ಅಮೆರಿಕಾದ ಕುತಂತ್ರದ ನಡುವೆ ಒಂದಾದ ಭಾರತ - ಚೀನಾ: ಮಹತ್ವದ ಒಪ್ಪಂದ, ಗಡಿ ಸಮಸ್ಯೆ ಚರ್ಚೆ!
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುತಂತ್ರಗಳಿಂದ ಭಾರತ ಮತ್ತು ಚೀನಾ ದೇಶಗಳು ಒಂದಾಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಚೀನಾದ ನಡುವೆ ಸಂಬಂಧ ಕುಸಿದಿದೆ. ಅದರಲ್ಲೂ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಭಾರೀ ಸಂಘರ್ಷಗಳು ಏರ್ಪಟ್ಟಿತ್ತು. ಇದೀಗ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರೊಂದಿಗೆ ಮಾತುಕತೆ ನಡೆಸುವ ಸಂಬಂಧ ಚೀನಾದ ವಿದೇಶಾಂಗ ವಾಂಗ್ ಯಿ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಇದರ ನಡುವೆ ಭಾರತ ಮತ್ತು ಚೀನಾದ ನಡುವೆ ಮಹತ್ವದ ಒಪ್ಪಂದವೊಂದು ಆಗಿದೆ.
ಭಾರತದ ಮೇಲೆ ಅಮೆರಿಕಾ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸುತ್ತಿರುವಾಗಲೇ ಇಷ್ಟು ವರ್ಷಗಳ ಕಾಲ ಶತ್ರು ದೇಶವಾಗಿರುವ ಚೀನಾ ಇದೀಗ ಭಾರತದೊಂದಿಗೆ ಕೈಜೋಡಿಸಿದೆ. ಶತ್ರುವಿನ ಶತ್ರು ಮಿತ್ರ ಎನ್ನುವ ನಾಣ್ಣುಡಿಯಂತೆ ಭಾರತ ಮತ್ತು ಚೀನಾ ಒಂದಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾದ ಮೇಲೆ ಬೇಕಾಬಿಟ್ಟಿ ಆಮದು ತೆರಿಗೆ ವಿಧಿಸಿರುವುದು ಹಾಗೂ ಅಮೆರಿಕಾದ ಉತ್ಪನ್ನಗಳ ಆಮದಿನ ಮೇಲೆ ವಿಪರೀತ ತೆರಿಗೆ ವಿಧಿಸುತ್ತಿರುವುದು ಭಾರತ ಹಾಗೂ ಚೀನಾದ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ - ಚೀನಾ ಒಂದಾಗುವುದಿಲ್ಲ ಎನ್ನುವ ಅಮೆರಿಕಾದ ಲೆಕ್ಕಾಚಾರಗಳು ಸುಳ್ಳಾಗಿವೆ.

ಇದೀಗ ಭಾರತಕ್ಕೆ ರಸಗೊಬ್ಬರ, ಅಪರೂಪದ ಖನಿಜಗಳು ಹಾಗೂ ಸುರಂಗ ಕೊರೆಯುವ ಅತ್ಯಾಧುನಿಕ ಯಂತ್ರಗಳನ್ನು ಪೂರೈಸಲು ಚೀನಾ ಒಪ್ಪಿಗೆ ಕೊಟ್ಟಿದೆ. ಇದರಿಂದ ದೇಶದ ಕೃಷಿ ಹಾಗೂ ಮೆಟ್ರೋ ಯೋಜನೆಗಳಿಗೆ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದು ಭಾರತ ಮತ್ತು ಚೀನಾದ ನಡುವೆ ಸಕಾರಾತ್ಮಕ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಎರಡೂ ದೇಶಗಳ ನಡುವೆ ಸಂಬಂಧ ಸುಧಾರಿಸುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ. ಚೀನಾದಿಂದ ರಸಗೊಬ್ಬರಗಳು, ಅಪರೂಪದ ಖನಿಜ ಸಂಪತ್ತು ಹಾಗೂ ಸುರಂಗ ಕೊರೆಯುವ ಯಂತ್ರಗಳ (TBM) ಪೂರೈಕೆಯನ್ನು ಪುನರಾರಂಭ ಮಾಡುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಚೀನಾ ದೇಶವು ರಸಗೊಬ್ಬರಗಳು, TBM ಮತ್ತು ಅಪರೂಪದ ಭೂಮಿಯ ಪೂರೈಕೆಗೆ ಒಪ್ಪಿಗೆ ನೀಡಿರುವುದು ರಾಜತಾಂತ್ರಿಕವಾಗಿ ಮಹತ್ವದ ಬೆಳವಣಿಗೆ ಎಂದು ಹೇಳಲಾಗಿದೆ. ಚೀನಾದ ಬೀಜಿಂಗ್‌ನಿಂದ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಭಾರತದ ಆಮದಿಗೆ ಬ್ರೇಕ್ ಹಾಕಿತ್ತು. ಚೀನಾ, ಭಾರತಕ್ಕೆ ಕೃಷಿಗಾಗಿ ಸುಮಾರು 30 ಪ್ರತಿಶತ ರಸಗೊಬ್ಬರಗಳನ್ನು, ಆಟೋ ಬಿಡಿಭಾಗಗಳು ಹಾಗೂ ಅಪರೂಪದ ಖನಿಜ ವಸ್ತುಗಳನ್ನು, ರಸ್ತೆ ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುರಂಗ ಕೊರೆಯುವ ಯಂತ್ರವನ್ನು ಪೂರೈಸುವುದಾಗಿ ಹೇಳಿದೆ.












Click it and Unblock the Notifications