• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮೇಲೆ "4 ಬಾರಿ ಗುಂಡು ಹಾರಿಸಲಾಗಿದೆ" ಎಂದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ನ. 04: ಪಾಕಿಸ್ತಾನದಲ್ಲಿ ಪ್ರತಿಭಟನಾ ಮೆರವಣಿಗೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ತಮ್ಮ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಲಾಗಿದೆ ಎಂದಿದ್ದಾರೆ.

ಗುರುವಾರ ಪಾಕಿಸ್ತಾನದ ಪಂಜಾಬ್‌ನ ವಜೀರಾಬಾದ್ ಪಟ್ಟಣದಲ್ಲಿ ನಡೆದ ಹತ್ಯೆ ಯತ್ನದಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಪಾಕ್ ಮುಂದಿರುವ ಪ್ರಶ್ನೆಗಳುಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಪಾಕ್ ಮುಂದಿರುವ ಪ್ರಶ್ನೆಗಳು

ವಜೀರಾಬಾದ್‌ನಲ್ಲಿ ನಡೆಯುತ್ತಿದ್ದ ಲಾಂಗ್ ಮಾರ್ಚ್‌ನಲ್ಲಿ ಕಂಟೈನರ್ ಮೇಲೆ ನಿಂತಿದ್ದಾಗ ಹತ್ಯೆ ಯತ್ನದ ವೇಳೆ ನಾಲ್ಕು ಬುಲೆಟ್‌ಗಳು ತಮ್ಮ ಕಾಲುಗಳಿಗೆ ತಗುಲಿದ್ದವು ಎಂದು ಶುಕ್ರವಾರ ಹೇಳಿದ್ದಾರೆ.

"ದಾಳಿಯ ಹಿಂದಿನ ದಿನ, ವಜೀರಾಬಾದ್‌ನಲ್ಲಿ ಅಥವಾ ಗುಜರಾತ್‌ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆಂದು ನನಗೆ ತಿಳಿದಿತ್ತು" ಎಂದು ಮಾಜಿ ಪ್ರಧಾನಿ ವಿಡಿಯೋ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ದಾಳಿಯ ನಂತರ ಲಾಹೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ಘಟನೆ ಕುರಿತು ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ದಾಳಿಯ ಹಿಂದಿನ ದಿನವೇ ನನಗೆ ತಿಳಿದಿತ್ತು!

ದಾಳಿಯ ಹಿಂದಿನ ದಿನವೇ ನನಗೆ ತಿಳಿದಿತ್ತು!

ಲಾಹೋರ್-ಇಸ್ಲಾಮಾಬಾದ್ ಲಾಂಗ್ ಮಾರ್ಚ್‌ನಲ್ಲಿ ವಜೀರಾಬಾದ್ ಅಥವಾ ಗುಜರಾತ್‌ನಲ್ಲಿ ನನ್ನ ಮೇಲೆ ದಾಳಿ ನಡೆಯಲಿದೆ ಎಂದು ತಿಳಿದಿತ್ತು ಎಂದಿರುವ ಇಮ್ರಾನ್ ಖಾನ್, ನನ್ನ ಕೊಲೆಯನ್ನು ಧಾರ್ಮಿಕ ಉಗ್ರಗಾಮಿಗಳ ತಲೆಗೆ ಕಟ್ಟಲು ಯತ್ನಿಸಲಾಗಿತ್ತು ಎಂದಿದ್ದಾರೆ.

ನನ್ನ ವಿರುದ್ಧ ಯೋಜಿತವಾಗಿ ಕೆಲಸ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, "ಮೊದಲನೆಯದಾಗಿ, ಅವರು ನನ್ನ ಮೇಲೆ ಧರ್ಮನಿಂದೆಯ ಆರೋಪ ಮಾಡಿದರು. ಅವರು ವಿಡಿಯೋಗಳನ್ನು ತಯಾರಿಸಿ ಬಿಡುಗಡೆ ಮಾಡಿದರು ಅದನ್ನು ಆಡಳಿತ ಪಕ್ಷಗಳಲ್ಲಿ ಒಂದಾಗಿರುವ PMLN ಪ್ರಚಾರ ಮಾಡಿತು. ಇದು ಡಿಜಿಟಲ್ ಜಗತ್ತಾಗಿರುವುದರಿಂದ ಇದನ್ನು ಯಾರು ಮಾಡುತ್ತಿದ್ದಾರೆಂದು ನನಗೆ ತಿಳಿದಿತ್ತು" ಎಂದಿದ್ದಾರೆ.

