Get Updates
Get notified of breaking news, exclusive insights, and must-see stories!

35 ವರ್ಷಗಳ ಕಾಲ ಹಾಯಾಗಿ ಇರಬಹುದು ಅಮೆರಿಕ, ಇರಾನ್ ಪತನವಾದರೆ ಅಮೆರಿಕಗೆ ಏನೆಲ್ಲಾ ಲಾಭ? America And Iran

ಅಮೆರಿಕ ಇದೀಗ ತನ್ನ ಒಂದೊಂದೇ ಶತ್ರು ದೇಶಗಳನ್ನು ಸೈಲೆಂಟ್ ಮಾಡುತ್ತಾ ಬರುತ್ತಿದೆ. ಜಗತ್ತಿನ ದೊಡ್ಡಣ್ಣ ಎಂಬ ಪಟ್ಟ ಪಡೆದುಕೊಂಡಿರುವ ಅಮೆರಿಕ ಕೆಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟ ಹಾಗೂ ಸಮಸ್ಯೆಗಳ ಸುಳಿಗೆ ಸಿಲುಕಿ ಒದ್ದಾಡಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ಭವಿಷ್ಯದಲ್ಲಿ ಜಗತ್ತಿನ ದೊಡ್ಡಣ್ಣ ಎಂಬ ಪಟ್ಟ ಕಳೆದುಕೊಳ್ಳಲಿದೆ ಎಂಬ ಚರ್ಚೆಗಳು ಶುರುವಾಗಿದ್ದವು. ಆದರೆ ಈಗ ಬೇರೆಯದ್ದೇ ಲೆಕ್ಕಾಚಾರ ಶುರುವಾಗಿದೆ. ವೆನೆಜುವೆಲಾ ನಂತರ ಮತ್ತೊಂದು ದೊಡ್ಡ ಗೆಲುವು ಅಮೆರಿಕಗೆ ಸಿಗುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ.

ಅಮೆರಿಕ ಮತ್ತು ಇರಾನ್ ನಡುವೆ ಎಷ್ಟು ದ್ವೇಷ ಇದೆ & ಇಬ್ಬರೂ ಅದೆಷ್ಟು ಬಡಿದಾಡುತ್ತಾರೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ. ಇಸ್ರೇಲ್ ಪರವಾಗಿ ಅಮೆರಿಕ ನಿಂತಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಇರಾನ್ ಸೈಲೆಂಟ್ ಮಾಡಲು ಅಮೆರಿಕ ನಾನಾ ತಂತ್ರ ಹೂಡುತ್ತಿದೆ. ಇಂತಹ ಸಮಯದಲ್ಲೇ ಖುದ್ದಾಗಿ ಇರಾನ್ ನೆಲದಲ್ಲಿ ಘೋರ ಹೋರಾಟಗಳು ಶುರುವಾಗಿವೆ. ಹೀಗಿದ್ದಾಗ ಅಮೆರಿಕ ಸೇನೆ ನೇರವಾಗಿ ಇರಾನ್ ಒಳಗೆ ನುಗ್ಗಿ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಾ? ಎಂಬ ಚರ್ಚೆ ನಡೆಯುತ್ತಿದೆ. ಇಷ್ಟೆಲ್ಲದರ ನಡುವೆಯೇ ದಿಢೀರ್ ಹೊಸ ಲೆಕ್ಕಾಚಾರ ಶುರುವಾಗಿದೆ.

