ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ನಾಲ್ಕು ಪ್ರಮುಖ ಸಂಸ್ಥೆಗಳಿಗೆ ಭಾರತ ಆಯ್ಕೆ

|
Google Oneindia Kannada News

ವಿಶ್ವಸಂಸ್ಥೆ, ಏಪ್ರಿಲ್ 14: ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ಸೇರಿದಂತೆ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ನಾಲ್ಕು ಪ್ರಮುಖ ಸಂಸ್ಥೆಗಳಿಗೆ ಭಾರತ ಆಯ್ಕೆಯಾಗಿದೆ.

ವಿಶ್ವ ಸಂಸ್ಥೆಯು 1945 ರಲ್ಲಿ ಸ್ಥಾಪನೆ ಮಾಡಿದ ಯುಎನ್ ವ್ಯವಸ್ಥೆಯ ಆರು ಪ್ರಮುಖ ಅಂಗಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ಇಸಿಒಎಸ್ಒಸಿ) ಒಂದಾಗಿದೆ. ಇದು ಸಾಮಾನ್ಯ ಸಭೆಯಿಂದ ಚುನಾಯಿತರಾದ ವಿಶ್ವಸಂಸ್ಥೆಯ 54 ಸದಸ್ಯರನ್ನು ಒಳಗೊಂಡಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು!ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು!

"ಭಾರತವು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ನಾಲ್ಕು ಪ್ರಮುಖ ಸಂಸ್ಥೆಗಳಿಗೆ ಆಯ್ಕೆಯಾಗುತ್ತದೆ. ಸಾಮಾಜಿಕ ಅಭಿವೃದ್ಧಿ ಆಯೋಗ, ಎನ್‌ಜಿಒಗಳ ಸಮಿತಿ, ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗಕ್ಕೆ ಭಾರತ ಆಯ್ಕೆಯಾಗಿದೆ. ಹಾಗೆಯೇ ರಾಯಭಾರಿ ಪ್ರೀತಿ ಸರನ್ ಅವರು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಗೆ ಮರು ಆಯ್ಕೆಯಾಗಿದ್ದಾರೆ," ಎಂದು ಬುಧವಾರ ವಿಶ್ವಸಂಸ್ಥೆ ಭಾರತೀಯ ಮಿಷನ್ ಟ್ವೀಟ್ ಮಾಡಿದೆ.

India gets elected to four UN ECOSOC bodies

ಎಲ್ಲಾ ರಾಷ್ಟ್ರಗಳಿಗೆ ಧನ್ಯವಾದ ತಿಳಿಸಿದ ಭಾರತ

ಇನ್ನು ಭಾರತವು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಡಿಸೆಂಬರ್ 2018 ರಲ್ಲಿ, ಯುಎನ್‌ನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯಲ್ಲಿ (ಸಿಇಎಸ್‌ಸಿಆರ್) ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಹಿರಿಯ ಭಾರತೀಯ ರಾಜತಾಂತ್ರಿಕ ಸರನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಸರನ್ ಅವರ ಮೊದಲ ನಾಲ್ಕು ವರ್ಷಗಳ ಅವಧಿಯು ಜನವರಿ 1, 2019 ರಂದು ಪ್ರಾರಂಭವಾಯಿತು. ಅವರು ಆಗಸ್ಟ್ 1982 ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದ್ದರು. ಸರನ್ ಮಾಸ್ಕೋ, ಢಾಕಾ, ಕೈರೋ, ಜಿನೀವಾ, ಟೊರೊಂಟೊ ಮತ್ತು ವಿಯೆಟ್ನಾಂನಲ್ಲಿ ಭಾರತೀಯ ಮಿಷನ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತದ ಕಾನ್ಸುಲ್ ಜನರಲ್ ಆಗಿದ್ದರು. ಟೊರೊಂಟೊ ಮತ್ತು ವಿಯೆಟ್ನಾಂನ ಭಾರತೀಯ ರಾಯಭಾರಿ ಕೂಡಾ ಆಗಿದ್ದರು.

Recommended Video

RCB ಈ ಸಲ ಕಪ್ ಗೆಲ್ಲುತ್ತಾ ಅನ್ನೋ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಕೊಟ್ಟ ಉತ್ತರ ನೋಡಿ | Oneindia Kannada

English summary
India has been elected to four key bodies of the UN Economic and Social Council, including the Commission on Science and Technology for Development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X