ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರ್ಯಾಗನ್ ರಾಷ್ಟ್ರದ ಶಾಸನದಿಂದ ಹೌ ಹಾರಿದರಾ ಹಾಂಗ್ ಕಾಂಗ್ ಜನ?

|
Google Oneindia Kannada News

ಬೀಜಿಂಗ್, ಜುಲೈ.01: ಚೀನಾ ಕಪಿಮುಷ್ಠಿಗೆ ಯಾವುದೇ ಕಾರಣಕ್ಕೂ ಸಿಲುಕುವುದಿಲ್ಲ ಎಂಬ ಹಾಂಗ್ ಕಾಂಗ್ ಪ್ರಜೆಗಳ ಹೋರಾಟ ವ್ಯರ್ಥವಾಗಿದೆ. ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನು ಮಸೂದೆಗೆ ಅಂಗೀಕಾರ ದೊರೆತಿದೆ. ಹಾಂಗ್ ಕಾಂಗ್ ಗೆ ಕಾನೂನು ದಿಗ್ಬಂಧನ ವಿಧಿಸುವ ಚೀನಾದ ಮಾಸ್ಟರ್ ಪ್ಲಾನ್ ಗೆ ಆರಂಭಿಕ ಯಶಸ್ಸು ಸಿಕ್ಕಿದೆ.

Recommended Video

KSRTC ಬಸ್ ಹತ್ತಬೇಕಾದಲ್ಲಿ ಈ ನಿಯಮಗಳನ್ನು ಪಾಲಿಸಲೇಬೇಕು | KSRTC Rules & Regulations | Oneindia Kannada

ವಿವಾದಾತ್ಮಕ ರಾಷ್ಟ್ರೀಯ ಭದ್ರತಾ ಕಾನೂನು ಕಾಯ್ದೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಂಕಿತ ಹಾಕಿದ್ದಾರೆ. ಚೀನಾಗೆ ಬ್ರಿಟಿಷರು ಹಾಂಗ್ ಕಾಂಗ್ ಅನ್ನು ಹಿಂತಿರುಗಿಸಿದ ವಾರ್ಷಿಕೋತ್ಸವ ಆಚರಣೆಗೂ ಮುನ್ನ ದಿನ ಅಂದರೆ ಜೂನ್.30ರಂದು ಹೊಸ ಕಾನೂನಿಗೆ ಅನುಮೋದನೆ ಸಿಕ್ಕಿದೆ. ಇದರ ಪ್ರಕಾರ ಹಾಂಗ್ ಕಾಂಗ್ ನಲ್ಲಿ ಪ್ರತ್ಯೇಕತಾವಾದ ಮತ್ತು ವಿದೇಶಿ ಹಸ್ತಕ್ಷೇಪವನ್ನು ತಡೆಗಟ್ಟಲು ಸಾಧ್ಯವೇ ಇಲ್ಲ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ಕಾನೂನು ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಜೆಗಳು ಪ್ರತಿಭಟನೆ ನಡೆಸಿದ್ದರು. ಚೀನಾ ವಿರುದ್ಧ ಹಾಂಗ್ ಕಾಂಗ್ ನಲ್ಲಿ ನಡೆದ ಪ್ರತಿಭಟನೆಯು ತೀವ್ರ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಅಮೆರಿಕಾ, ತೈವಾನ್ ಸೇರಿದಂತೆ ಹಲವು ರಾಷ್ಟ್ರಗಳು ಚೀನಾ ವಿರುದ್ಧ ಹಾಂಗ್ ಕಾಂಗ್ ಗೆ ಬೆಂಬಲವಾಗಿ ನಿಂತಿದ್ದವು.

ಕೊರೊನಾ ವೈರಸ್ ಅಲ್ಲ: ಹೊಸ ಕಿಡಿ ಹೊತ್ತಿಸಿತು ಚೀನಾದ ಅದೊಂದು ಮಾತು!ಕೊರೊನಾ ವೈರಸ್ ಅಲ್ಲ: ಹೊಸ ಕಿಡಿ ಹೊತ್ತಿಸಿತು ಚೀನಾದ ಅದೊಂದು ಮಾತು!

