ದಿ ಹೋಪ್ ಡೈಮಂಡ್: ಭಾರತದ ಸೀತಾ ಮಾತೆ ವಿಗ್ರಹದಿಂದ ಕದ್ದ ವಜ್ರ ಕೊಂಡೋರು ಬರ್ಬಾದ್, ಏನಿದು ಕಥೆ?

Hope Diamond: ಭಾರತ ಆನಾದಿ ಕಾಲದಿಂದಲೂ ಸಂಪತ್ಭರಿತ ದೇಶ. ಕೃಷ್ಣ ದೇವರಾಯನ ಕಾಲದಲ್ಲಿ ವಜ್ರ ವೈಢೂರ್ಯಗಳನ್ನು ಸಂತೆಗಳಲ್ಲಿ, ಬೀದಿ ಬದಿಯಲ್ಲಿ ಮಾರುತ್ತಿದ್ದರು ಎನ್ನುವ ಇತಿಹಾಸವನ್ನು ನಾವು ಓದಿದ್ದೇವೆ. ಬ್ರಿಟಿಷರು, ಫ್ರೆಂಚರು, ಡಚ್ಚರು ಭಾರತಕ್ಕೆ ದಾಳಿ ಮಾಡಿದ ನಂತರ ಎಲ್ಲವನ್ನೂ ದೋಚಿರುವ ಬಗ್ಗೆಯೂ ಚರಿತ್ರೆಯಲ್ಲಿ ಕಲಿತಿದ್ದೇವೆ. ನಮ್ಮ ದೇಶದ ಕೊಹಿನೂರು ವಜ್ರ ಲಂಡನ್‌ನಲ್ಲಿ ಇವತ್ತಿಗೂ ಇದೆ.

ಇನ್ನು ಕೊಹಿನೂರು ವಜ್ರದಂತೆಯೇ ಬೆಲೆ ಬಾಳುವು ಇನ್ನೊಂದು ವಜ್ರದ ಕಥೆ. ಅದನ್ನು ಕದ್ದು ಪರಕೀಯರು ಅನುಭವಿಸುತ್ತಿರುವ ಶಾಪದ ವ್ಯಥೆ. ಇದು ಯುನೈಟೆಡ್ ಸ್ಟೇಟ್ಸ್‌ನ ಸ್ಮಿತ್ಸೋನಿಯನ್ ಮ್ಯೂಜಿಯಂನಲ್ಲಿದ್ದು, ಹೋಪ್‌ ಡೈಮಂಡ್ ಎನ್ನುತ್ತಾರೆ.‌ ಇದು ಗಾಢ ನೀಲಿ ಬಣ್ಣದ ವಜ್ರ. 45 ಕ್ಯಾರೆಟ್‌ಗಳಿಗಿಂತ ಹೆಚ್ಚು ತೂಕವಿದ್ದು, ಈ ವಜ್ರದ ಹಿಂದೆ ಸಾವು ನೋವಿನ ಕತೆಯಿದೆ. ಕೋಟಿಗಟ್ಟಲೆ ಬೆಲೆ ಬಾಳುವ ಈ ವಜ್ರ ಯಾರ ಹತ್ತಿರವಿರುತ್ತೋ ಅವರಿಗೆ ಶಾಪ್ ಅಂಟೋದು ಗ್ಯಾರಂಟಿ. ಅದಕ್ ಇದನ್ನುಕೆ ಶಾಪಗ್ರಸ್ತ ವಜ್ರ ಅಂತಾರೆ. ಈ ವಜ್ರ ಯಾರ ಬಳಿಯೇ ಇರಲಿ ಅವರು ಸಾವು, ವಿಪತ್ತು, ಅವಮಾನ ಮತ್ತು ಬಡತನ ಅನುಭವಿಸುವುದು ತಪ್ಪೋಲ್ಲ. ಈ ವಜ್ರ ಇಟ್ಟು ಕೊಂಡವರೆಲ್ಲಾ ಕಷ್ಟ ನಷ್ಟ ಅನುಭವಿಸಿ ಎಲ್ಲವನ್ನೂ ಕಳೆದುಕೊಂಡು ಬರ್ಬಾದ್‌ ಆಗಿದ್ದಾರೆ.

