ಐಎಸ್ ಐಎಲ್ ನಾಯಕ ಅಲ್ ಬಗ್ದಾದಿ ಕೊನೆ ಕ್ಷಣಗಳು ಹೇಗಿದ್ದವು?
Recommended Video
Abu bakr al-baghdadi died like a coward dog says Trump | Oneindia Kannada
"ಅಲ್ ಬಗ್ದಾದಿ ತನ್ನ ಕೊನೆ ಕ್ಷಣಗಳಲ್ಲಿ ವಿಪರೀತ ಹೆದರಿದ್ದ ಮತ್ತು ಆ ಭಯದಲ್ಲಿ 'ಭುಸುಗುಟ್ಟುತ್ತಿದ್ದ'. ಪುಕ್ಕಲನಂತೆ ಸತ್ತ, ಅದಕ್ಕೂ ಮುನ್ನ ಓಡಿದ ಮತ್ತು ಅಳುತ್ತಿದ್ದ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ಸುರಂಗವೊಂದರ ತುದಿಯ ತನಕ ಓಡಿದ ಆತ ಕೊನೆಗೆ ತಾನು ಕಟ್ಟಿಕೊಂಡಿದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡ. ಅವನ ದೇಹ ಛಿದ್ರಛಿದ್ರವಾಗಿತ್ತು. ಸ್ಥಳದಲ್ಲೇ ಅತನ ಡಿಎನ್ ಎ ಪರೀಕ್ಷೆ ಮಾಡಿದಾಗ ಅದರ ಫಲಿತಾಂಶ ಸಕಾರಾತ್ಮಕವಾಗಿ ಬಂದಿತು ಎಂದು ಅವರು ಹೇಳಿದ್ದಾರೆ.
ಇನ್ನು ಬಗ್ದಾದಿ ಸ್ಫೋಟಿಸಿಕೊಂಡಾಗ ಆತನ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ ಆತನ ಇತರ ಹನ್ನೊಂದು ಮಕ್ಕಳು ಯಾವುದೇ ಗಾಯಗಳಿಲ್ಲದೆ ಬದುಕುಳಿದಿದ್ದಾರೆ. ಮೂರನೇ ವ್ಯಕ್ತಿಗೆ ಅವರನ್ನು ಒಪ್ಪಿಸಿದ್ದು, ಅವರ ನಿಗಾದಲ್ಲಿ ಆ ಮಕ್ಕಳು ಇದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಟ್ರಂಪ್.

ಬೇರೆಯವರು ಕೊನೆ ಕ್ಷಣದಲ್ಲಿ ಭಯದಿಂದ ಸಮಯ ಕಳೆಯುವಂತೆ ಮಾಡಿದ ಧೂರ್ತ, ಅಮೆರಿಕ ಸೇನೆ ದಾಳಿ ಮಾಡಿದಾಗ ಅದೇ ಭಯ, ಆತಂಕದಲ್ಲಿ ಇದ್ದ ಎಂದಿದ್ದಾರೆ.












Click it and Unblock the Notifications