದಲಾಗಿ ಶಾಂತಿ ಮಂತ್ರ ಜಪಿಸುತ್ತಿರುವ ಭಾರತ, ಯುದ್ಧ ಬೇಡ ಶಾಂತಿಯಿಂದ ಸಮಸ್ಯೆ ಬಗೆಹರಿಸಿ ಎಂದು ಸಲಹೆಯನ್ನು ನೀಡುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಈ 3 ಯುದ್ಧಗಳು ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಮತ್ತೊಂದು ಕಡೆ ಭಾರತದ ಪ್ರಧಾನಿ ಮೋದಿ ಅವರು ರಷ್ಯಾ ನೆಲದಲ್ಲೇ ನಿಂತು, ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಿ ಎಂದು ಹೇಳಿದ್ದಾರೆ.

'ಬ್ರಿಕ್ಸ್' ಸಮ್ಮೇಳನದಲ್ಲಿ ಶಾಂತಿ ಮಂತ್ರ
ರಷ್ಯಾ ದೇಶದ ಮಧ್ಯ ಭಾಗದ ಪ್ರಮುಖ ನಗರ ಕಜಾನ್ ಸಿಟಿಯಲ್ಲಿ ಇಂದಿನಿಂದ 'ಬ್ರಿಕ್ಸ್' ಸಮ್ಮೇಳನ ಆರಂಭವಾಗಿದೆ. ಈ ಸಮ್ಮೇಳನದಲ್ಲಿ ಭಾರತ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ನೆಲಕ್ಕೆ ಭೇಟಿ ನೀಡಿದ್ದಾರೆ. ಮಹತ್ವದ 'ಬ್ರಿಕ್ಸ್' ಸಮ್ಮೇಳನದಲ್ಲಿ ಭಾಗವಹಿಸಲು ಇದೀಗ ಪಿಎಂ ಮೋದಿ ಅವರು ರಷ್ಯಾಗೆ ಭೇಟಿ ಕೊಟ್ಟಿದ್ದು ಗಮನ ಸೆಳೆದಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಪ್ರಧಾನಿ ಮೋದಿ ಅವರ ಆಗಮನಕ್ಕೆ ಕಾದು ಕುಳಿತಿದ್ದರು. ಹೀಗಿದ್ದಾಗ ಪುಟಿನ್ ಅವರ ಜೊತೆಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಏನು ಹೇಳಿದ್ದಾರೆ ಗೊತ್ತಾ? ಮುಂದೆ ಓದಿ.
ಯುದ್ಧ ನಿಲ್ಲಿಸಲು ಪ್ರಧಾನಿ ಸಲಹೆ
'ಬ್ರಿಕ್ಸ್' ಸಮ್ಮೇಳನದ ಭಾಗವಾಗಿ ಇದೀಗ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಮಾತುಕತೆ ನಡೆಸಿದರು. ಇದೇ ಸಮಯದಲ್ಲಿ ಉಕ್ರೇನ್ ವಿರುದ್ಧದ ಯುದ್ಧವನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಬೇಕು, ಈ ವಿಚಾರದಲ್ಲಿ ರಷ್ಯಾಗೆ ಭಾರತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಭಾರತ ಮತ್ತೊಮ್ಮೆ ಉಕ್ರೇನ್ ಯುದ್ಧ ನಿಲ್ಲಬೇಕು, ರಷ್ಯಾ ಶಾಂತಿಯು ಮಾರ್ಗದ ಮೂಲಕ ಸಮಸ್ಯೆ ಸರಿಪಡಿಸಬೇಕು ಎಂಬ ಸಲಹೆ ನೀಡಿದೆ.
ಅಲ್ಲದೆ ಉಕ್ರೇನ್ ವಿರುದ್ಧ ಯುದ್ಧ ನಿಂತ ನಂತರ ಮೊದಲಿದ್ದ ಪರಿಸ್ಥಿತಿ ನಿರ್ಮಾಣ ಆಗಬೇಕು. ಉಕ್ರೇನ್ ಮತ್ತೆ ಮೊದಲಿನ ಸ್ಥಿತಿಗೆ ಬರಲು ಎಲ್ಲಾ ರೀತಿಯ ಸಹಾಯ ಮಾಡಬೇಕು. ಇದಕ್ಕಾಗಿ ರಷ್ಯಾ ಬದ್ಧವಾಗಿ ಇರಬೇಕು ಎಂದು ಕೂಡ ಭಾರತ ಈಗ ರಷ್ಯಾ ಅಧ್ಯಕ್ಷ ಪುಟಿನ್ ಎದುರು ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ನಾವು ಶಾಂತಿಯುತವಾಗಿ ಉಕ್ರೇನ್ ಜೊತೆಗಿನ ಸಮಸ್ಯೆ ಸರಿಪಡಿಸಿಕೊಳ್ಳಲು ಸಿದ್ಧ ಎಂದಿದೆ.












Click it and Unblock the Notifications