The Hope Dimond Most Cursed Dimond that Was Stollen From Sita Devis Eye In Indian Temple what is this curse

ಇದನ್ನು ಅಮೆರಿಕಾದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರೂ ಕೊಹಿನೂರ್‌ನಂತೆ ಇದು ಕೂಡಾ ಭಾರತದ ವಜ್ರ. ಇಷ್ಟಕ್ಕೂ ಈ ವಜ್ರಕ್ಕೆ ಶಾಪ ಅಂಟಿರುವುದಾದರೂ ಹೇಗೆ ಎನ್ನುವುದಕ್ಕೂ ಒಂದು ಕತೆ ಇದೆ. ಈ ವಜ್ರ ಅಮೆರಿಕಾದ ಮ್ಯೂಜಿಯಂ ತಲುಪುವವರೆಗೆ ಯಾರ ಕೈ ಸೇರಿತ್ತೂ ಅವರೆಲ್ಲರೂ ಮಣ್ಣು ಮುಕ್ಕಿ ಹೋಗಿದ್ದಾರೆ ಎನ್ನುತ್ತದೆ ಇತಿಹಾಸ. ಈ ವಜ್ರ ಅಸಲಿಗೆ ಗೋಲ್ಕೊಂಡದ ಕೊಲ್ಲೂರು ಗಣಿಯಿಂದ ತೆಗೆದಿರುವಂತದ್ದು. ಆ ಕಾಲದಲ್ಲಿ ವಜ್ರಗಳ ಏಕೈಕ ವಾಣಿಜ್ಯ ಮೂಲ ಅಂದರೆ ಅದು ಭಾರತ ಮಾತ್ರ.

The Hope Diamond ಶಾಪದ ಮೂಲ :

ಒಂದು ದಂತಕಥೆ ಪ್ರಕಾರ, ಈ ನೀಲಿ ವಜ್ರ 111 ಕ್ಯಾರೆಟ್‌ಗಿಂತ ಹೆಚ್ಚು ತೂಕವಿತ್ತು. ದೇವಸ್ಥಾನದಲ್ಲಿದ್ದ ಸೀತೆಯ ಪ್ರತಿಮೆಯ ಕಣ್ಣಿನಲ್ಲಿದ್ದ ವಜ್ರ ಇದು. ಈ ರತ್ನ ಕಳುವಾಗಿದ್ದು ಇಲ್ಲಿಂದಲೇ. ತಾವು ಪೂಜೆ ಮಾಡುತ್ತಿದ್ದ ಪ್ರತಿಮೆಯಿಂದ ವಜ್ರ ಕದ್ದಿರುವುದನ್ನು ತಡೆದುಕೊಳ್ಳುವುದು ಭಕ್ತರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಗ್ರಾಮದ ಜನ ಕೋಪ, ನೋವಿನಿಂದ ವಜ್ರ ಕದ್ದವರ ಮೇಲೆ ಹಿಡಿ ಶಾಪ ಹಾಕುತ್ತಾರೆ. ಅಲ್ಲಿಂದ ಈ ವಜ್ರ ಯಾರ ಕೈ ಸೇರಿದರೂ ಅವರಿಗೆ ಉಳಿಗಾಲವಿಲ್ಲ ಎಂಬೊಂದು ದಂತ ಕಥೆ ಇದೆ.

ಶಾಪಗ್ರಸ್ತ ಹೋಪ್ ಡೈಮಂಡ್‌ನ ಇತಿಹಾಸ :

ದಾಖಲೆಯಲ್ಲಿ ಇರುವಂತೆ ಹೋಪ್ ಡೈಮಂಡ್‌ನ ಇತಿಹಾಸ 1666ರಲ್ಲಿ ಶುರುವಾಗುತ್ತದೆ. ಫ್ರೆಂಚ್ ಟ್ರಾವೆಲರ್‌ ಮತ್ತು ರತ್ನ ವ್ಯಾಪಾರಿ ಜೀನ್-ಬ್ಯಾಪ್ಟಿಸ್ಟ್ ಟ್ಯಾವರ್ನಿಯರ್ ಇದನ್ನು ಭಾರತದಲ್ಲಿ ಖರೀದಿಸುತ್ತಾನೆ. ನಂತರ ಟ್ಯಾವರ್ನಿಯರ್ 1668 ರಲ್ಲಿ ಫ್ರಾನ್ಸ್‌ನ ರಾಜ ಲೂಯಿಸ್ XIVಗೆ ಮಾರುತ್ತಾನೆ.

