ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ಅಂಟಿಸಿಕೊಳ್ಳದೇ ವೈರಸ್ ಹರಡುವ ಬಾವುಲಿಗಳು: ಒಂದು ಸಂಶೋಧನೆ

|
Google Oneindia Kannada News

ನವದೆಹಲಿ, ಮೇ 11: ವೈರಸ್ ಅಂಟಿಸಿಕೊಳ್ಳದೆ ವೈರಸ್ ಹರಡುವ ಬಾವುಲಿಗಳ ಕುರಿತು ಭಾರತ ಮೂಲದ ಕೆನಡಾದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯ ಸಂಶೋಧನೆ ನಡೆಸಿದೆ.

Recommended Video

A cop recovered by corona talks to media | Corona Recovered | Oneindia Kannada

ಬಾವುಲಿಗಳ ರೋಗ ನಿರೋಧಕ ಶಕ್ತಿಯ ಗುಟ್ಟೇನು ಎಂಬುದರ ಕುರಿತು ಅಧ್ಯಯನ ನಡೆಸುತ್ತಿವೆ.ಕೊವಿಡ್-19, MERS, ಸಾರ್ಸ್ ವೈರಸ್ ಗಳು ಮಾನವನ ಜೀವಕೋಶಗಳ ಮೇಲೆ ನೇರವಾಗಿ ದಾಳಿ ಮಾಡುತ್ತವೆ. ಆದರೆ ಇದೇ ವೈರಸ್ ಗಳಿಂದ ಬಾವುಲಿಗಳ ಜೀವಕೋಶಗಳು ಹೇಗೆ ರಕ್ಷಿಸಿಕೊಳ್ಳುತ್ತವೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಮೀರತ್‌ನಲ್ಲಿ ಬಾವುಲಿಗಳ ಸರಣಿ ಸಾವು, ಹೆಚ್ಚಿದ ಆತಂಕಮೀರತ್‌ನಲ್ಲಿ ಬಾವುಲಿಗಳ ಸರಣಿ ಸಾವು, ಹೆಚ್ಚಿದ ಆತಂಕ

ಕೆನಡಾ ಮೂಲದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯ ಇಂತಹದೊಂದು ಸಾಹಸಕ್ಕೆ ಕೈಹಾಕಿದೆ. ಈ ಸಾಹಸದ ಸಂಶೋಧನೆಗೆ ವಿಕ್ರಮ್ ಮಿಶ್ರಾ ನೇತೃತ್ವದ ಭಾರತೀಯ ಮೂಲದ ವಿಜ್ಞಾನಿಗಳು ಕೂಡ ಕೈ ಜೋಡಿಸಿದ್ದು, ಮಧ್ಯಪ್ರಾಚ್ಯ ಉಸಿರಾಟದ ಖಾಯಿಲೆ (MERS) ಮತ್ತು ಕೊವಿಡ್ -19 ವೈರಸ್ ಮತ್ತು ಸಾರ್ಸ್-CoV-2 ವೈರಸ್ ಗಳ ಆವಾಸ ಸ್ಥಾನವಾಗಿರುವ ಬಾವಲಿಗಳ ಮೇಲೆ ಸಂಶೋಧನೆ ಆರಂಭಿಸಿದ್ದಾರೆ.

How Bats Carry Virus Without Getting Infected Themselves

ವೈರಸ್ ಗಳು ಜೀವಕೋಶಗಳನ್ನು ಹಾಳುಮಾಡದಂತೆ ಅದ್ಯಾವ ಅದ್ಭುತ ರೋಗ ನಿರೋಧಕ ಶಕ್ತಿ ತಡೆಯುತ್ತಿದೆ ಎಂಬ ಸಂಶೋಧನೆಯನ್ನು ವಿಜ್ಞಾನಿಗಳು ಕೈಗೊಂಡಿದ್ದಾರೆ. ಬಾವುಲಿಗಳಲ್ಲಿನ ರೋಗ ನಿರೋಧಕ ಶಕ್ತಿಗೆ ಏನು ಕಾರಣ? ಈ ರೋಗ ನಿರೋಧಕ ಶಕ್ತಿಯಲ್ಲಿನ ಅಂಶಗಳನ್ನು ಮಾನವನಿಗೆ ಅಳವಡಿಸಿದರೆ ಕೊರೊನಾ ವೈರಸ್ ಸಾಯುತ್ತದೆಯೇ ಅಥವಾ ತಟಸ್ಥವಾಗುತ್ತದೆಯೇ ಎನ್ನುವ ಅಂಶಗಳ ಮೇಲೆ ಸಂಶೋಧನೆ ನಡೆಯಲಿದೆ.

ವೈರಸ್ ಗಳ ಆವಾಸ ಸ್ಥಾನವಾಗಿದ್ದರೂ ಕೂಡ ಮಾರಕ ವೈರಸ್ ಬಾವಲಿಗಳ ಮೇಲೆ ಯಾವುದೇ ರೀತಿಯ ಹಾನಿ ಮಾಡಿಲ್ಲ. ಹಾಗಾದರೆ ಮಾರಕ ವೈರಸ್ ನಿಂದ ಬಾವಲಿಗಳನ್ನು ರಕ್ಷಿಸುತ್ತಿರುವ ಆ ಶಕ್ತಿ ಯಾವುದು, ಬಾವಲಿಗಳಲ್ಲಿನ ರೋಗ ನಿರೋಧಕ ಶಕ್ತಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಕುತೂಹಲಕಾರಿ ಅಂಶದ ಮೇಲೆ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.

English summary
Researchers, mostly of Indian origin, from the University of Saskatchewan (USask), in Canada, have unravelled how bats carry the Middle East Respiratory Syndrome (MERS) and Covid-19 virus, SARS-CoV-2, without getting infected themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X