Pakistan News: ಪಾಕಿಸ್ತಾನ ಮಾಜಿ ಪ್ರಧಾನಿಗೆ ಸಿಗುತ್ತಾ ಜಾಮೀನು?

ಇಸ್ಲಾಮಾಬಾದ್: ಇಮ್ರಾನ್ ಖಾನ್ ಜೈಲೂಟ ತಿನ್ನುತ್ತಿದ್ದಾರೆ, ಜೈಲಿನಲ್ಲಿ ನರಳಾಡುತ್ತಿದ್ದು ನನ್ನ ಹೊರಗೆ ಕರೆದುಕೊಂಡು ಹೋಗಿ ಅಂತಿದ್ದಾರೆ. ಇದೇ ಸಂದರ್ಭದಲ್ಲಿ ಪಾಕ್ ಮಾಜಿ ಪ್ರಧಾನಿಗೆ ರಿಲೀಫ್ ಸಿಗುವ ಮುನ್ಸೂಚನೆ ಸಿಕ್ಕಿದೆ. ತಮ್ಮ ವಿರುದ್ಧದ ಆದೇಶ ರದ್ದು ಮಾಡಿ ಅಂತಾ ಇಮ್ರಾನ್ ಇದೀಗ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇಮ್ರಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಾಕ್ ಚುನಾವಣೆ ಆಯೋಗವು ಕಳೆದ ವರ್ಷ ಕೇಸ್ ದಾಖಲಿಸಿತ್ತು. ಉಡುಗೊರೆ ಮಾರಾಟದಿಂದ 14 ಕೋಟಿ ರೂಪಾಯಿ ಹಣಗಳಿಸಿದ್ದ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಇಸ್ಲಾಮಾಬಾದ್‌ ಜಿಲ್ಲಾ & ಸೆಷನ್ಸ್ ಕೋರ್ಟ್ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಗೆ 3 ವರ್ಷ ಜೈಲು ಹಾಗೂ 1 ಲಕ್ಷದ ದಂಡ ವಿಧಿಸಿದೆ. ಇದೀಗ ಜೈಲಿನಲ್ಲಿರುವ ಇಮ್ರಾನ್ ತಮ್ಮ ವಿರುದ್ಧ ಕೆಳ ಹಂತದ ಕೋರ್ಟ್ ನೀಡಿದ್ದ ಆದೇಶ ರದ್ದು ಮಾಡಲು ಕೋರಿ, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇಮ್ರಾನ್‌ ಖಾನ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನ ಇಸ್ಲಾಮಾಬಾದ್‌ನ ಹೈಕೋರ್ಟ್‌ ಆಗಸ್ಟ್‌ 22ರಂದು ನಡೆಸಲಿದೆ.

Imran Khan eye on Islamabad high court to get bail

ಅದು ಜೈಲೋ.. ಇಲ್ಲ ನರಕವೋ!

ಇಮ್ರಾನ್‌ಗೆ ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ, ಹುಳಗಳ ಕಾಟ ಇರುವ ಜೈಲಿನ ಕೋಣೆಯಲ್ಲಿ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿತ್ತು. ಸ್ವತಃ ಇಮ್ರಾನ್ ಖಾನ್ ಪರ ವಕೀಲರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಕೊನೆಗೂ ಈ ವಿಚಾರ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲು ಏರಿತ್ತು. ಆಗಸ್ಟ್ 12ರಂದು ತೀರ್ಪು ನೀಡಿದ್ದ ಪಾಕಿಸ್ತಾನದ ಕೋರ್ಟ್, ಇಮ್ರಾನ್‌ಗೆ ಜೈಲಿನಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯವೂ ಸೇರಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಭೇಟಿ ಆಗಲು ಅವಕಾಶ ನೀಡಿ ಎಂದು ಹೇಳಿತ್ತು. ಈ ಮೂಲಕ ಜೈಲಿನಲ್ಲಿ ನರಳುತ್ತಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ನಿಟ್ಟುಸಿರು ಬಿಟ್ಟಿದ್ದರು. ಇದೀಗ ತಮ್ಮ ವಿರುದ್ಧ ವಿಧಿಸಿರುವ 3 ವರ್ಷಗಳ ಜೈಲು ಶಿಕ್ಷೆ ರದ್ದು ಮಾಡುವ ನಿರೀಕ್ಷೆಯಲ್ಲಿದ್ದಾರೆ ಇಮ್ರಾನ್ ಖಾನ್.

ಸೇನೆ ವಿರುದ್ಧ ಮಾತನಾಡಿದ್ದಕ್ಕೆ ಟಾರ್ಗೆಟ್?

