ಪಾಕಿಸ್ತಾನಕ್ಕೆ ಭರ್ಜರಿ ಬಂಪರ್: 80,000 ಕೋಟಿ ಚಿನ್ನ ನಿಕ್ಷೇಪ ಪತ್ತೆ!
ರಾತ್ರೋರಾತ್ರಿ ಪಾಕಿಸ್ತಾನದ ಅದೃಷ್ಟ ಬದಲಾಗಿದೆ. ಹೌದು ಆತಂರಿಕ ಗಲಭೆ, ಉಗ್ರರ ಉಪಟಳ ಹಾಗೂ ರಾಜಕೀಯ ಅಸ್ತಿರತೆ ಸೇರಿದಂತೆ ವಿವಿಧ ಕಾರಣಗಳಿಂದ ಸೋತು ಸುಣ್ಣಗಾಗಿರುವ ಪಾಕಿಸ್ತಾನಕ್ಕೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಆರ್ಥಿಕವಾಗಿ ಪಾಪರ್ ಆಗಿರುವ ಪಾಕಿಸ್ತಾನವೂ ವಿವಿಧ ದೇಶಗಳಿಂದ ಸಾಲ ಪಡೆದುಕೊಳ್ಳುತ್ತಿದೆ. ಅಲ್ಲದೆ ಚೀನಾದಿಂದ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದೆ. ಆದರೆ ಇದೀಗ ಪಾಕಿಸ್ತಾನಕ್ಕೆ 80 ಸಾವಿರ ಕೋಟಿ ರೂಪಾಯಿ ಸಿಗುವ ಭರ್ಜರಿ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಪಾಕಿಸ್ತಾನವು ಈಗಾಗಲೇ ಆರ್ಥಿಕವಾಗಿ ಸೊರಗಿದೆ. ಇದೀಗ ಇನ್ನೇನು ದಿವಾಳಿ ಎಂದು ಘೋಷಿಸಿಕೊಳ್ಳಬೇಕು ಅಂತ ಇರುವ ಪಾಕಿಸ್ತಾನಕ್ಕೆ ಭರ್ಜರಿ ಗುಡ್‌ನ್ಯೂಸ್‌ವೊಂದು ಸಿಕ್ಕಿದ್ದು. ಇದರಿಂದ ಪಾಕಿಸ್ತಾನದಲ್ಲಿ ಭಾರೀ ಸಂಚಲನವೇ ಸೃಷ್ಟಿಯಾಗಿದೆ. ಹೌದು ಒಂದಲ್ಲ.. ಎರಡಲ್ಲ ಬರೋಬ್ಬರಿ 80 ಸಾವಿರ ಕೋಟಿ ಮೌಲ್ಯದ ಚಿನ್ನ ಸಿಕ್ಕಿದೆ. ಸಂಕಷ್ಟದ ಸಮಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಮೊತ್ತ ಸಿಗುತ್ತಿರುವುದು ಪಾಕಿಸ್ತಾನಕ್ಕೆ ಮರುಭೂಮಿಯಲ್ಲಿ ನೀರು ಸಿಕ್ಕಂತಹ ಅನುಭವವನ್ನು ನೀಡುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದ ಚಿನ್ನ ಸಿಕ್ಕಿದ್ದು ಹೇಗೆ ಎನ್ನುವ ವಿವರ ನೋಡೋಣ..

ನೆರೆಯ ಪಾಕಿಸ್ತಾನ ಕಳೆದ ಕೆಲವು ವರ್ಷಗಳಿಂದ ಆರ್ಥಿಕವಾಗಿ ಸಿಕ್ಕಾಪಟ್ಟೆ ಸೊರಗಿದೆ. ಅಲ್ಲದೆ ಅಲ್ಲಿನ ರಾಜಕೀಯ ಅಸ್ತಿರತೆ, ಬಾಂಬ್ ಸ್ಫೋಟ ಹಾಗೂ ಉಗ್ರರ ಉಪಟಳದಿಂದ ಸುಸ್ತಾಗಿದೆ. ಇದೀಗ ಪಾಕಿಸ್ತಾನ ಖುಷಿಪಡುವಂತಹ ಸುದ್ದಿಯೊಂದು ಬಂದಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಮಾರ್ಗದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು ಬರೋಬ್ಬರಿ 80 ಸಾವಿರ ಕೋಟಿ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತಿದೆ.
127 ಸ್ಥಳಗಳಲ್ಲಿ ಮಾದರಿ ಸಂಗ್ರಹಿಸಲಾಗಿದ್ದು. ಪರಿಶೀಲನೆ ನಡೆಸಲಾಗಿದ್ದು, ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಇಲ್ಲಿ ಚಿನ್ನ ಇರುವುದು ಕನ್ಫರ್ಮ್ ಅಂತ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಬಂಪರ್: ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಬೇರೆ ದೇಶಗಳ ಮುಂದೆ ಅಂಗಲಾಚುತ್ತಿತ್ತು. ಚೀನಾ ಹಾಗೂ ಅಮೆರಿಕದಿಂದ ಭಾರೀ ಮೊತ್ತದ ಸಾಲವನ್ನು ಪಾಕಿಸ್ತಾನ ಪಡೆದುಕೊಂಡಿದ್ದು ಇದೀಗ ಆ ಮೊತ್ತವನ್ನು ಹಿಂದಿರುಗಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಈ ರೀತಿ ಇರುವಾಗಲೇ ಚಿನ್ನದ ಗಣಿಯೇ ಸಿಕ್ಕಿದೆ. ಇದರಿಂದ ಪಾಕಿಸ್ತಾನದ ರಾಷ್ಟ್ರದ ಆರ್ಥಿಕ ಪ್ರಗತಿಗೆ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಹಿಮಾಲಯದಲ್ಲಿ ಹುಟ್ಟುವ ಸಿಂಧು ನದಿಯು ಭಾರತದ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸುತ್ತದೆ. ಇದೀಗ ಈ ಭಾಗದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎನ್ನುವುದು ಖಚಿತವಾಗಿದೆ.
ಮೈಕೊಡವಿ ಬರಲಿದೆಯೇ ಪಾಕಿಸ್ತಾನ: ಇನ್ನು ಚಿನ್ನದ ನಿಕ್ಷೇಪ ಪಾಕಿಸ್ತಾನದಲ್ಲಿ ಪತ್ತೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಪಾಕಿಸ್ತಾನವು ಆರ್ಥಿಕ ದಿವಾಳಿತನದಿಂದ ಮೈಕೊಡವಿಕೊಂಡು ಬರಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಆದರೆ, ಚಿನ್ನದ ನಿಕ್ಷೇಪ ಪತ್ತೆಯಾದರೆ ಮಾತ್ರ ಸಾಲದು ಅಲ್ಲಿಂದ ಚಿನ್ನವನ್ನು ತೆಗೆಯಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸುದೀರ್ಘ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಈಗ ಇರುವ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಜೀವದಾನ ಸಿಕ್ಕಂತಾಗಿದೆ. ಆದರೆ ಈ ಅವಕಾಶವನ್ನು ಪಾಕಿಸ್ತಾನ ಯಾವ ರೀತಿ ಬಳಸಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications