ಕತುವಾ ಅತ್ಯಾಚಾರ ಪ್ರಕರಣ: ನ್ಯಾಯದ ಭರವಸೆ ವ್ಯಕ್ತಪಡಿಸಿದ ವಿಶ್ವಸಂಸ್ಥೆ

Posted By:
Subscribe to Oneindia Kannada

ವಿಶ್ವಸಂಸ್ಥೆ, ಏಪ್ರಿಲ್ 14: ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದ ಎಂಟು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಅತ್ಯಂತ ಭಯಾನಕ ಘಟನೆ ಎಂದು ಹೇಳಿರುವ, ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟರಸ್, ಈ ಅಮಾನವೀಯ ಕೃತ್ಯ ಎಸಗಿರುವ ಅಪರಾಧಿಗಳಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಲು ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಪುಟ್ಟ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ಭೀಕರ ಘಟನೆಯ ಮಾಧ್ಯಮ ವರದಿಗಳನ್ನು ನಾವೆಲ್ಲ ನೋಡಿದ್ದೇವೆ. ಇಂತಹ ಕೃತ್ಯ ಎಸಗಿದ ತಪ್ಪಿತಸ್ಥರನ್ನು ಬಂಧಿಸಿ ಸರ್ಕಾರ ನ್ಯಾಯ ದೊರಕಿಸಿಕೊಡಲಿದೆ ಎಂಬ ಭರವಸೆ ಇರುವುದಾಗಿ ಅವರು ಹೇಳಿದ್ದಾರೆ.

ಕತುವಾ ದುರಂತದ ಕಾಮುಕರಿಗೆ ಬೆಂಬಲ: ಬಿಜೆಪಿ ಸಚಿವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

ಬಕೆರ್‌ವಾಲ್ ಸಮುದಾಯಕ್ಕೆ ಸೇರಿದ ಬಾಲಕಿ ಜನವರಿ 10ರಂದು ಕುದುರೆ ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದಳು. ಒಂದು ವಾರದ ಬಳಿಕ ಆಕೆಯ ಮೃತದೇಹ ಕಾಡಿನಲ್ಲಿ ದೊರೆತಿತ್ತು.

Hope authorities bring Kathua rape perpetrators to justice: UN

ಬಾಲಕಿಯಲ್ಲಿ ಅಲ್ಲಿನ ದೇವಸ್ಥಾನದಲ್ಲಿ ವಾರದವರೆಗೂ ಬಂಧಿಸಿಟ್ಟಿದ್ದ ಆರು ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ. ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಹತ್ಯೆ ಎಸಗಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
UN chief Antonio Guterres has expressed hope that the authorities will bring perpetrators of the brutal crime, happenned in kathua district of jammu and kashmir to justice.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