ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದು-ಮುಂದು ಗೊತ್ತಿಲ್ಲದವನಿಗೆ 2 ಕೋಟಿ ಕೊಟ್ಟ ಗೂಗಲ್; ಅಲ್ಲಿಂದ ಮುಂದೇನಾಯಿತು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಇದು ಗೂಗಲ್ ಪೇ, ಫೋನ್ ಪೇ ಯುಗ. ಜನರು ಕಾಸು ಕೊಡುವುದಕ್ಕೆ ಹಾಗೂ ತೆಗೆದುಕೊಳ್ಳುವುದಕ್ಕೆ ಅಪ್ಲಿಕೇಶನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇಂಥ ಕಾಲದಲ್ಲಿ ಯಡವಟ್ಟುಗಳು ಆಗುವುದು ಸರ್ವೇ ಸಾಮಾನ್ಯ. ಆದರೆ ಈ ಪ್ರಕರಣವು ಎಲ್ಲಕ್ಕಿಂತ ವಿಭಿನ್ನ ಹಾಗೂ ವಿಚಿತ್ರವಾಗಿದೆ.

ಸ್ವತಃ ಗೂಗಲ್ ಕಂಪನಿಯು ವ್ಯಕ್ತಿಯೊಬ್ಬನಿಗೆ ಸಾವಿರ ಅಲ್ಲ ಲಕ್ಷವಲ್ಲ ಬರೋಬ್ಬರಿ 2 ಕೋಟಿ ರೂಪಾಯಿ ಹಣವನ್ನು ಕೊಟ್ಟಿದೆ. ಇದು ಸ್ವತಃ ಕಾಸು ತೆಗೆದುಕೊಂಡವನಿಗೇ ಗೊತ್ತಿಲ್ಲ. ಕಂತೆ ಕಂತೆ ಕಾಸು ಖಾತೆಗೆ ಜಮಾ ಆಗಿರುವ ಬಗ್ಗೆ 3 ವಾರಗಳ ನಂತರದಲ್ಲಿ ವ್ಯಕ್ತಿಗೆ ಗೊತ್ತಾಗಿದೆ.

Breaking: ಪೆಗಾಸಸ್ ಪ್ರಕರಣಗಳ ತನಿಖೆಗೆ ಸರಕಾರ ಸಹಕರಿಸಿಲ್ಲ; ವರದಿBreaking: ಪೆಗಾಸಸ್ ಪ್ರಕರಣಗಳ ತನಿಖೆಗೆ ಸರಕಾರ ಸಹಕರಿಸಿಲ್ಲ; ವರದಿ

ಅಸಲಿಗೆ ಹ್ಯಾಕರ್ ಖಾತೆಗೆ ಗೂಗಲ್ 2 ಕೋಟಿ ರೂಪಾಯಿ ಹಾಕಿದ್ದು ಏಕೆ? ಗೂಗಲ್ ಹಣವನ್ನು ಪಡೆದುಕೊಂಡ ಹ್ಯಾಂಕರ್ ಮುಂದೆ ಮಾಡಿದ್ದೇನು? 2 ಕೋಟಿಯ ಜೊತೆಗೆ ಹ್ಯಾಂಕರ್ ಹಾಗೂ ಗೂಗಲ್ ಕಥೆ ಏನಾಯಿತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಹ್ಯಾಕರ್‌ಗೆ ಗೂಗಲ್ ಕೊಟ್ಟಿದ್ದು ಬರೋಬ್ಬರಿ 2 ಕೋಟಿ ರೂ.

ಹ್ಯಾಕರ್‌ಗೆ ಗೂಗಲ್ ಕೊಟ್ಟಿದ್ದು ಬರೋಬ್ಬರಿ 2 ಕೋಟಿ ರೂ.

ಗೂಗಲ್ ಮತ್ತು ಹ್ಯಾಕರ್ ಮಧ್ಯ ಯಾವುದೇ ರೀತಿ ವಹಿವಾಟು ನಡೆದಿರಲಿಲ್ಲ. ಆದರೂ, ಗೂಗಲ್ ಖಾತೆಯಿಂದ ಬರೋಬ್ಬರಿ (2.5 ಲಕ್ಷ ಡಾಲರ್) 2 ಕೋಟಿ ರೂಪಾಯಿ ಅನ್ನು ಸ್ಯಾಮ್ ಕರಿ ಎಂಬುವವರ ಖಾತೆಗೆ ಜಮಾ ಮಾಡಿದೆ. ಈ ವಹಿವಾಟಿನ ಬಗ್ಗೆ ಸ್ಯಾಮ್ ಕರಿಗೆ ಸಂದೇಶವೂ ಹೋಗಿದೆ. ಅದಾಗ್ಯೂ, ಯಾವ ಕಾರಣಕ್ಕೆ ಈ ಹಣವು ಕರಿ ಖಾತೆಗೆ ಜಮಾ ಆಯಿತು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ.

2 ಕೋಟಿ ಬಂದಿದ್ದು ಗೊತ್ತಾಗಿದ್ದೇ 3 ವಾರಗಳ ನಂತರ!

2 ಕೋಟಿ ಬಂದಿದ್ದು ಗೊತ್ತಾಗಿದ್ದೇ 3 ವಾರಗಳ ನಂತರ!

