ಇದೆಂಥಾ ಆಫರ್, ಮನೆ ಕೊಂಡರೆ ಹೆಂಡತಿ ಉಚಿತ!
ನವದೆಹಲಿ, ಮಾ. 11: ಮನೆ ಕೊಂಡರೆ, ಹೆಂಡತಿ ಉಚಿತ! ಆಬ್ಬಾ... ಇಂಥ ಆಫರ್ ಗಳು ಇರುತ್ತವೆಯಾ ಎಂದು ಹುಬ್ಬು ಮೇಲೆರಿಸಬೇಕಿಲ್ಲ. ಇಂಡೋನೇಷಿಯಾದಲ್ಲಿ ಮನೆಯ ಮಾಲಕಿಯೊಬ್ಬಳು ಇಂಥದ್ದೇ ಜಾಹೀರಾತು ನೀಡಿದ್ದಾಳೆ.
ಇಂಡೋನೇಷಿಯಾದ ಸ್ಲೆಮಾನ್ ದ್ವೀಪದಲ್ಲಿ ಮನೆಯೊಂದು ಮಾರಾಟಕ್ಕಿದ್ದು ಮನೆ ಕೊಳ್ಳುವವರು ಹೆಂಡತಿಯನ್ನು ಉಚಿತವಾಗಿ ಪಡೆಯಲಿದ್ದಾರೆ. ಅಂದರೆ ಮನೆ ಮಾಲಕಿಯನ್ನು ಮದುವೆ ಮಾಡಿಕೊಳ್ಳಬಹುದಾಗಿದೆ.[ಒಳ್ಳೆ ಗಂಡ ಬೇಕಾಗಿದ್ದಾನೆ, ಇಲ್ಲಿ ಅರ್ಜಿ ಹಾಕಿ]

ಜಾಹೀರಾತು ಹೇಳುವಂತೆ, ಇದು ಒಂದು ಮಹಡಿಯ ಮನೆ, ಎರಡು ಬೆಡ್ ರೂಮ್‌ಗಳಿವೆ, ಎರಡು ಬಾತ್ ರೂಮ್‌ಗಳಿವೆ, ಒಂದು ಪಾರ್ಕಿಂಗ್ ಸ್ಪೇಸ್ ಇದೆ ಮತ್ತು ಮೀನಿನ ಒಂದು ಕೊಳವಿದೆ. ಒಂದೊಮ್ಮೆ ನೀವು ಮನೆ ಖರೀದಿಸುವಿರಾದರೆ ಮನೆ ಮಾಲಕಿಯನ್ನು ಮದುವೆಯಾಗಬಹುದು. ಮನೆ ಮಾರಾಟ ದರ 999 ದಶಲಕ್ಷ ರೂಪಾಯಿ (75,000 ಡಾಲರ್).
ಆನ್ ಲೈನ್ ನಲ್ಲಿ ಇಂಥ ನೀಡಿರುವ ಜಾಹೀರಾತು ನೀಡಿರುವ ಮನೆ ಮಾಲಕಿ ವಿನಾ ಲಿಯಾ(40) ವಿಧವೆ .ಈಕೆ ತಾನು ಮನೆಯ ಮುಂದೆ ನಿಂತಂತೆ ಇರುವ ಫೋಟೋವನ್ನು ಜಾಹೀರಾತಿನಲ್ಲಿ ಹಾಕಿದ್ದಾಳೆ. ಅಲ್ಲದೇ ಬ್ಯೂಟಿ ಪಾರ್ಲರ್‌ನ ಒಂದನ್ನು ನಡೆಸುತ್ತಿದ್ದಾಳೆ. ಎರಡು ಮಕ್ಕಳೂ ಇವೆ .[58 ವರ್ಷದ ಥಾಣೆ 'ಯುವಕ'ನಿಗೆ 20ರ ಕನ್ಯೆ!]
ಸ್ನೇಹಿತರೊಬ್ಬರ ನೆರವಿನಲ್ಲಿ ಇಂಥ ಜಾಹೀರಾತು ಸೃಷ್ಟಿ ಮಾಡಿ ಹಾಕಿದ್ದೇನೆ. ಬರುತ್ತಿರುವ ಪ್ರತಿಕ್ರಿಯೆ ನೋಡಿ ನನಗೆ ಆಶ್ಚರ್ಯವಾಗುತ್ತಿದೆ ಎಂದು ಲೀನಾ ಹೇಳಿತ್ತಾರೆ. ಕೆಲ ಮಾಧ್ಯಮಗಳು ಆಕೆಯ ಸಂದರ್ಶನವನ್ನು ಮಾಡಿವೆ.
ಒಟ್ಟಿನಲ್ಲಿ ಆಕೆಯ ಮನೆ ಖರೀದಿಸದರೆ, ಮನೆ ಮಾಲೀಕ, ಗಂಡ, ತಂದೆ ಮತ್ತು ಬ್ಯೂಟಿ ಪಾರ್ಲರ್ ಓನರ್ ಎಲ್ಲ ಪದವಿಗಳು ಒಮ್ಮೆಲೇ ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ!












Click it and Unblock the Notifications