ಹಾಗಿದ್ದಲ್ಲಿ ಹಾಂಗ್ ಕಾಂಗ್ ಪ್ರತಿಭಟನೆ ಹಿಂದಿನ ಕಾರಣವೇನು, ಚೀನಾ ವಿರುದ್ಧ ಹಾಂಗ್ ಕಾಂಗ್ ಪ್ರಜೆಗಳು ಸಿಡಿದು ನಿಂತಿರುವುದೇಕೆ? ಚೀನಾದ ಬೀಜಿಂಗ್, ಶಾಂಘೈ ನಗರಗಳಿಗಿಂತ ದ್ವೀಪ ನಗರಿ ಹಾಂಗ್ ಕಾಂಗ್ ಹೆಚ್ಚು ಅಭಿವೃದ್ಧಿ ಹೊಂದಿರುವುದರ ಹಿಂದಿನ ರಹಸ್ಯ ಏನು. ಬ್ರಿಟಿಷ್ ಆಡಳಿತದಲ್ಲಿದ್ದ ಹಾಂಗ್ ಕಾಂಗ್ ಇತಿಹಾಸ ಹೇಳುವುದೇನು ಎನ್ನುವುದರ ಕುರಿತು ವಿಸ್ತೃತ ವರದಿ ಇಲ್ಲಿದೆ ನೋಡಿ.

ಹಾಂಗ್ ಕಾಂಗ್ ನಲ್ಲಿ ಸ್ವಾತಂತ್ರ್ಯ ಶಾಸಕಾಂಗ ಜಾರಿಗೆ

ಹಾಂಗ್ ಕಾಂಗ್ ನಲ್ಲಿ ಸ್ವಾತಂತ್ರ್ಯ ಶಾಸಕಾಂಗ ಜಾರಿಗೆ

ಚೀನಾ ಮುಷ್ಠಿಗೆ ಸಿಲುಕದಿರಲು ರೂಪಿಸಿರುವ ಅರೆ ಸ್ವಾಯತ್ತ ಪ್ರದೇಶದ ಸ್ವಾತಂತ್ರ್ಯ ಶಾಸಕಾಂಗ ವ್ಯವಸ್ಥೆಯು ಹಾಂಗ್ ಕಾಂಗ್ ನಲ್ಲಿ ಜುಲೈ.01ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದೆ. 1997ರ ಜುಲೈ.01ರಂದು ಬ್ರಿಟಿಷರು ಹಾಂಗ್ ಕಾಂಗ್ ದ್ವೀಪ ನಗರವನ್ನು ಚೀನಾಗೆ ಹಿಂತಿರುಗಿಸಿತ್ತು. ಮಂಗಳವಾರ ಬೆಳಿಗ್ಗೆ ಕಾನೂನು ಅಂಗೀಕರಿಸಿದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ನ ಸ್ಥಾಯಿ ಸಮಿತಿಯ ಹಾಂಗ್ ಕಾಂಗ್‌ನ ಏಕೈಕ ಪ್ರತಿನಿಧಿ ಟಾಮ್ ಯಿಯು-ಚುಂಗ್, ಜನರು ತೊಂದರೆಗೊಳಗಾಗದಂತೆ ತಡೆಯಲು ಈ ಕಾನೂನು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಅಂತಾ ಹೇಳಿದ್ದಾರೆ. ಅಲ್ಲದೇ ಹಾಂಗ್ ಕಾಂಗ್ ನ್ನು ವಿಭಜನೆ ಸಾಧನವನ್ನಾಗಿ ಮಾಡಬೇಡಿ ಎಂದು ಅವರು ತಿಳಿಸಿದ್ದಾರೆ.

