ಚೀನಾದಲ್ಲಿ ಮೋದಿ ಮೊದಲ ದಿನದ ಮೋಡಿ
ಕ್ಸಿಯಾನ್, ಮೇ.14: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ಮೂರು ರಾಷ್ಟ್ರಗಳ ಪ್ರವಾಸ ಚೀನಾ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ತವರೂರಿಗೆ ಕ್ಸಿಯಾನ್ ಪ್ರಾಂತ್ಯಕ್ಕೆ ಭೇಟಿ ನೀಡುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಪ್ರವಾಸ ಆರಂಭಗೊಂಡಿದೆ. ಮೊದಲ ದಿನದ ಮುಖ್ಯಾಂಶಗಳು, ಚಿತ್ರಗಳು ಇಲ್ಲಿವೆ.
ಐತಿಹಾಸಿಕ ನಗರಿ ಕ್ಸಿಯಾನ್ ನಲ್ಲಿ ಗುರುವಾರ ಸಂಜೆತನಕ ಇದ್ದ ಮೋದಿ ಅವರು, ಜಿನ್‌ಪಿಂಗ್ ಅವರ ಜತೆ ಅನೌಪಚಾರಿಕ ಸಭೆ ನಡೆಸಿದರು. [ಚೀನಾದಲ್ಲಿ ಮೋದಿ: ಚೀನಿ ಪತ್ರಿಕೆಗಳ ಟೀಕೆ-ಟಿಪ್ಪಣಿ]
ಟೆರಾಕೋಟಾ ವಾರಿಯರ್ಸ್ ಮ್ಯೂಸಿಯಂ ಭೇಟಿ, ಕ್ಸಿಂಗ್ ಶಾನ್ ದೇಗುಲ, ಬಿಗ್ ವೈಲ್ಡ್ ಗೂಸೆ ಪಗೋಡಾಗೆ ಭೇಟಿ, ಪಾಟ್ ಸಿಟಿ ನಡಿಗೆ, ಅಧ್ಯಕ್ಷರಿಗೆ ಜಿನ್ ಪಿಂಗ್ ಗೆ ಬೋಧಿ ಸಸಿ ಹಸ್ತಾಂತರ ಎಲ್ಲವೂ ಮೊದಲ ದಿನದ ಮುಖ್ಯಾಂಶವಾಗಿತ್ತು. ರಾತ್ರಿ ವೇಳೆಗೆ ಬೀಜಿಂಗ್ ಗೆ ತೆರಳಲಿರುವ ಮೋದಿ ಅವರಿಗೆ ಅಧ್ಯಕ್ಷ ಜಿನ್ ಪಿಂಗ್ ಆತಿಥ್ಯ ನೀಡಲಿದ್ದಾರೆ.

ಕ್ಸಿಯಾನ್ ನಂತರ ಬೀಜಿಂಗ್, ಶಾಂಘೈ ನಗರಕ್ಕೆ
ಕ್ಸಿಯಾನ್ ನಂತರ ಬೀಜಿಂಗ್, ಶಾಂಘೈ ನಗರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಚೀನಾ ಪ್ರವಾಸದ ಬಳಿಕ ಮೋದಿ ಹಾಗೂ ಅವರ ನಿಯೋಗ ಮಂಗೋಲಿಯ ಹಾಗೂ ದಕ್ಷಿಣ ಕೊರಿಯಗಳಿಗೂ ಭೇಟಿ ನೀಡಿ ಪ್ರಮುಖ ವಿಷಯಗಳ ಕುರಿತು ಅಲ್ಲಿನ ನಾಯಕರೊಂದಿಗೆ ಚರ್ಚಿಸಲಿದೆ.

ಶುಕ್ರವಾರ ಬೀಜಿಂಗ್ ನಲ್ಲಿ ಮಾತುಕತೆ
* ಶುಕ್ರವಾರ ಮೋದಿ ಅವರನ್ನು ಚೀನಾ ಪ್ರಧಾನಿ ಲೆ ಕೆಖೀಯಾಂಗ್ ಅವರು ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ.
* ನಿಯೋಗ ಮಟ್ಟದ ಮಾತುಕತೆ, ಹತ್ತು ಹಲವು ಒಪ್ಪಂದಗಳಿಗೆ ಸಹಿ ಬೀಳಲಿದೆ.
* ತ್ಸಿನ್ ಘುವಾ ವಿವಿಗೆ ಆಗಮನ, ಭಾಷಣ, ಸಂವಾದ.
* ಗ್ರೇಟ್ ಹಾಲ್ ಆಫ್ ಪೀಪಲ್ ನಿಂದ ಟೆಂಪಲ್ ಆಫ್ ಹೆವನ್ ಗೆ ಮೋದಿ ಭೇಟಿ
* ಯೋಗ ತೈಚಿ ಜಂಟಿ ಕಾರ್ಯಕ್ರಮ ವೀಕ್ಷಣೆ.
* ಬೀಜಿಂಗ್ ನಿಂದ ಶಾಂಘೈ ನಗರಕ್ಕೆ ಮೋದಿ ಹಾರಾಟ