ಟ್ಯಾವೆರ್ನಿಯರ್‌ ಮೂಲ 111-ಕ್ಯಾರೆಟ್ ವಜ್ರವನ್ನು ಲೂಯಿಸ್ XIVಗೆ ಮಾರುವಾಗ ಅದನ್ನು ತುಂಡು ಮಾಡಿ ಮಾರುತ್ತಾನೆ. ಅಲ್ಲಿಗೆ 111-ಕ್ಯಾರೆಟ್ ವಜ್ರ 69-ಕ್ಯಾರೆಟ್‌ನದ್ದಾಗುತ್ತದೆ. ನಂತರ ಇದು ಫ್ರೆಂಚ್ ಕ್ರೌನ್ ಜ್ಯುವೆಲ್ಸ್‌ನ ಒಂದು ಭಾಗವೇ ಆಗುತ್ತದೆ. ಫ್ರೆಂಚ್ ದೊರೆಗಳು ಇದನ್ನು ವಡವೆಯಾಗಿ ಧರಿಸುತ್ತಿದ್ದರು.

ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಅಂದರೆ 1792 ರಲ್ಲಿ ರಾಜಮನೆತನದ ಬಳಿಯಿದ್ದ ಈ ವಜ್ರ ಅವರ ಕೈ ತಪ್ಪುತ್ತದೆ. ಮತ್ತೆ ಇದು ಕಾಣಿಸಿಕೊಂಡಿದ್ದು 1812 ರಲ್ಲಿ ಲಂಡನ್‌ನಲ್ಲಿ. ಅಂದರೆ ಮಧ್ಯದ ಸುಮಾರು ಎರಡು ದಶಕಗಳ ಕಾಲ ಈ ವಜ್ರ ಎಲ್ಲಿತ್ತು ಎನ್ನುವ ದಾಖಲೆ ಇಲ್ಲ.

1839 ರಲ್ಲಿ, ಹೋಪ್ ಬ್ಯಾಂಕಿಂಗ್ ಕುಟುಂಬದ ಜೆಮ್‌ ಕ್ಯಾಟಲಾಗ್ 45.5 ಕ್ಯಾರೆಟ್ ತೂಕದ ದೊಡ್ಡ ನೀಲಿ ವಜ್ರದ ಬಗ್ಗೆ ಹೇಳಿದೆ. ಇಲ್ಲಿಂದ ಆ ವಜ್ರಕ್ಕೆ ಹೋಪ್ ಡೈಮಂಡ್ ಅನ್ನೋ ಹೆಸರು ಬಂತು.

ಸಾವು ಮತ್ತು ವಿನಾಶದ ಹಾದಿ :

ಈ ವಜ್ರ ಕೊನೆಗೆ ಹೋಪ್ ಬ್ಯಾಂಕಿಂಗ್ ಕುಟುಂಬದ ಲಾರ್ಡ್ ಹೆನ್ರಿ ಫ್ರಾನ್ಸಿಸ್ ಹೋಪ್‌ ಕೈಗೆ ಬರುತ್ತದೆ. ಲಾರ್ಡ್ ಹೆನ್ರಿ ಫ್ರಾನ್ಸಿಸ್ ಮತ್ತು ಅವರ ಪತ್ನಿ ಮೇ ಯೋ ತಮ್ಮ ಸಂಪತ್ತನ್ನು ಬೇಕಾ ಬಿಟ್ಟಿ ಬಳಸಿ ಎಲ್ಲವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಕೊನೆಗೆ ಅವರಿಬ್ಬರ ಸಂಬಂಧವೂ ಕೆಡುತ್ತದೆ. 1902 ರಲ್ಲಿ ಇಬ್ಬರೂ ಡಿವೋರ್ಸ್‌ ತೆಗೆದುಕೊಳ್ಳುತ್ತಾರೆ. ಎಲ್ಲವನ್ನೂ ಕಳೆದುಕೊಂಡ ನಂತರ, ಲಾರ್ಡ್ ಹೆನ್ರಿ ಫ್ರಾನ್ಸಿಸ್ ಈ ವಜ್ರವನ್ನು ಸೈಮನ್ ಫ್ರಾಂಕೆಲ್ ಎಂಬ ಆಭರಣ ವ್ಯಾಪಾರಿಗೆ ಮಾರುತ್ತಾರೆ.