ಬ್ರಿಟಿಷರಿಗೆ ಹಾಂಗ್ ಕಾಂಗ್ ಬಿಟ್ಟುಕೊಟ್ಟಿದ್ದ ಚೀನಾ

ಬ್ರಿಟಿಷರಿಗೆ ಹಾಂಗ್ ಕಾಂಗ್ ಬಿಟ್ಟುಕೊಟ್ಟಿದ್ದ ಚೀನಾ

ವ್ಯಾಪಾರಕ್ಕಾಗಿ ಹಾಂಗ್ ಕಾಂಗ್ ಗೆ ಲಗ್ಗೆಯಿಟ್ಟ ಬ್ರಿಟಿಷರು ಕ್ರಮೇಣ ಚೀನಾವನ್ನು ವಶಕ್ಕೆ ಪಡೆಯಲು ಮುಂದಾದರು. ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಲು ಬ್ರಿಟನ್ 1839 ರಲ್ಲಿ ಚೀನಾವನ್ನು ಆಕ್ರಮಿಸಿತು. ಆಗ್ನೇಯ ಚೀನಾದ ಕರಾವಳಿಯಲ್ಲಿ ವಿರಳವಾಗಿ ವಾಸಿಸುವ ದ್ವೀಪವಾದ ಹಾಂಗ್ ಕಾಂಗ್ ಅನ್ನು ಆಕ್ರಮಿಸುವುದು ಬ್ರಿಟನ್‌ನ ಮೊದಲ ಯುದ್ಧದ ಪ್ರಮುಖ ಉದ್ದೇಶವಾಗಿತ್ತು. 1841 ರಲ್ಲಿ, ಚೂಯೆನ್ಪಿ ಸಮಾವೇಶಕ್ಕೆ ಸಹಿ ಹಾಕುವ ಮೂಲಕ ಚೀನಾ ದ್ವೀಪವನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟಿತು, ಮತ್ತು 1842 ರಲ್ಲಿ ನ್ಯಾಂಕಿಂಗ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಮೊದಲ ಅಫೀಮು ಯುದ್ಧವನ್ನು ಕೊನೆಗೊಳಿಸಿತು.

ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?

ಹಾಂಗ್ ಕಾಂಗ್ ನಲ್ಲಿ ಹೆಚ್ಚುವರಿ ಅಧಿಕಾರ ಗಿಟ್ಟಿಸಿದ ಬ್ರಿಟಿಷರು

ಹಾಂಗ್ ಕಾಂಗ್ ನಲ್ಲಿ ಹೆಚ್ಚುವರಿ ಅಧಿಕಾರ ಗಿಟ್ಟಿಸಿದ ಬ್ರಿಟಿಷರು

1898ರಲ್ಲಿ ಎರಡನೇ ಕನ್ವೆನ್ಷನ್ ಆಫ್ ಪೀಕಿಂಗ್ ಅಡಿ ಹಾಂಗ್ ಕಾಂಗ್ ಮೇಲೆ ಬ್ರಿಟನ್‌ಗೆ ಹೆಚ್ಚುವರಿ 99 ವರ್ಷಗಳ ಅಧಿಕಾರ ಸಿಕ್ಕಿತು. ಸೆಪ್ಟೆಂಬರ್ 1984ರಲ್ಲಿ ಹಾಂಗ್ ಕಾಂಗ್‌ನ ಬಂಡವಾಳಶಾಹಿ ವ್ಯವಸ್ಥೆಯನ್ನು ಸಂರಕ್ಷಿಸುವ ಚೀನಾದ ಪ್ರತಿಜ್ಞೆಗೆ ಬದಲಾಗಿ ಬ್ರಿಟಿಷರು ಮತ್ತು ಚೀನಿಯರು 1997ರ ದ್ವೀಪದ ವಹಿವಾಟನ್ನು ಅನುಮೋದಿಸುವ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಿದರು. ಜುಲೈ 1, 1997 ರಂದು, ಹಲವಾರು ಚೈನೀಸ್, ಬ್ರಿಟಿಷ್ ಮತ್ತು ಅಂತರರಾಷ್ಟ್ರೀಯ ಗಣ್ಯರು ಭಾಗವಹಿಸಿದ ಸಮಾರಂಭದಲ್ಲಿ ಹಾಂಗ್ ಕಾಂಗ್ ಅನ್ನು ಶಾಂತಿಯುತವಾಗಿ ಚೀನಾಕ್ಕೆ ಹಿಂತಿರುಗಿಸಲಾಯಿತು. ಹೊಸ ಹಾಂಗ್ ಕಾಂಗ್ ಸರ್ಕಾರದ ಮುಖ್ಯ ಕಾರ್ಯನಿರ್ವಾಹಕ ತುಂಗ್ ಚೀ ಹ್ವಾ, "ಒಂದು ದೇಶ, ಎರಡು ವ್ಯವಸ್ಥೆಗಳು" ಎಂಬ ಪರಿಕಲ್ಪನೆಯ ಆಧಾರದ ಮೇಲೆ ನೀತಿಯನ್ನು ರೂಪಿಸಿದರು.

ಹಾಂಗ್ ಕಾಂಗ್ ಅಭಿವೃದ್ಧಿಗೆ ಚೀನಾ ನಾಯಕರು ಅಗತ್ಯವೇ?

