ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಸಂಕ್ಷಿಪ್ತವಾಗಿ

Posted By:
Subscribe to Oneindia Kannada

ವಾಷಿಂಗ್ಟನ್, ಅಕ್ಟೋಬರ್, 26: ಸುಮಾರು 228 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಅಮೆರಿಕ ಪ್ರಜಾಪ್ರಭುತ್ವದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾರರು ನೇರವಾಗಿ ಮತದಾನ ಮಾಡುವುದಿಲ್ಲ. ಪರೋಕ್ಷ ಚುನಾವಣೆಯ ಮೂಲಕ ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುತ್ತದೆ.

ಚುನಾವಣೆ ವಯೋಮಿತಿ:

ಅಮೆರಿಕ ಅಧ್ಯಕ್ಷಿಯ ಚುನಾವಣೆಯು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಇದೇ ನವೆಂಬರ್ 8ರಂದು ನಡೆಯಲಿದ್ದು, ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಅಮೆರಿಕ ಪ್ರಜಾಪ್ರಭುತ್ವ ರಾಷ್ಟ್ರದ ಪೌರರು ಭಾಗವಹಿಸಿ ಮತಚಲಾಯಿಸಬಹುದಾಗಿದೆ.

How the American President is elected

ಪರೋಕ್ಷ ಚುನಾವಣೆ ಹೇಗೆ?:

ಅಮೆರಿಕಾದಲ್ಲಿ ಎರಡೇ ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಆಯ್ಕೆಮಾಡಲಾಗುತ್ತದೆ. ಸಾರ್ವಜನಿಕರು ಎಲೆಕ್ಟೋರಾಲ್ ಕಾಲೇಜುಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಆಯ್ಕೆಯಾದಂತಹ ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ.


ಎಷ್ಟು ಮಂದಿ ಚುನಾಯಿತ ಪ್ರತಿನಿಧಿಗಳಿರುತ್ತಾರೆ?

ಅಮೆರಿಕಾದಲ್ಲಿ ಒಟ್ಟು 50 ರಾಜ್ಯಗಳಿದ್ದು, ಒಟ್ಟು 538 ಮಂದಿ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಈ ಪ್ರತಿನಿಧಿಗಳಲ್ಲಿ ಪ್ರತಿ ರಾಜ್ಯವನ್ನು ಪ್ರತಿನಿಧಿಸಲು ಇಬ್ಬರು ಸೆನೆಟರ್ ಗಳಾಗಿ ಆಯ್ಕೆಯಾಗುತ್ತಾರೆ. ಒಟ್ಟು 100ಮಂದಿ ಸೆನೆಟರ್ ಗಳನ್ನು ಆಯ್ಕೆ ಮಾಡಲಾಗುತ್ತದೆ.

ಚುನಾಯಿತ ಪ್ರತಿನಿಧಿಗಳು ದೇಶದ ಜನಸಂಖ್ಯೆಗೆ ಅನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ.
ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಸೇರುತ್ತವೆ. ಪ್ರತಿಸ್ಪರ್ಧಿಗೆ ಶೂನ್ಯ.

How the American President is elected

ಚುನಾಯಿತ ಪ್ರತಿನಿಧಿಗಳೆದಂರೆ ಯಾರು?

ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷರನ್ನು ನೇರವಾಗಿ ಆಯ್ಕೆಮಾಡುವ ಅಧಿಕಾರ ಹೊಂದಿರುತ್ತಾರೆ. ಇವರು ಯಾವುದೇ ಅಧಿಕೃತ ಕಚೇರಿ ಹೊಂದಿರುವುದಿಲ್ಲ. ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಇವರನ್ನು ಆಯ್ಕೆ ಮಾಡಲಾಗುತ್ತದೆ.


ಚುನಾಯಿತ ಪ್ರತಿನಿಧಿಗಳನ್ನು ಹೇಗೆ ಆಯ್ಕೆಮಾಡಲಾಗುತ್ತದೆ?:

ಎರಡೂ ರಾಜಕೀಯ ಪಕ್ಷಗಳು ಆಯಾ ರಾಜ್ಯದಲ್ಲಿ ಚುನಾವಣೆಗೂ ಮುನ್ನ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆಯ್ಕೆಮಾಡುತ್ತವೆ. ರಾಜ್ಯದ ಜನಸಂಖ್ಯೆ ಆಯಾ ಪಕ್ಷದ ಅಭ್ಯರ್ಥಿಗೆ ಅಥವಾ ತಮಗಿಷ್ಟವಾದ ಚುನಾಯಿತ ಪ್ರತಿನಿಧಿಗೆ ಮತ ಚಲಾಯಿಸುತ್ತಾರೆ.


ಗೆಲ್ಲಲು ಬೇಕಾದ ಮತಗಳು:

ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270ಮತಗಳನ್ನು ಪಡೆಯಬೇಕು. (270 ಚುನಾಯಿತ ಅಭ್ಯರ್ಥಿಗಳ ಬೆಂಬಲ) ಒಂದು ವೇಳೆ ಬಹುಮತ ಸಿಗದೇ ಇದ್ದಲ್ಲಿ, ಅಧ್ಯಕ್ಷರನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಆಯ್ಕೆಮಾಡುತ್ತದೆ. ಉಪಾಧ್ಯಕ್ಷರನ್ನು ಸೆನೆಟ್ ಸದಸ್ಯರು ಆಯ್ಕೆ ಮಾಡುತ್ತಾರೆ.

How the American President is elected


ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು:

ಅಮೆರಿಕ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗುವವರು ಅಮೇರಿಕಾದಲ್ಲೇ ಹುಟ್ಟಿರಬೇಕು ಮತ್ತು ಅಮೆರಿಕದ ಪೌರನಾಗಿರಬೇಕು. ಕನಿಷ್ಠ 35ವರ್ಷ ವಯೋಮಿತಿ ಇರಬೇಕು.


ದೀರ್ಘಾವಧಿ ಚುನಾವಣೆ:

ಅಧ್ಯಕ್ಷೀಯ ಚುನಾವಣೆ ನವೆಂಬರ್ ನಲ್ಲೇ ನಡೆದರೂ ಸಹ ಪ್ರಕ್ರಿಯೆ ಶುರುವಾಗುವುದು ಜನವರಿಯಲ್ಲಿ. ಅಧ್ಯಕ್ಷರನ್ನು ಆಯ್ಕೆ ಮಾಡಲು ಬರೋಬ್ಬರಿ ಒಂದು ವರ್ಷ ಕಾಲಾವಕಾಶ ಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How the President of the United States is Elected? How it works? Quick take aways
Please Wait while comments are loading...