ಗೂಗಲ್ ಖಾತೆಯಿಂದ ಸ್ಯಾಮ್ ಕರಿ ಖಾತೆಗೆ 2 ಕೋಟಿ ರೂಪಾಯಿ ಜಮಾ ಆಗಿರುವ ಬಗ್ಗೆ ಸ್ವತಃ ಅವರಿಗೆ ಗೊತ್ತಾಗಿರಲಿಲ್ಲ. ತಮ್ಮದೇ ಅಕೌಂಟ್ ಸಂಖ್ಯೆಗೆ ಹಣ ಹೋಗಿದ್ದರೂ, ಯಾವುದೇ ಅಲರ್ಟ್ ಬಂದಿರಲಿಲ್ಲ. 3 ವಾರಗಳ ನಂತರದಲ್ಲಿ ಭಾರಿ ಮೊತ್ತವೊಂದು ತಮ್ಮ ಖಾತೆಯಲ್ಲಿ ಬಂದು ಬಿದ್ದಿರುವುದು ಸ್ಯಾಮ್ ಕರಿ ಗಮನಕ್ಕೆ ಬಂದಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಅವರು, ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಗೂಗಲ್ ಕಾಸು ಪಡೆದವನ ಟ್ವೀಟ್ ಸಂದೇಶದಲ್ಲಿ ಏನಿದೆ?

ಗೂಗಲ್ ಕಾಸು ಪಡೆದವನ ಟ್ವೀಟ್ ಸಂದೇಶದಲ್ಲಿ ಏನಿದೆ?

"Google ಯಾದೃಚ್ಛಿಕವಾಗಿ ನನಗೆ $249,999 ಅನ್ನು ಕಳುಹಿಸಿ 3 ವಾರಗಳಿಗಿಂತ ಹೆಚ್ಚು ಸಮಯವಾಗಿದೆ. ನಾವು ಗೂಗಲ್ ಅನ್ನು ಸಂಪರ್ಕಿಸಲು ಯಾವುದೇ ಮಾರ್ಗವಿದೆಯೇ," ಎಂದು ಕರಿ ಟ್ವೀಟ್ ಮಾಡಿದ್ದಾರೆ. ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟಿನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ನ್ಯೂಸ್‌ವೀಕ್‌ನ ಪ್ರಕಾರ, ಕರಿಯು ನೆಬ್ರಸ್ಕಾದ ಒಮಾಹಾದಲ್ಲಿರುವ ಯುಗಾ ಲ್ಯಾಬ್ಸ್‌ನ ಸಿಬ್ಬಂದಿ ಭದ್ರತಾ ಇಂಜಿನಿಯರ್ ಆಗಿದ್ದಾರೆ. ಅವರು ಬಗ್ ಬೌಂಟಿ ಬೇಟೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಕಂಪನಿಗಳು ತಮ್ಮ ಸಾಫ್ಟ್‌ವೇರ್‌ನಲ್ಲಿ ದೋಷ ಅಥವಾ ಭದ್ರತಾ ಅಂತರವನ್ನು ಕಂಡುಕೊಂಡ ವ್ಯಕ್ತಿಗಳಿಗೆ ವಿತ್ತೀಯ ಬಹುಮಾನಗಳನ್ನು ನೀಡುತ್ತವೆ ಎಂದಿದೆ.

2 ಕೋಟಿ ಬಗ್ಗೆ ಗೂಗಲ್ ಹೇಳುವುದೇನು?

2 ಕೋಟಿ ಬಗ್ಗೆ ಗೂಗಲ್ ಹೇಳುವುದೇನು?

ತಮ್ಮ ಸಿಬ್ಬಂದಿಯೊಬ್ಬರು ಮಾಡಿದ ತಪ್ಪಿನಿಂದಾಗಿ ಆಕಸ್ಮಿಕವಾಗಿ ಕರಿ ಖಾತೆಗೆ 2 ಕೋಟಿ ರೂಪಾಯಿ ಪಾವತಿ ಮಾಡಿರುವುದಾಗಿ ಎನ್‌ಪಿಆರ್‌ಗೆ ಗೂಗಲ್ ದೃಢಪಡಿಸಿದ್ದು, ಸೀಕ್ರೆಟ್ ಹಿಂದಿನ ಅಸಲಿ ಕಥೆ ಬಹಿರಂಗಗೊಂಡಿದೆ. "ನಮ್ಮ ತಂಡವು ಇತ್ತೀಚೆಗೆ ಮಾನವ ದೋಷದ ಪರಿಣಾಮವಾಗಿ ತಪ್ಪಾದ ವ್ಯಕ್ತಿಗೆ ಹಣ ಪಾವತಿ ಮಾಡಿದೆ. ಪ್ರಭಾವಿತ ಪಾಲುದಾರರು ಈ ಬಗ್ಗೆ ತ್ವರಿತವಾಗಿ ನಮಗೆ ತಿಳಿಸಿದ್ದರ ಬಗ್ಗೆ ನಾವು ಪ್ರಶಂಸಿಸುತ್ತೇವೆ. ಅದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು Google ವಕ್ತಾರರು ಎನ್‌ಪಿಆರ್‌ಗೆ ತಿಳಿಸಿದ್ದಾರೆ.

ಕರಿ ಅವರು ಸ್ವೀಕರಿಸಿದ $250,000 ನಲ್ಲಿ ಯಾವುದೇ ಹಣವನ್ನು ಇನ್ನೂ ಖರ್ಚು ಮಾಡಿಲ್ಲ ಎಂದು ಹೇಳಿದರು, ಏಕೆಂದರೆ ಗೂಗಲ್ ವಕ್ತಾರರು ಕಂಪನಿಯು ಅದನ್ನು ಮರಳಿ ಪಡೆಯುವ ಉದ್ದೇಶವನ್ನು ದೃಢಪಡಿಸಿದ್ದಾರೆ.

English summary
How Google paid 2 crore rupees to a hacker; What happened next.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X