ಇಮ್ರಾನ್ ಸ್ಥಿತಿ ಹೇಗಾಗಿದೆ ಎಂದರೆ, ಪಾಕ್ ಸೇನೆ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ. ಜೈಲಿನಲ್ಲಿ ನರಳುವ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ, ಜೈಲಿನಿಂದ ನನ್ನ ಹೇಗಾದರೂ ಹೊರಗಡೆ ಕರೆದುಕೊಂಡು ಹೋಗಿ ಎಂದು ಇಮ್ರಾನ್ ತಮ್ಮ ವಕೀಲರ ಬಳಿ ಬೇಡಿಕೊಂಡಿದ್ದರಂತೆ. ಹೀಗಾಗಿ ಇಮ್ರಾನ್ ಸ್ಥಿತಿ ಬಗ್ಗೆ ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಭಯ ಶುರುವಾಗಿತ್ತು. ಅಲ್ಲದೆ ಪಾಕಿಸ್ತಾನ ಮಾಜಿ ಪ್ರಧಾನಿ ಆರೋಗ್ಯ ಏನಾಗಲಿದೆ? ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಆಗಸ್ಟ್ 12ರ ಹೈಕೋರ್ಟ್ ತೀರ್ಪು ರಿಲೀಫ್ ಕೊಟ್ಟಿತ್ತು.

Imran Khan eye on Islamabad high court to get bail

ಇಮ್ರಾನ್ ಖಾನ್ ಅರ್ಜಿಯಲ್ಲಿ ಏನಿತ್ತು?

ಜೈಲಿನಲ್ಲಿ ತಮಗೆ ಕಾಟ ಕೊಡುತ್ತಿದ್ದಾರೆ ಎಂಬ ಬಗ್ಗೆ ಇಮ್ರಾನ್ ದೂರನ್ನ ಸಲ್ಲಿಸಿದ್ದರು. ಅಲ್ಲದೆ ತಮ್ಮನ್ನ ಅಟಕ್‌ ಜೈಲಿಂದ ರಾವಲ್ಪಿಂಡಿ ಅಡಿಯಾಲ ಜೈಲಿಗೆ ಶಿಫ್ಟ್ ಮಾಡಲು ಕೋರಿದ್ದರು. ಈ ಬಗ್ಗೆ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ವಿಚಾರಣೆಯ ವೇಳೆ ಇಸ್ಲಾಮಾಬಾದ್ ಹೈಕೋರ್ಟ್‌ ಪಾಕ್ ಕೇಂದ್ರ ಸರ್ಕಾರ‌ & ಪಾಕ್‌ನ ಪಂಜಾಬ್‌ ಪ್ರಾಂತ್ಯದ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಆಮರ್‌ ಫಾರೂಕ್‌ ಕಾನೂನು ತಂಡ ಇಮ್ರಾನ್‌ರನ್ನ ಭೇಟಿಯಾಗಲು ಅವಕಾಶ ನೀಡಿ ಎಂದು ಆದೇಶ ನೀಡಿದ್ದರು. ಜೊತೆಗೇ ಕನಿಷ್ಠ ಸೌಲಭ್ಯ ಒದಗಿಸಲು ತಿಳಿಸಿದ್ದರು. ಈಗ ಜಾಮೀನು ಕೂಡ ಕೊಡುವ ನಿರೀಕ್ಷೆಯಲ್ಲಿ ಇಮ್ರಾನ್ ಖಾನ್ ಇದ್ದಾರೆ.

Imran Khan eye on Islamabad high court to get bail

ಒಟ್ನಲ್ಲಿ ಇಮ್ರಾನ್ ಖಾನ್ ರಿಲೀಸ್ ಆಗ್ತಾರಾ? ಅಥವಾ ಜೈಲಿನಲ್ಲೇ ಇರ್ತಾರಾ? ಅನ್ನೋ ಪ್ರಶ್ನೆಗೆ ಇನ್ನು ಕೆಲವೇ ದಿನದಲ್ಲಿ ಉತ್ತರ ಸಿಗಲಿದೆ. ಅಕಸ್ಮಾತ್ ಇಮ್ರಾನ್ ಖಾನ್ ರಿಲೀಸ್‌ಗೆ ಇಸ್ಲಾಮಾಬಾದ್ ಹೈಕೋರ್ಟ್ ಒಪ್ಪಿದರೆ ಪಾಕಿಸ್ತಾನದ ಚುನಾವಣೆ ಹಣೆಬರಹವೇ ಬದಲಾಗಿ ಹೊಗುವ ನಿರೀಕ್ಷೆ ಇದೆ. ಆದರೆ ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಲು ಆಗಸ್ಟ್ 22ರ ತನಕ ಕಾಯಬೇಕು. ಹೈಕೋರ್ಟ್ ರಿಲೀಫ್ ನೀಡಿದರೆ ಇಮ್ರಾನ್ ಮತ್ತೆ ಮೈಕೊಡವಿ ಪಾಕಿಸ್ತಾನದ ರಾಜಕಾರಣಕ್ಕೆ ಭರ್ಜರಿ ರೀ ಎಂಟ್ರಿ ಕೊಡೋದು ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+