ನೆದರ್‌ಲೆಂಡ್: ಆ್ಯಪಲ್ ಸ್ಟೋರ್‌ನಲ್ಲಿ ಒತ್ತೆಯಾಳಾಗಿದ್ದವರ ಬಿಡುಗಡೆ

ಆಮ್ಸ್ಟರ್ಡಮ್, ಫೆಬ್ರವರಿ 23: ಆ್ಯಪಲ್ ಸ್ಟೋರ್‌ನಲ್ಲಿ ಬಂದೂಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಜನರನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಸಂಜೆ 5.30ರ ವೇಳೆಗೆ ಒತ್ತೆಯಾಳಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಹಲವು ಗಂಟೆಗಳ ಪ್ರಯತ್ನದ ಬಳಿಕ ಕೊನೆಯಲ್ಲಿ ಎಲ್ಲರನ್ನೂ ರಕ್ಷಿಸಲಾಯಿತು.

ಇದಕ್ಕಾಗಿ ಪೊಲೀಸರು ಹಲವು ವಿಶೇಷ ತುಕಡಿಗಳನ್ನು ನಿಯೋಜಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟೆಗೆ ತರಲು ಸಾಧ್ಯವಾಯಿತು. ಒತ್ತೆಯಾಳಾಗಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಆ್ಯಪಲ್ ಸ್ಟೋರ್‌ನಿಂದ ಹಲವು ಜನರು ಹೊರಬಂದಿದ್ದಾರೆ, ವಾಸ್ತವವಾಗಿ ಸಂಜೆ 6 ಗಂಟೆಯಿಂದ ಈ ಜನರನ್ನು ಅಂಗಡಿಯೊಳಗೆ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.

Hostage Situation Ends in Amsterdams Apple Store as Police Overpower Gunman

ಪೊಲೀಸರ ಪ್ರಕಾರ ಡೌನ್‌ಟೌನ್‌ ಸ್ಕ್ವೇರ್‌ನಲ್ಲಿರುವ ಆ್ಯಪಲ್ ಸ್ಟೋರ್‌ನಲ್ಲಿ ಬಂದೂಕುಧಾರಿಗಳು ನುಗ್ಗಿದ್ದರಿಂದ ಜನರು ಭಯಭೀತರಾಗಿದ್ದರು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳವನ್ನು ಸುತ್ತುವರೆದರು.

ಅಂಗಡಿಯೊಳಗೆ ಎಷ್ಟು ಮಂದಿ ಬಂದೂಕುಧಾರಿಗಳಿದ್ದರು ಎಂಬುದನ್ನು ಪೊಲೀಸರು ತಿಳಿಸದಿದ್ದರೂ ಬಂದೂಕು ತೋರಿಸಿ ದರೋಡೆ ನಡೆಸಲು ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+