ಆಗಸ್ಟ್ 14ರೊಳಗೆ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ
ಇಸ್ಲಾಮಾಬಾದ್, ಜುಲೈ 29: ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನ(ಆಗಸ್ಟ್ 14)ದೊಳಗೆ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ಇಂದು ಪ್ರಕಟಿಸಿದೆ.
ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್(172) ದಾಟಲು ಸಣ್ಣ ಪುಟ್ಟ ಪಕ್ಷಗಳು ಹಾಗೂ ಪಕ್ಷೇತರರ ನೆರವು ಪಡೆಯಲಾಗುವುದು ಎಂದು ಪಿಟಿಐ ವಕ್ತಾರ ನಯೀನುಲ್ ಹಕ್ ಹೇಳಿದರು.
ಪಾಕಿಸ್ತಾನದ ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.

ಇಲ್ಲಿ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ 172. ಈಗಾಗಲೇ 117ಸ್ಥಾನಗಳಲ್ಲಿ ಜಯಗಳಿಸಿರುವ ಪಿಟಿಐ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತ. ಈ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳ ಬಗ್ಗೆ ಮಾಜಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಪರಾಮರ್ಶಿಸುತ್ತಿದ್ದಾರೆ. ಪಿಪಿಪಿ 43 ಹಾಗೂ ಪಿಎಂಎಲ್ ಎನ್ 63 ಸ್ಥಾನಗಳು ಹಾಗೂ ಇತರೆ 47 ಸ್ಥಾನಗಳನ್ನು ಗೆದ್ದಿದ್ದಾರೆ.












Click it and Unblock the Notifications