ಶನಿವಾರ ಶಾಂಘೈನಲ್ಲಿ ಮಾತುಕತೆ, ಚರ್ಚೆ
* ಚೀನಾದ ಪ್ರಮುಖ ಕಂಪನಿಗಳ ಸಿಇಒಗಳ ಜೊತೆ ಮಾತುಕತೆ.
* ಭಾರತ- ಚೀನಾ ವಾಣಿಜ್ಯ ಸಮಾವೇಶ.
* ಹೋಟೆಲ್ ಪೋರ್ಟ್ ಮನ್ ರಿಟ್ಸ್ ಕಾರ್ಟ್ನನ್ ಗ್ರಾಂಡ್ ಬಾಲ್ ರೂಮಿನಲ್ಲಿ ಕಾರ್ಯಕ್ರಮ
* ಭಾರತೀಯರೊಂದಿಗೆ ಔತಣಕೂಟ, ಫೋಟೊ ಸೆಷನ್
* ಶಾಂಘೈನಿಂದ ದಕ್ಷಿಣ ಕೊರಿಯಾಕ್ಕೆ ಪ್ರಯಾಣ.

ಬಿಗ್ ವೈಲ್ಡ್ ಗೂಸೆ ಪಗೋಡಾಗೆ ಭೇಟಿ
ಐತಿಹಾಸಿಕ ನಗರಿ ಕ್ಸಿಯಾನ್ ನ ಬಿಗ್ ವೈಲ್ಡ್ ಗೂಸೆ ಪಗೋಡಾ ಮುಂದೆ ಪ್ರಧಾನಿ ಮೋದಿ ಹಾಗೂ ಜಿನ್ ಪಿಂಗ್

ಸಹಸ್ರಾರು ಸೈನಿಕರ ಶಿಲ್ಪಗಳಿರುವ ವಸ್ತು ಸಂಗ್ರಹಾಲಯ
ಚೀನಾದ ಮೊದಲ ಸಾಮ್ರಾಟ ಕ್ವಿನ್ ಕ್ಸಿ ಹಾಂಗ್ ಅವರ ಕಾಲದ ಸಹಸ್ರಾರು ಸೈನಿಕರ ಶಿಲ್ಪಗಳಿರುವ ವಸ್ತು ಸಂಗ್ರಹಾಲಯಕ್ಕೆ ಮಾರು ಹೋದ ಮೋದಿ ಅವರು ಪ್ರೇಕ್ಷಕರ ಪುಸ್ತಕದಲ್ಲಿ ಈ ಸ್ಥಳ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ ಎಂದು ಬರೆಯುವ ಮೂಲಕ ಅಭಿಮಾನ ಮೆರೆದರು.

ಹಲವು ಬಿಲಿಯನ್ ಡಾಲರ್ ಒಪ್ಪಂದ
10 ಬಿಲಿಯನ್ ಡಾಲರ್‌ಗಳ 20ಕ್ಕೂ ಹೆಚ್ಚು ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಮಾತುಕತೆ ಸಂದರ್ಭದಲ್ಲಿ ಸಮುದ್ರದ ಮಾರ್ಗವಾಗಿ ಚೀನಾಗೆ ರಸ್ತೆ ನಿರ್ಮಿಸುವುದು, ಗಡಿ ಸಮಸ್ಯೆ ನಿವಾರಣೆ ಮತ್ತು ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳುವುದು ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

ಮೇಕ್ ಇನ್ ಇಂಡಿಯಾಗೆ ಒತ್ತು
ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲು ಮೋದಿ ಅವರು ಮೂಲ ಸೌಕರ್ಯಕ್ಕೆ ಹೆಚ್ಚಿನ ಹೂಡಿಕೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾರತದ ಎರಡು ರಾಜ್ಯಗಳಲ್ಲಿ ಕೈಗಾರಿಕಾ ಪಾರ್ಕ್‌ಗಳು ನಿರ್ಮಾಣಗೊಳ್ಳಲಿದ್ದು, ಎರಡು ಸಾವಿರ ಕೋಟಿ ಡಾಲರ್‌ಗಳ ಹೂಡಿಕೆಯ ಭರವಸೆಯನ್ನು ಚೀನಾ ಈಗಾಗಲೇ ನೀಡಿದೆ. ಈ ವಿಷಯವಾಗಿ ಉಭಯ ನಾಯಕರು ಚರ್ಚೆ ನಡೆಸುವ ಸಾಧ್ಯತೆಯಿದೆ.












Click it and Unblock the Notifications