ಹಾಂಗ್ ಕಾಂಗ್ ಅಭಿವೃದ್ಧಿಗೆ ಚೀನಾ ನಾಯಕರು ಅಗತ್ಯವೇ?

ಬ್ರಿಟಿಷರ್ ಆಡಳಿತದಲ್ಲಿದ್ದ ಹಾಂಗ್ ಕಾಂಗ್ ಅಭಿವೃದ್ಧಿಯನ್ನು ಕಂಡು ಚೀನಾದಂತಾ ಚೀನಾವೇ ಬೆಕ್ಕಸ ಬೆರಗಾಗಿದೆ. ಬೀಜಿಂಗ್ ಮತ್ತು ಶಾಂಘೈ ನಗರಗಳನ್ನೇ ಮೀರಿಸುವ ಮಟ್ಟಕ್ಕೆ ಹಾಂಗ್ ಕಾಂಗ್ ನಲ್ಲಿ ಅಭಿವೃದ್ಧಿಗೊಂಡಿದೆ. 1997ರ ಜುಲೈ.01ರಂದು ಬ್ರಿಟಿಷರು ಒಪ್ಪಂದದಂತೆ ಚೀನಾಗೆ ಹಾಂಗ್ ಕಾಂಗ್ ನ್ನು ಹಿಂತಿರುಗಿಸಿದರು. ಈ ಸಾಂಕೇತಿಕ ದಿನಕ್ಕೂ ಮುನ್ನದಿನ ಸ್ವಾತಂತ್ರ್ಯ ರಾಷ್ಟ್ರೀಯ ಕಾನೂನಿಗೆ ಅನುಮೋದನೆ ಸಿಕ್ಕಿದೆ. ಇಂಥ ಸಂದರ್ಭದಲ್ಲೂ ಚೀನಾದ ನಾಯಕರಿಂದ ಹಾಂಗ್ ಕಾಂಗ್ ಅಭಿವೃದ್ಧಿಯಾಗುತ್ತದೆ. ಅಥವಾ ಹಾಂಗ್ ಕಾಂಗ್ ಅಭಿವೃದ್ಧಿಗೆ ಚೀನಾದ ನಾಯಕರ ಅಗತ್ಯವಿದೆ ಎಂದು ಆ ಜನರಿಗೆ ಎನಿಸುತ್ತಿಲ್ಲ.

ಲೋಪದೋಷ ನಿವಾರಣೆಗೆ ರಾಷ್ಟ್ರೀಯ ಭದ್ರತಾ ಕಾನೂನು

ಲೋಪದೋಷ ನಿವಾರಣೆಗೆ ರಾಷ್ಟ್ರೀಯ ಭದ್ರತಾ ಕಾನೂನು

ಹಾಂಗ್ ಕಾಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳ ನಡುವಿನ ಅಂತರವನ್ನು ರಾಷ್ಟ್ರೀಯ ಭದ್ರತಾ ಕಾನೂನು ನಿವಾರಿಸುತ್ತದೆ ಎಂದು ಹಾಂಗ್ ಕಾಂಗ್ ನಾಯಕ ಕ್ಯಾರಿ ಲ್ಯಾಮ್ ಉಲ್ಲೇಖಿಸಿದ್ದಾರೆ. ಜಿನೀವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಜೊತೆಗೆ ವೀಡಿಯೊ ಸಂವಾದದಲ್ಲಿ ಅವರು ಮಾತನಾಡಿದ್ದಾರೆ. ಹೊಸ ಕಾನೂನಿನಿಂದ ಪ್ರದೇಶದ ಸ್ವಾಯತ್ತತೆ ಅಥವಾ ಅದರ ಸ್ವಾತಂತ್ರ್ಯ ನ್ಯಾಯಾಂಗ ವ್ಯವಸ್ಥೆಗೆ ಯಾವುದೇ ರೀತಿಯಿಂದಲೂ ಧಕ್ಕೆ ತರುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಹಾಂಗ್ ಕಾಂಗ್ ನಲ್ಲಿ ಯಾವುದೇ ಬಾಹ್ಯಶಕ್ತಿಗಳಿಂದ ಹಿಂಸಾಚಾರ ಸೃಷ್ಟಿಸುವುದಕ್ಕೆ ಸಾಧ್ಯವಿಲ್ಲ. ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವುದನ್ನು ಸರ್ಕಾರಗಳು ಕಣ್ಣು ಮುಚ್ಚಿಕೊಂಡು ನೋಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗದು

ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗದು

ಆರ್ಥಿಕತೆಗೆ ಧಕ್ಕೆ ಉಂಟು ಮಾಡುವ ಕೆಲವರನ್ನು ಗುರಿಯಾಗಿಸಿಕೊಂಡು ಹೊಸ ಶಾಸನ ರೂಪಿಸಲಾಗಿದೆ ಎಂದು ಬೀಜಿಂಗ್ ಮತ್ತು ಹಾಂಗ್ ಕಾಂಗ್ ನ ಉನ್ನತ ಅಧಿಕಾರಿಗಳು ಪುನರ್ ಉಚ್ಛರಿಸಿದ್ದಾರೆ. ಈ ಶಾಸನದಿಂದ ಸಾರ್ವಜನಿಕರ ಸ್ವಾತಂತ್ರ್ಯ, ಹಕ್ಕುಗಳು ಹಾಗೂ ಹೂಡಿಕೆದಾರರ ಹಿತಾಸಕ್ತಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ನ ಸ್ಥಾಯಿ ಸಮಿತಿಯಲ್ಲಿ ಕಾನೂನು ಅಂಗೀಕರಿಸಿದ ನಂತರ, ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಹೋರಾಟವನ್ನು ಕೈಬಿಡುವುದಾಗಿ ಘೋಷಿಸಿದ್ದಾರೆ. ಪ್ರಮುಖ ಕಾರ್ಯಕರ್ತರಾದ ಜೋಶುವಾ ವಾಂಗ್, ಆಗ್ನೆಸ್ ಚೌ ಮತ್ತು ನಾಥನ್ ಲಾ ಅವರು ಪ್ರಜಾಪ್ರಭುತ್ವ ಪರ ಸಂಘಟನೆ ಡೆಮೋಸಿಸ್ಟೊದಿಂದ ಹಿಂದೆ ಸರಿಯುವುದಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೆ ತಿಳಿಸಿದ್ದಾರೆ.

ಚೀನಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಾಂಗ್

ಚೀನಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಾಂಗ್

ಹಾಂಗ್ ಕಾಂಗ್ ನಲ್ಲಿ ಜನರ ಜೀವನ ಮತ್ತು ಸುರಕ್ಷತೆಯ ಬಗ್ಗೆ ಆತಂಕ ಹುಟ್ಟಿಕೊಳ್ಳುತ್ತಿದೆ ಎಂದು ಪ್ರಜಾಪ್ರಭುತ್ವ ಪರ ಹೋರಾಟಗಾರ ವಾಂಗ್ ಆಂತಕ ವ್ಯಕ್ತಪಡಿಸಿದ್ದಾರೆ. ಹೊಸ ಶಾಸನದಿಂದ ಕಾನೂನಿನ ಪರಿಣಾಮಗಳನ್ನು ಚೀನಾಗೆ ಹಸ್ತಾಂತರಿಸಲಾಗಿದೆಯೇ ಅಥವಾ ನಮಗೆ ನಾವೇ ದೀರ್ಘಾವಧಿಯ ಜೈಲುಶಿಕ್ಷೆಯನ್ನು ವಿಧಿಸಿಕೊಂಡಿದ್ದೇವೆಯೇ ಎಂಬುದನ್ನು ಊಹಿಸುವುದಕ್ಕೂ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹಾಂಗ್ ಕಾಂಗ್ ಕಥೆ ಮುಗಿಸಿತಾ ಶಾಸನ?

ಹಾಂಗ್ ಕಾಂಗ್ ಕಥೆ ಮುಗಿಸಿತಾ ಶಾಸನ?

ಚೀನಾ ಅನುಮೋದನೆ ನೀಡಿರುವ ಹೊಸ ಶಾಸನದಿಂದ ಹಾಂಗ್ ಕಾಂಗ್ ಪಾಲಿನ ಉತ್ತಮ ದಿನಗಳು ಅಂತ್ಯವಾಗಲಿವೆ ಎಂದು ಜಗತ್ತು ಮೊದಲೇ ಅರಿತುಕೊಂಡಿತ್ತು. ಇಂದಿನಿಂದ ಹಾಂಗ್ ಕಾಂಗ್ ನಲ್ಲಿ ಭಯೋತ್ಪಾದನೆ ಆಳ್ವಿಕೆಯ ಹೊಸ ಯುಗವು ಆರಂಭವಾಗಲಿದೆ. ದ್ವೀಪ ನಗರವು ಪೊಲೀಸ್ ರಾಜ್ಯದ ಮಗ್ಗಲಿಗೆ ಹೊರಳುತ್ತಿದೆ ಎಂದು ಪ್ರಜಾಪ್ರಭುತ್ವವಾದಿ ವಾಂಗ್ ಟೀಕಿಸಿದ್ದಾರೆ.

