• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ವಿಟ್ಟರ್‌ನಲ್ಲಿ ಮಾಜಿ ಪತ್ನಿ ಸಹಿತ ಎಲ್ಲರನ್ನೂ ಅನ್‌ಫಾಲೋ ಮಾಡಿದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 8: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವಿಟ್ಟಿಗರಲ್ಲಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಿಂದ ಇದ್ದಕ್ಕಿದ್ದಂತೆ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಇದರಲ್ಲಿ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಕೂಡ ಸೇರಿದ್ದಾರೆ. ಇದು ಟ್ರೋಲಿಗರಿಗೆ ಆಹಾರವಾಗಿದೆ.

ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಇಮ್ರಾನ್ ಖಾನ್ ಯಾರನ್ನೂ ಫಾಲೋ ಮಾಡದೆ ಇರುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ತಮ್ಮ ಹಿಂದಿನ ಪ್ರಧಾನಿ ನವಾಜ್ ಷರೀಫ್ ಹಾದಿ ತುಳಿದಿದ್ದಾರೆ ಎನ್ನಲಾಗಿದೆ. ನವಾಜ್ ಷರೀಫ್ ಕೂಡ ಟ್ವಿಟ್ಟರ್‌ನಲ್ಲಿ ಯಾವ ಖಾತೆಯನ್ನೂ ಫಾಲೋ ಮಾಡುತ್ತಿಲ್ಲ.

ಈ ಅನ್‌ಫಾಲೋಯಿಂಗ್ ಕಾರ್ಯಾಚರಣೆಗೂ ಕೆಲವು ದಿನಗಳ ಮುನ್ನ ಪತ್ರಕರ್ತ ಹಮೀದ್ ಮಿರ್ ಅವರನ್ನು ಅನ್‌ಫಾಲೋ ಮಾಡಿದ್ದರು. ಇಮ್ರಾನ್ ಸರ್ಕಾರವನ್ನು ಹಮೀದ್ ಟೀಕಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿತ್ತು. ಆದರೆ ತಮ್ಮ ಮೊದಲ ಪತ್ನಿ, ನಿರ್ಮಾಪಕಿ ಜೆಮಿಮಾ ಗೋಲ್ಡ್‌ಸ್ಮಿತ್ ಅವರನ್ನು ಅನ್‌ಫಾಲೋ ಮಾಡಿರುವುದು ಇಮ್ರಾನ್ ಅವರನ್ನು ಟ್ರೋಲ್ ಮಾಡಲು ನೆಟ್ಟಿಗರಿಗೆ ವಿಷಯ ಸಿಕ್ಕಂತಾಗಿದೆ.

2010ರಲ್ಲಿ ಟ್ವಿಟ್ಟರ್ ಖಾತೆ ಸೃಷ್ಟಿಸಿದ್ದ ಇಮ್ರಾನ್ ಖಾನ್, ಮೊದಲ ಪತ್ನಿ ಜೆಮಿಮಾ ಅವರಿಂದ ದೂರವಾಗಿ ಎರಡು ಬಾರಿ ಮದುವೆಯಾದ ಬಳಿಕವೂ ಟ್ವಿಟ್ಟರ್‌ನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದರು. ಜೆಮಿಮಾ ಅಲ್ಲದೆ ಇಮ್ರಾನ್ 19 ಇತರೆ ಖಾತೆಗಳನ್ನು ಕೂಡ ಹಿಂಬಾಲಿಸುತ್ತಿದ್ದರು. ಇದರ ಬಗ್ಗೆ ಟ್ವಿಟ್ಟಿಗರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಜೆಮಿಮಾ ಅವರನ್ನು ಅನ್‌ಫಾಲೋ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ನವಾಜ್ ಷರೀಫ್ ಅವರ ಖಾತೆಯನ್ನು ನೋಡಿದ ಇಮ್ರಾನ್ ಖಾನ್, ಅವರು ಯಾರನ್ನೂ ಫಾಲೋ ಮಾಡುತ್ತಿಲ್ಲ ಎಂಬುದನ್ನು ಕಂಡು ಕೆರಳಿದ್ದಾರೆ. ಅವರೇ ಯಾರನ್ನೂ ಫಾಲೋ ಮಾಡದೆ ಇರುವಾಗ ನಾನೇಕೆ ಫಾಲೋ ಮಾಡಬೇಕೆಂದು ಅನ್‌ಫಾಲೋ ಮಾಡಿದ್ದಾರೆ ಎಂದು ಅನೇಕರು ಲೇವಡಿ ಮಾಡಿದ್ದಾರೆ.

English summary
Pakistan Prime Minister Imran Khan amused twitterians by unfollowing everyone including his first wife Jemima Goldsmith.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X