ಗುಂಡಿನ ದಾಳಿಯಲ್ಲಿ 13 ಮಂದಿಗೆ ಗಾಯ

ಗುಂಡಿನ ದಾಳಿಯಲ್ಲಿ 13 ಮಂದಿಗೆ ಗಾಯ

"ಮೊದಲು ನಾನು ಧರ್ಮವನ್ನು ನಿಂದಿಸಿದ್ದೇನೆ ಎಂದು ಬಿಂಬಿಸಲಾಯಿತು. ನಂತರ ವಜೀರಾಬಾದ್‌ನಲ್ಲಿ ನಡೆದ ಹತ್ಯೆಯ ಯತ್ನವನ್ನು ಇಮ್ರಾನ್ ಖಾನ್ ಅವರನ್ನು ಧಾರ್ಮಿಕ ಉಗ್ರಗಾಮಿ ಕೊಂದರು ಎಂದು ಹೇಳುವ ಯೋಜನೆಯಾಗಿತ್ತು" ಎಂದು ಆರೋಪಿಸಿದ್ದಾರೆ.

ಈ ದಾಳಿಯಲ್ಲಿ ಇಮ್ರಾನ್ ಖಾನ್ ಅವರ ಬೆಂಬಲಿಗರೊಬ್ಬರು ಸಾವನ್ನಪ್ಪಿದ್ದಾರೆ. ಅವರ ಪಕ್ಷದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕರು ಸೇರಿದಂತೆ 13 ಮಂದಿ ಗುರುವಾರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.

"ನಾಲ್ಕು ಜನ ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ"

ಆಸ್ಪತ್ರೆಯ ಗಾಲಿಕುರ್ಚಿಯಲ್ಲಿ ಕುಳಿತುಕೊಂಡು ವಿಡಿಯೋ ಮಾಡಿರುವ ಇಮ್ರಾನ್ ಖಾನ್, ತಮಗೆ ಗುಂಡು ತಗುಲಿರುವ ಎಕ್ಸ್‌ರೇ ಶೀಟ್ ಅನ್ನು, ಹೊಲಿಗೆ ಹಾಕಿರುವ ಗಾಯಗಳನ್ನು ಜನರಿಗೆ ತೋರಿಸಿದ್ದಾರೆ. ಈ ವೇಳೆ ವಿಡಿಯೋದಲ್ಲಿ ಅವರು ಆಸ್ಪತ್ರೆಯ ಗೌನ್ ಧರಿಸಿದ್ದು, ಎರಡು ಕಾಲುಗಳಿಗೆ ಬ್ಯಾಂಡೇಜ್ ಹಾಕಿರುವುದು ಕಾಣಿಸುತ್ತಿದೆ.

ನನಗೆ ನಾಲ್ಕು ಬುಲೆಟ್‌ಗಳು ತಗುಲಿವೆ ಎಂದು ಹೇಳಿದ್ದಾರೆ. "ನಾಲ್ಕು ಜನ ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ" ಎಂದು ಆರೋಪಿಸಿರುವ ಅವರು, "ನಾನು ಅಂತಹ ವ್ಯಕ್ತಿಗಳ ಹೆಸರುಗಳನ್ನು ಹಾಕಿ ವಿಡಿಯೋ ಮಾಡಿದ್ದೇನೆ. ವಿಡಿಯೋವನ್ನು ವಿದೇಶದಲ್ಲಿ ಇಟ್ಟಿದ್ದೇನೆ. ತನಗೆ ಏನಾದರೂ ಆದರೆ ಅದನ್ನು ಬಿಡುಗಡೆ ಮಾಡುತ್ತೇನೆ" ಎಂದು ಹೇಳಿದ್ದಾರೆ.

ಗುಂಡಿನ ದಾಳಿ: ಒಟ್ಟು ಮೂವರು ಆರೋಪಿಗಳ ಬಂಧನ

ಗುಂಡಿನ ದಾಳಿ: ಒಟ್ಟು ಮೂವರು ಆರೋಪಿಗಳ ಬಂಧನ

ಘಟನೆಯಲ್ಲಿ ತನ್ನ ಪಾತ್ರವಿಲ್ಲ ಎಂದಿರುವ ಪಾಕಿಸ್ತಾನ ಸರ್ಕಾರ, ನ್ಯಾಯಯುತ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.

ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಶೂಟರ್‌ಗಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿಯವರೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಒಬ್ಬ ವ್ಯಕ್ತಿ ಮತ್ತು ಇತರ ಇಬ್ಬರು ಅನುಮಾನಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ತಾನು ಏಕಾಂಗಿಯಾಗಿ ಈ ಕೆಲಸ ಮಾಡಿದ್ದು, ಇದರಲ್ಲಿ ಬೇರೆ ಯಾರ ಕೈವಾಡವು ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

English summary
Assassination attempt: Former Pakistan prime minister Imran Khan said he was hit by four bullets. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X