ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷೆ ಯಾವುದೇ ಆದ್ರೂ, ಸಂಸ್ಕೃತಿಯಲ್ಲಿ ನಾವು ಭಾರತೀಯರು; ಮೋದಿ

|
Google Oneindia Kannada News

ಕೋಪನ್‌ಹ್ಯಾಗನ್, ಮೇ 3: "ಭಾಷೆ ಯಾವುದೇ ಆಗಿರಲಿ, ನಾವು ಸಂಸ್ಕೃತಿಯಲ್ಲಿ ಭಾರತೀಯರು. ಅಂತರ್ಗತತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೇ ಭಾರತದ ಶಕ್ತಿ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಡೆನ್ಮಾರ್ಕ್‌ನ ಕೋಪನ್‌ಹ್ಯಾಗನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು. "ನಾವು ವಸುಧೈವ ಕುಟುಂಬಕಂ ಎಂದರೆ ಒಂದು ಜಗತ್ತು ಎಂಬುದನ್ನು ನಂಬುತ್ತೇವೆ" ಎಂದರು.

Video: 2024, ಮೋದಿ ಒನ್ಸ್ ಮೋರ್; ಜರ್ಮನಿಯಲ್ಲಿ ಬಿಜೆಪಿಗೆ ಸಿಕ್ತು ಹೊಸ ಘೋಷಣೆ! Video: 2024, ಮೋದಿ ಒನ್ಸ್ ಮೋರ್; ಜರ್ಮನಿಯಲ್ಲಿ ಬಿಜೆಪಿಗೆ ಸಿಕ್ತು ಹೊಸ ಘೋಷಣೆ!

"ಭಾರತದ ಅಗಾಧ ವೈವಿಧ್ಯತೆಯಿಂದಾಗಿ, ಜನರು ವಿಭಿನ್ನ ಆಹಾರ ಆಯ್ಕೆಗಳು ಮತ್ತು ಭಾಷೆಗಳನ್ನು ಹೊಂದಿರಬಹುದು. ಆದರೆ ಅದೇ ಭಾರತೀಯ ಸಂಸ್ಕೃತಿಯನ್ನು ಹೊಂದಿದ್ದಾರೆ" ಎಂದರು.

Inclusiveness and cultural diversity is the strength of the Indian community: PM Modi Speech in Copenhagen

ಹವಾಮಾನ ಬದಲಾವಣೆ; ಹವಾಮಾನ ಬದಲಾವಣೆ, ಪರಿಸರ ಮತ್ತು ಹಸಿರು ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. "ಲೈಫ್ ಬಗ್ಗೆ ಉಲ್ಲೇಖಿಸಿದ ಅವರು, ಹವಾಮಾನ ಬದಲಾವಣೆ ನಿಭಾಯಿಸಲು ಜೀವನ- ಪರಿಸರಕ್ಕಾಗಿ ಜೀವನಶೈಲಿಯ ಮೇಲೆ ಗಮನಹರಿಸಬೇಕು ಎಂದು ಹೇಳಿದರು.

"ನಾವು ಬಳಕೆ ಆಧಾರಿತ ವಿಧಾನವನ್ನು ತ್ಯಜಿಸಬೇಕು. ನಮ್ಮ ಬಳಕೆಯನ್ನು ನಮ್ಮ ಅಗತ್ಯಗಳಿಂದ ನಿರ್ಧರಿಸಬೇಕು, ನಮ್ಮ ಜೇಬಿನ ಗಾತ್ರವಲ್ಲ" ಎಂದರು.

"ಡ್ಯಾನಿಶ್ ಪ್ರಧಾನಿ ವೈಯಕ್ತಿಕ ಆದ್ಯತೆಗಳು ಮತ್ತು ಮೌಲ್ಯಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ. ಹಸಿರು ಕಾರ್ಯತಂತ್ರದ ಪಾಲುದಾರಿಕೆಯು ಹಸಿರು ಜಲಜನಕ, ನವೀಕರಿಸಬಹುದಾದ ಇಂಧನ ಮತ್ತು ತ್ಯಾಜ್ಯನೀರಿನ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ" ಎಂದು ತಿಳಿಸಿದರು.

Inclusiveness and cultural diversity is the strength of the Indian community: PM Modi Speech in Copenhagen

ಡ್ಯಾನಿಶ್ ಪ್ರಜೆಗಳಿಗೆ ಪ್ರಧಾನಿ ಆಹ್ವಾನ: "ಇದಲ್ಲದೆ ಗ್ರಹವನ್ನು ಉಳಿಸುವ ನಿಟ್ಟಿನಲ್ಲಿ ಪರಿಹಾರ ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಭಾರತಕ್ಕೆ ಆಗಮಿಸುವಂತೆ ಪ್ರಧಾನಿ ಮೋದಿ ಡ್ಯಾನಿಶ್ ಪ್ರಜೆಗಳಿಗೆ ಆಹ್ವಾನ ನೀಡಿದರು. ಈ ಗ್ರಹದ ಸಮಸ್ಯೆಗಳಿಗೆ ಜಂಟಿಯಾಗಿ ಉತ್ತರಗಳನ್ನು ಹುಡುಕಲು ನಮ್ಮ ಡ್ಯಾನಿಶ್ ಸ್ನೇಹಿತರು ಭಾರತಕ್ಕೆ ಬರಬೇಕು ಎಂದು ನಾನು ಹೇಳಲು ಬಯಸುತ್ತೇನೆ" ಎಂದರು.

"ಭಾರತವು ತನ್ನ ಹವಾಮಾನ ಕ್ರಮವನ್ನು ಪೂರೈಸಲು ಸಮರ್ಥವಾಗಿದೆ. ಏಕೆಂದರೆ ಬಹುಪಕ್ಷೀಯ ಸಂಸ್ಥೆಗಳ ಮೇಲೆ ಗ್ರಹವನ್ನು ಉಳಿಸುವ ಎಲ್ಲಾ ಜವಾಬ್ದಾರಿಯನ್ನು ಹೊರಿಸುವ ಇತರರಂತಲ್ಲದೆ, ಜಗತ್ತನ್ನು ಉಳಿಸಲು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನು ನಾವು ನೋಡುತ್ತೇವೆ," ಎಂದು ಮೋದಿ ಹೇಳಿದರು.

2ನೇ ಭಾರತ-ನಾರ್ಡಿಕ್ ಶೃಂಗಸಭೆ: ಪ್ಯಾರಿಸ್‌ಗೆ ತೆರಳುವ ಮೊದಲು ಪ್ರಧಾನಿ ಮೋದಿ 2ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಡ್ಯಾನಿಶ್ ರಾಣಿ ಮಾರ್ಗರೆಥ್ II ಅವರನ್ನು ಭೇಟಿಯಾಗಲಿದ್ದಾರೆ.

ಈ ಶೃಂಗಸಭೆಯು ಸಾಂಕ್ರಾಮಿಕ ಪಿಡುಗಿನ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ವಿಕಸನಗೊಳ್ಳುತ್ತಿರುವ ಜಾಗತಿಕ ಭದ್ರತಾ ಸನ್ನಿವೇಶ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ-ನಾರ್ಡಿಕ್ ಸಹಕಾರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ವರದಿಯಾಗಿದೆ.

English summary
Inclusiveness and cultural diversity is the strength of the Indian community: PM Modi Speech in Denmark's Copenhagen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X