ಧಾರ್ಮಿಕ ವಿಧ್ವಾಂಸರ ನಾಯಕತ್ವದಲ್ಲಿ ಅಫ್ಘಾನಿಸ್ತಾನ ಸರ್ಕಾರ ರಚನೆ: ತಾಲಿಬಾನ್

ಕಾಬೂಲ್, ಆಗಸ್ಟ್ 25: ಧಾರ್ಮಿಕ ವಿಧ್ವಾಂಸರ ನಾಯಕತ್ವದಲ್ಲಿ ಅಫ್ಘಾನಿಸ್ತಾನ ಸರ್ಕಾರ ರಚನೆಯಾಗಲಿದೆ ಎಂದು ತಾಲಿಬಾನ್ ಹೇಳಿದೆ.

ತಾಲಿಬಾನ್ ಕಳೆದ ಒಂದು ತಿಂಗಳಿನಲ್ಲಿ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಆಕ್ರಮಿಸಿದೆ. ವಾರದ ಹಿಂದೆ ಉಗ್ರ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಕ್ಕೆ ಪಡೆದ ನಂತರ ಅಲ್ಲಿನ ಸರ್ಕಾರ ಪತನಗೊಂಡು ಅರಾಜಕತೆ, ಅಸ್ಥಿರತೆ ಉಂಟಾಗಿರುವಂತೆಯೇ, ಮುಂಬರುವ ಸರ್ಕಾರವನ್ನು ಧಾರ್ಮಿಕ ವಿಧ್ವಾಂಸರು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಅಲ್ಲದೇ, ನೆರೆದಿದ್ದವರಲ್ಲಿ ಹತ್ತು ಮಂದಿ ಧಾರ್ಮಿಕ ವಿಧ್ವಾಂಸರನ್ನು ಆಹ್ವಾನಿಸಿದ ಉಗ್ರ ಸಂಘಟನೆ, ರಾಜಕೀಯ ವ್ಯವಸ್ಥೆ ರೂಪಿಸಲು ಹಾಗೂ ಮುಂದಿನ ಸರ್ಕಾರಕ್ಕೆ ಜನರ ಬೆಂಬಲ ಕೋರಲು ಸಹಕಾರವನ್ನು ಕೇಳಿದರು ಎಂದು ಅಫ್ಘಾನಿಸ್ತಾನದ ಖಾಮ ಪ್ರೆಸ್ ಹೇಳಿದೆ.ಎಲ್ಲರನ್ನೊಳಗೊಂಡ ಸರ್ಕಾರವನ್ನು ರಚಿಸಲಾಗುವುದು, ಎಲ್ಲಾ ಜನರ ಹಕ್ಕುಗಳನ್ನು ಸಂರಕ್ಷಿಸಲಾಗುವುದು ಎಂದು ತಾಲಿಬಾನ್ ವಕ್ತಾರ ಜುಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

In Afghanistan Taliban Says Religious Scholars Will Lead Govt In Afghanistan

ಪಕ್ಷಪಾತ, ಭಾಷಿಕ ಮತ್ತು ಪಂಥೀಯ ಮೌಲ್ಯಗಳ ಹೊರತಾಗಿಯೂ, ಜನರು ಒಗ್ಗೂಡಿ ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿರುವುದಾಗಿ ಖಾಮ ಉಲ್ಲೇಖಿಸಿದೆ. ಸರ್ಕಾರ ರಚನೆಯ ಭಾಗವಾಗಿ ಆಫ್ಘನ್ ದೇಶದೊಳಗಿನ ಮುಖಂಡರೊಂದಿಗೆ ತಾಲಿಬಾನ್ ಮಾತುಕತೆ ನಡೆಸುತ್ತಿದೆ.