ಜಾಕ್ವೆಸ್ ಕೋಲೆಟ್ ಸೈಮನ್ ಫ್ರಾಂಕೆಲ್‌ನಿಂದ ಈ ವಜ್ರ ಖರೀದಿ ಮಾಡ್ತಾರೆ. ಇದಾದ ಮೇಲೆ ಇವರ ಜೀವನ ಆತ್ಮಹತ್ಯೆಯೊಂದಿಗೆ ಕೊನೆಯಾಗುತ್ತದೆ. ನಂತರ ವಜ್ರ ರಾಜಕುಮಾರ ಇವಾನ್ ಕನಿಟೋವ್ಸ್ಕಿಗೆ ಸೇರುತ್ತದೆ. ಇವರ ಕೈಗೆ ವಜ್ರ ಬಂದಿದ್ದೇ ಬಂದದ್ದು ರಷ್ಯಾದ ಕ್ರಾಂತಿಕಾರಿಗಳಿಂದ ಇವರ ಕೊಲೆಯಾಗುತ್ತದೆ.

ಹೋಪ್ ವಜ್ರಕ್ಕೆ ಸಂಬಂಧಿಸಿದ ಪೌರಾಣಿಕ ಶಾಪ ಕಥೆಗಳಲ್ಲಿ ಉಲ್ಲೇಖಿಸಲಾದ ಮತ್ತೊಬ್ಬ ವ್ಯಕ್ತಿ ಮಡೆಮೊಯ್ಸೆಲ್ ಲೊರೆನ್ಸ್ ಲೇಡ್ಯೂ. ಲೊರೆನ್ಸ್ ಲೇಡ್ಯೂ ಪ್ಯಾರಿಸ್ ಡಾನ್ಸರ್.‌ ಹೋಪ್ ವಜ್ರ ಇವರಿಗೆ ಸಿಕ್ಕಿದ ಬಳಿಕ ಇವರು ಪ್ರೇಮಿಯಿಂದಲೇ ಕೊಲೆಯಾಗುತ್ತಾರೆ. ಇದಾದ ನಂತರ ಸೈಮನ್ ಮಾಂಛರೈಡ್ಸ್ ಎನ್ನುವ ಗ್ರೀಕ್ ವ್ಯಾಪಾರಿ ಈ ವಜ್ರದ ಒಡೆಯರಾಗುತ್ತಾರೆ. ಇವರು ಇದನ್ನು ಹೆಚ್ಚು ಸಮಯ ತಮ್ಮ ಹತ್ತಿರ ಇಟ್ಟುಕೊಳ್ಳುವುದಿಲ್ಲ. 1910 ರಲ್ಲಿ ಪಿಯರೆ ಕಾರ್ಟಿಯರ್‌ಗೆ ಮಾರುತ್ತಾರೆ. ಅವರು ಕಾರು ಅಪಘಾತದಲ್ಲಿ ಪತ್ನಿ ಮಕ್ಕಳೊಂದಿಗೆ ಪ್ರಾಣ ಕಳೆದುಕೊಳ್ಳುತ್ತಾರೆ.

ಹೋಪ್ ಡೈಮಂಡ್‌ನ ಕುಖ್ಯಾತಿ :

