ಇಮ್ರಾನ್ ಖಾನ್ ಮನೆಯಲ್ಲಿ ಅಡಗಿದ್ದಾರಾ 40 ಉಗ್ರರು?
ಪಾಕಿಸ್ತಾನ: ಭಯೋತ್ಪಾದಕರ ಬೆಂಬಲಿಗ ದೇಶ ಭಾರತದ ಪಕ್ಕಾ ಶತ್ರು ಪಾಕಿಸ್ತಾನ ಧಗಧಗಿಸುತ್ತಿದೆ. ಅದ್ರಲ್ಲೂ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿಚಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಅನ್ನೋದು ಜಗತ್ತಿಗೇ ಗೊತ್ತು. ಆದರೆ ಈ ಹೊತ್ತಲ್ಲೇ ಪಾಕ್ ಮಾಜಿ ಪಿಎಂ ಮನೆಯಲ್ಲಿ 40 ಉಗ್ರರು ಅಡಗಿರುವ ಆರೋಪ ಕೇಳಿಬಂದಿದೆ, ಈ ಕಾರಣಕ್ಕೆ ತಕ್ಷಣ ಪೊಲೀಸರು ಇಮ್ರಾನ್ ಖಾನ್ ಮನೆ ಸುತ್ತುವರಿದಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ಹಲವು ಆರೋಪವಿದೆ. ಅದ್ರಲ್ಲೂ ಇಮ್ರಾನ್ ಖಾನ್ 5 ಸಾವಿರ ಕೋಟಿ ಹಗರಣ ನಡೆಸಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಮಾಡಿತ್ತು. ಹೊಸ ಗಂಭೀರ ಆರೋಪ ಇಮ್ರಾನ್ ಖಾನ್ ವಿರುದ್ಧ ಕೇಳಿಬಂದಿದ್ದು, ಉಗ್ರರಿಗೆ ಇಮ್ರಾನ್ ಮನೆಯಲ್ಲಿ ಆಶ್ರಯ ನೀಡಲಾಗಿದೆ ಎನ್ನಲಾಗಿದೆ. ಅದ್ರಲ್ಲೂ 40 ಉಗ್ರರು ಇಮ್ರಾನ್ ಮನೆಯಲ್ಲಿ ಇದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಮಾಡಿದೆ. ಹೀಗಾಗಿ ಇಮ್ರಾನ್ ಬೆಂಬಲಿಗರಿಗೆ ಮತ್ತೆ ಭಯ ಶುರುವಾಗಿದ್ದು, ಖಾನ್ (Imran Khan) ಬಂಧನಕ್ಕೆ ಹೊಸ ಕುತಂತ್ರ ಶುರುವಾಗಿದೆ ಅಂತಿದ್ದಾರೆ.

ಇಮ್ರಾನ್ ಜೈಲಿಗೆ ತಳ್ಳಲು ಹೊಸ ಕುತಂತ್ರ?
ಹೌದು, ಇಂತಹದ್ದೊಂದು ಆರೋಪವನ್ನ ತಳ್ಳಿ ಹಾಕುವಂತಿಲ್ಲ. ಯಾಕೆ ಗೊತ್ತಾ ಈಗಾಗಲೇ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನದ ಕೇಂದ್ರ ಸರ್ಕಾರ ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಹಲವು ಬಾರಿ ಪಿತೂರಿ ಮಾಡಿದೆ. ಇದ್ರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಮಾಡಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೆ ಪಾಕ್ ಸೇನೆ & ಐಎಸ್‌ಐ ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Imran Khan Arrest) ಪಾಠ ಕಲಿಸಬಹುದು ಎಂಬ ಕುತಂತ್ರ ಅಡಗಿರಬಹುದು.
ಖಾನ್ ಮನೆ ಸುತ್ತಲೂ ಪೊಲೀಸರ ದಂಡು!
ಪಾಕಿಸ್ತಾನದ ಲಾಹೋರ್‌ನಲ್ಲಿ ಜಮಾನ್ ಪಾರ್ಕ್ ಎಂಬ ಪ್ರದೇಶ ಇದ್ದು, ಇದೇ ಜಾಗದಲ್ಲಿ ಇಮ್ರಾನ್ ಖಾನ್ ಮನೆ ಇದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಖಾನ್‌ಗೆ ಸೇರಿದ ಜಮಾನ್ ಪಾರ್ಕ್‌ನ ಮನೆಯನ್ನ ಇದೀಗ ಸುತ್ತುವರಿದಿದ್ದಾರೆ. ಈ ಮೂಲಕ ಇಮ್ರಾನ್ ಖಾನ್‌ಗೆ ಹೊಸ ಕಂಟಕ ಶುರುವಾಗಿದೆ. 40 ಉಗ್ರರನ್ನು ನಮ್ಮ ವಶಕ್ಕೆ ಒಪ್ಪಿಸಿ, ಇಲ್ಲವಾದಲ್ಲಿ ನಿಮ್ಮ ಮನೆ ಒಳಗೆ ನುಗ್ಗುತ್ತೇವೆ ಎಂದು ಪಂಜಾಬ್ ಸರ್ಕಾರ ಮತ್ತು ಪಂಜಾಬ್ ಪ್ರಾಂತ್ಯದ ಪೊಲೀಸರು ಇಮ್ರಾನ್ ಖಾನ್‌ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಏನಪ್ಪಾ ಇದು ಇಮ್ರಾನ್ ಖಾನ್?
ನಿನ್ನೆಯಷ್ಟೇ ತಮ್ಮ ಮೇಲಿರುವ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ನೀಡುವಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದರು. ಇಮ್ರಾನ್ ಅರ್ಜಿ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಕಳೆದ ವಾರ ಅರೆಸ್ಟ್ ಆಗಿ ಜೈಲು ಸೇರಿದ್ದ ಇಮ್ರಾನ್ ಖಾನ್, ಮೊನ್ನೆ ಮೊನ್ನೆ ತಾನೆ ರಿಲೀಸ್ ಆಗಿದ್ದರು. ಹೀಗೆ ರಿಲೀಸ್ ಆಗುತ್ತಿದ್ದಂತೆ ಅಲರ್ಟ್ ಆಗಿ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ನೋಡಿದರೆ ಇಮ್ರಾನ್ ಖಾನ್ ಮನೆಯೊಳಗೆ 40 ಉಗ್ರರು ಅಡಗಿರುವ ಆರೋಪ ಕೇಳಿಬಂದಿದೆ.

ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರ
ಇಮ್ರಾನ್ ವಿರುದ್ಧ ಪಾಕಿಸ್ತಾನ ಸೇನೆ & ಪಾಕಿಸ್ತಾನ ಗುಪ್ತಚರ ಸಂಸ್ಥೆ ISI ಮಸಲತ್ತು ನಡೆಸುತ್ತಿರುವ ಆರೋಪವಿದೆ. ಈ ಸಂದರ್ಭದಲ್ಲಿ ಪಾಕ್ ಸರ್ಕಾರ ಕೂಡ ಇವರ ಜೊತೆ ಕೈಜೋಡಿಸಿದ ಗಂಭೀರ ಆರೋಪ ಕೇಳಿಬರುತ್ತಿದೆ. ಮೇ 9ರ ನಂತರ ಖಾನ್ ಬೆಂಬಲಿಗರು ನಡೆಸಿರುವ ಹಿಂಸೆಗೆ ಅವರನ್ನೇ ಹೊಣೆ ಮಾಡೋಕೆ ಎಲ್ಲಾ ತಯಾರಿ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಾಮೀನು ಪಡೆಯಲು ಇಮ್ರಾನ್ ಖಾನ್ ಲಾಹೋರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಶನಿವಾರ ಇಮ್ರಾನ್ ಹಣೆಬರಹ ನಿರ್ಧಾರವಾಗಲಿದೆ. ಈ ಮಧ್ಯೆ ಖಾನ್ ವಿರುದ್ಧ ಉಗ್ರರ ಬೆಂಬಲಿಸಿದ ಆರೋಪ ಕೂಡ ಕೇಳಿಬಂದಿದೆ.
ಒಟ್ನಲ್ಲಿ ಪಾಕಿಸ್ತಾನದಲ್ಲಿ ಏನೂ ಸರಿಯಲ್ಲ, ಅದರಲ್ಲೂ ಅರಾಜಕತೆ ತಾಂಡವ ಆಡುತ್ತಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಇಮ್ರಾನ್ ವಿರುದ್ಧ ಗಂಭೀರ ಆರೋಪ ಹೊರಿಸಿ, ಜೈಲಿಗೆ ಹಾಕಲು ಸಿದ್ಧತೆ ನಡೆಸಿರುವ ಆರೋಪ ಕೇಳಿಬಂದಿದೆ. ಹೀಗಾಗಿಯೇ ಇಮ್ರಾನ್ ಖಾನ್ ಬೆಂಬಲಿಗರು ಮತ್ತೆ ಹಿಂಸಾಚಾರ ನಡೆಸಿ, ಪಾಕಿಸ್ತಾನಕ್ಕೆ ಬೆಂಕಿ ಹಚ್ಚುವ ಬಗ್ಗೆ ಭಯ ಶುರುವಾಗಿದೆ.












Click it and Unblock the Notifications