ಕಾಬೂಲ್‌ನಲ್ಲಿ ಇದ್ದ ಜನರನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ಮುಖಂಡರು, ನಮ್ಮ 20 ವರ್ಷಗಳ ಹೋರಾಟ ವ್ಯರ್ಥವಾಗಬಾರದು, ಧಾರ್ಮಿಕ ವಿಧ್ವಾಂಸರು ನಾಯಕತ್ವ ತೆಗೆದುಕೊಳ್ಳಬೇಕು ಮತ್ತು ಮುಂಬರುವ ಅಫ್ಘಾನಿಸ್ತಾನ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕ ಸೇನೆ ಹೋದ ಬಳಿಕ ಅಪ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾದ್ಯತೆ ಇದೆ. ಹೀಗಾಗಿ ತಾಲಿಬಾನಿಯರು ಅಮೆರಿಕಾಗೆ ಈಗಾಗಲೇ ನಿಗದಿಯಾಗಿರುವ ಗಡುವಾದ ಆಗಸ್ಟ್‌ 31ರಂದೇ ಅಮೆರಿಕ ಹಾಗೂ ಬ್ರಿಟನ್‌ ಪಡೆಗಳು ಅಷ್ಘಾನಿಸ್ತಾನವನ್ನು ತೊರೆಯಬೇಕು. ಒಂದು ವೇಳೆ ಈ ಗಡುವು ಮೀರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದೆ.

ಮಂಗಳವಾರ ಬ್ರಿಟನ್‌, ಅಮೆರಿಕ, ಫ್ರಾನ್ಸ್‌, ಕೆನಡಾ, ಜರ್ಮನಿ, ಇಟಲಿ ಹಾಗೂ ಜಪಾನ್‌ ಒಳಗೊಂಡ 'ಜಿ-7' ಗುಂಪಿನ ದೇಶಗಳು ಸಭೆ ನಡೆಸಲಿದ್ದು, ಆ.31ರ ನಂತರವೂ ಅಷ್ಘಾನಿಸ್ತಾನದಲ್ಲಿ ಅಮೆರಿಕ ಹಾಗೂ ಮಿತ್ರಪಡೆಗಳು ಇರಬೇಕು, ಪೂರ್ತಿ ಕರೆಸಿಕೊಳ್ಳಬಾರದು ಎಂದು ಒತ್ತಾಯಿಸುವ ಸಾಧ್ಯತೆ ಇದೆ. ಆಫ್ಘನ್‌ನಲ್ಲಿನ ವಿದೇಶಿಗರ ತೆರವು ಕಾರಾರ‍ಯಚರಣೆ ಇನ್ನೂ ಮುಗಿಯದ ಕಾರಣ ಪಡೆಗಳ ಇರುವಿಕೆ ಅಗತ್ಯ ಎಂದು ಹೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್‌ ಸೋಮವಾರ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.

ಅಮೆರಿಕದ ಗುಪ್ತಚರ ಸಂಸ್ಥೆಯ ನಿರ್ದೇಶಕ ವಿಲಿಯಂ ಬನ್ಸ್‌ರ್‍ ತಾಲಿಬಾನ್‌ ನಾಯಕ ಅಬ್ದುಲ್‌ ಘನಿ ಬರಾದರ್‌ ಜೊತೆಗೆ ಕಾಬೂಲ್‌ನಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಅಷ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಮುಖಾಮುಖಿಯಾಗಿ ನಡೆದ ಅತಿದೊಡ್ಡ ಮಾತುಕತೆ ಇದಾಗಿದೆ. ಹಾಗಾಗಿ ಈ ಮಾತುಕತೆ ಜಗತ್ತಿನ ಕುತೂಹಲ ಕೆರಳಿಸಿದೆ.

ಆಗಸ್ಟ್‌ 31ರ ಒಳಗೆ ಸಂಪೂರ್ಣ ಸೈನ್ಯವನ್ನು ಅಮೆರಿಕ ಹಿಂಪಡೆಯುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ತಾಲಿಬಾನ್‌ ಉಗ್ರಗಾಮಿಗಳು ಅಷ್ಘಾನಿಸ್ತಾನವನ್ನು ಆಗಸ್ಟ್‌ 15ರಂದು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಇದಾದ ನಂತರ ಮೊದಲ ಬಾರಿಗೆ ಜೋ ಬೈಡೆನ್‌ ಸರ್ಕಾರದ ಪರ ಬನ್ಸ್‌ರ್‍, ತಾಲಿಬಾನ್‌ ನಾಯಕನೊಂದಿಗೆ ಮಾತುಕತೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+