If Iran Falls US Prospects of 35 Years of Light and Qatar Consent

35 ವರ್ಷಗಳ ಕಾಲ ಹಾಯಾಗಿ ಇರಬಹುದು

ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಇರಾನ್ ಈಗ ಇಕ್ಕಟ್ಟಿಗೆ ಸಿಲುಕಿದೆ, ಸರ್ವಾಧಿಕಾರ ಹಾಗೂ ಆಡಳಿತದ ವೈಫಲ್ಯಗಳ ನಡುವೆ ಇರಾನ್ ಪ್ರಜೆಗಳು ರೊಚ್ಚಿಗೆದ್ದು ಹೋರಾಟ ಶುರು ಮಾಡಿ ಹಿಂಸೆಗೆ ಇಳಿದಿದ್ದಾರೆ. ಆದರೆ ಇದೇ ಸಮಯವನ್ನು ಅಮೆರಿಕ ತನ್ನ ದಾಳವಾಗಿ ಬಳಸಿಕೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಅಮೆರಿಕದ ಲೆಕ್ಕಾಚಾರದ ಪ್ರಕಾರವೇ ಎಲ್ಲಾ ನಡೆಯುತ್ತಿದೆಯಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಅದರಲ್ಲೂ ಇರಾನ್ ಪತನವಾಗಿ, ಅಲ್ಲಿನ ಆಡಳಿತ ಕೂಡ ಅಮೆರಿಕ ಮಾತು ಕೇಳುವಂತೆ ಆದರೆ ಅದು ಭವಿಷ್ಯದಲ್ಲಿ ಅಮೆರಿಕಗೆ ದೊಡ್ಡ ಲಾಭ ಮಾಡಲಿದೆ. 35 ವರ್ಷಗಳ ಕಾಲ ಹಾಯಾಗಿ ಇರಬಹುದು ಅಮೆರಿಕ ಅಂತಿದ್ದಾರೆ ತಜ್ಞರು.

9700 ಚದರ ಕಿಲೋ ಮೀಟರ್ ತೈಲ!

ಇರಾನ್ ಜೊತೆಗೆ ವ್ಯಾಪಾರ ಮಾಡುವ ದೇಶಗಳಿಗೆ ಶೇಕಡಾ 25ರಷ್ಟು ಸುಂಕ ಹೇರಿಕೆ ಮಾಡಿ ಈಗಾಗಲೇ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕೂ ಮೊದಲು, ವೆನೆಜುವೆಲಾ ಜೊತೆಗೆ ವ್ಯಾಪಾರ ಮಾಡುವವರ ಮೇಲೂ ಅಮೆರಿಕ ಸವಾರಿ ಮಾಡಿತ್ತು. 1990ರ ಸಮಯದಲ್ಲಿ ಇರಾನ್ & ಕತಾರ್ ಮಧ್ಯೆ ಗಡಿ ಭಾಗದಲ್ಲಿ ನೈಸರ್ಗಿಕ ಸಂಪನ್ಮೂಲ ಪತ್ತೆ ಆಗಿತ್ತು. ಈ ಅನಿಲ ನಿಕ್ಷೇಪವು ಬರೋಬ್ಬರಿ 9700 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿದೆ.

9700 ಚದರ ಕಿಲೋ ಮೀಟರ್ ಪೈಕಿ 3700 ಚದರ ಕಿ.ಮೀ. ಇರಾನ್ ವಶದಲ್ಲೇ ಇದೆ. ಉಳಿದ ಭಾಗವು ಕತಾರ್ ಗಡಿಯಲ್ಲಿದೆ. ಹೀಗಿದ್ದಾಗ, ಇರಾನ್ 14 ಟ್ರಿಲಿಯನ್ ಘನ ಮೀಟರ್ ಅನಿಲ ಹೊಂದಿದ್ದು, ಭಾರಿ ದೊಡ್ಡ ಮೊತ್ತದ ತೈಲ ಇಲ್ಲಿದೆ. ಇಷ್ಟೆಲ್ಲದರ ನಡುವೆ ಅಮೆರಿಕ ಈಗ ಹೊಸ ಲೆಕ್ಕಾಚರ ಹಾಕಿಕೊಂಡು ಮುಂದೆ ನುಗ್ಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ದೊಡ್ಡಣ್ಣನ ಶತ್ರುಗಳು. ಅಕಸ್ಮಾತ್ ಈಗ ಇರಾನ್ ಪತನವಾದರೆ ಅಮೆರಿಕಗೆ ಅದು ದೊಡ್ಡ ಲಾಭವನ್ನೇ ಮಾಡಲಿದೆ ಎಂಬ ಮಾತು ಕೇಳಿಬರುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+