ಇನ್ನು ಎವಾಲಿನ್ ಮೆಕ್ಲೀನ್ ಆಗಾಗ್ಗೆ ಹೋಪ್ ವಜ್ರವನ್ನು ಧರಿಸುತ್ತಿದ್ದರು. ಅವರದನ್ನು ಕೇಪ್ ಟೌನ್ ಡೈಮಂಡ್ ಮ್ಯೂಸಿಯಂನಿಂದ ( museum) ಖರೀದಿಸಿದ್ದರು. ಕಾರ್ಟಿಯರ್ ವಜ್ರವನ್ನು ಅಮೇರಿಕನ್ ಉತ್ತರಾಧಿಕಾರಿ ಎವಾಲಿನ್ ವಾಲ್ಷ್ ಮೆಕ್ಲೀನ್‌ಗೆ ಮಾರಲು ಟ್ರೈ ಮಾಡ್ತಾ ಇದ್ದಾಗ ಟ್ಯಾವೆರ್ನಿಯರ್ ಅದನ್ನು ಹಿಂದೂ ವಿಗ್ರಹದಿಂದ ಕದ್ದಿದ್ದಾನೆ ಎಂಬ ಹೇಳಿಕೆ ಸೇರಿದಂತೆ ಅದರ ಶಾಪಗ್ರಸ್ತ ಕಥೆಗಳನ್ನು ಅವರಿಗೆ ಹೇಳುತ್ತಾರೆ. ಆದರೆ ಈ ಶಾಪದ ವದಂತಿಯನ್ನು ಬೇಕೂಂತಲೇ ಹಬ್ಬಲಾಗ್ತದೆ ಎನ್ನುವುದು ಅವರ ನಂಬಿಕೆಯಾಗಿತ್ತು.

ಎವಾಲಿನ್ ಮ್ಯಾಕ್ಲೀನ್ ಅಂತಿಮವಾಗಿ 1911 ರಲ್ಲಿ ಹೋಪ್ ಡೈಮಂಡ್ ಕೊಳ್ಳುತ್ತಾರೆ. ಇದನ್ನು ಖರೀದಿಸಿದ ತ್ಯಂತ ಪ್ರಸಿದ್ಧ ಮಾಲೀಕರಲ್ಲಿ ಇವರೊಬ್ಬರು. ಅದರ ಸುತ್ತ ಇರುವ ಕಥೆಗಳ ಬಗ್ಗೆ ಗೊತ್ತಿದ್ದರೂ ಅವರು ಪದೇ ಪದೇ ಈ ವಜ್ರವನ್ನು ಧರಿಸುತ್ತಿದ್ದರು. ಆದರೆ, ಭಾರತದ (india) ಸೀತಾಮಾತೆ ಕಣ್ಣಿನಿಂದ ಕದ್ದ ವಜ್ರದ ಶಾಪ ಇವರನ್ನು ತಟ್ಟದೇ ಬಿಡುತ್ತಾ? ಒಂಭತ್ತು ವರ್ಷದ ಮಗನನ್ನು ಕಳೆದಕೊಳ್ಳುತ್ತಾರೆ. ಅವರ ಪತಿ ಅವರನ್ನು ಬಿಟ್ಟು ಬೇರೆ ಹೆಂಗಸಿನ ಸಹವಾಸಕ್ಕೆ ಬೀಳುತ್ತಾರೆ. ಅಷ್ಟೇ ಮಗಳೂ ಮಿತಿ ಮೀರಿ ಮಾದಕವಸ್ತು ಸೇವಿಸಿ ಸಾಯುತ್ತಾಳೆ. ಕೊನೆಗೆ ಎವಾಲಿನ್ ತನ್ನ ಪತ್ರಿಕೆ ದಿ ವಾಷಿಂಗ್ಟನ್ ಪೋಸ್ಟನ್ನು ಕೂಡಾ ಮಾರುವ ಸ್ಥಿತಿ ತಲುಪುತ್ತಾರೆ. ಸಾಯುವ ವೇಳೆಗೆ ದೊಡ್ಡ ಸಾಲ ಅವರ ತಲೆ ಮೇಲೆ ಇರುತ್ತದೆ.

1947ರಲ್ಲಿ ಅವರ ಮರಣದ ನಂತರ, ಆಭರಣ ವ್ಯಾಪಾರಿ ಹ್ಯಾರಿ ವಿನ್ಸ್ಟನ್ ಅವರ ಆಭರಣವನ್ನು ವಶಕ್ಕೆ ತಗೋತಾರೆ. 1958ರಲ್ಲಿ, ವಿನ್ಸ್ಟನ್ ಹೋಪ್ ಡೈಮಂಡ್ ಅನ್ನು ಸ್ಮಿತ್ಸೋನಿಯನ್ ಗೆ ದಾನ ಮಾಡುತ್ತಾರೆ. ಅಲ್ಲಿಂದ ಈ ವಜ್ರ ಮ್ಯೂಜಿಯಂನಲ್ಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+