ಸ್ವಾತಂತ್ರ್ಯದ ಕೂಗಿಗೆ ಸಾಕ್ಷಿಯಾದ ಹಾಂಗ್ ಕಾಂಗ್

ಸ್ವಾತಂತ್ರ್ಯದ ಕೂಗಿಗೆ ಸಾಕ್ಷಿಯಾದ ಹಾಂಗ್ ಕಾಂಗ್

ಕಳೆದ ತಿಂಗಳು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ವರ್ಷಾಚರಣೆ ಮುನ್ನಾದಿನ ಹಸ್ತಾಂತರ ಕಾಯ್ದೆ ಬಗ್ಗೆ ಚೀನಾ ಮೊದಲ ಬಾರಿಗೆ ಘೋಷಿಸಿತು. ಇದರಿಂದ ಹಾಂಗ್ ಕಾಂಗ್ ನಲ್ಲಿ ಪ್ರತಿಭಟನೆ ಕಾವೇರಿದ್ದು, ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆಯೂ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಅಮೆರಿಕಾ ಮತ್ತು ಇಂಗ್ಲೆಂಡ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದ್ದವು. 100ಕ್ಕೂ ಹೆಚ್ಚು ಪ್ರತಿಭಟನಾಕಾರರು ಹಾಂಗ್ ಕಾಂಗ್‌ನ ಕೇಂದ್ರದಲ್ಲಿರುವ ಐಷಾರಾಮಿ ಮಾಲ್ ‌ನಲ್ಲಿ ಜಮಾಯಿಸಿದ್ದರು. ಸ್ವಾತಂತ್ರ್ಯ ಹಾಂಗ್ ಕಾಂಗ್, ಕ್ರಾಂತಿ ಈಗ ಶುರು" ಸೇರಿದಂತೆ ಘೋಷಣೆಗಳನ್ನು ಕೂಗಿದರು. ಹಲವಾರು ಸ್ವಾತಂತ್ರ ಹಾಂಗ್ ಕಾಂಗ್ ಅನ್ನು ಪ್ರತಿನಿಧಿಸುವ ಧ್ವಜವನ್ನು ಮತ್ತು ಕಾನೂನನ್ನು ಖಂಡಿಸುವ ಪೋಸ್ಟರ್ ‌ಗಳನ್ನು ಪ್ರದರ್ಶಿಸಿದರು.

ಹೊಸ ಹೋರಾಟಕ್ಕೆ ಕರೆ ಕೊಟ್ಟ ಕ್ರಾಂತಿಕಾರಿಗಳು

ಹೊಸ ಹೋರಾಟಕ್ಕೆ ಕರೆ ಕೊಟ್ಟ ಕ್ರಾಂತಿಕಾರಿಗಳು

ಚೀನಾ ಸರ್ಕಾರವು ಅನುಮೋದನೆ ನೀಡಿದ ಶಾಸನದ ವಿರುದ್ಧ ತೀವ್ರವಾದಿಗಳು ಜುಲೈ.01ರಂದು ಹೊಸಕ್ರಾಂತಿಗೆ ಕರೆ ನೀಡಿದ್ದಾರೆ. ಸರ್ಕಾರದ ಅಧಿಕೃತ ಸಮಾರಂಭದ ಹಿನ್ನೆಲೆ 4,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಚೀನಾ ಭದ್ರತಾ ಕಚೇರಿಗೆ ಹಾಂಗ್ ಕಾಂಗ್ ನಲ್ಲಿ ಸ್ಥಾನ

ಚೀನಾ ಭದ್ರತಾ ಕಚೇರಿಗೆ ಹಾಂಗ್ ಕಾಂಗ್ ನಲ್ಲಿ ಸ್ಥಾನ

ಮೊದಲ ಬಾರಿಗೆ ಹಾಂಗ್ ಕಾಂಗ್ ನಲ್ಲಿ ರಾಷ್ಟ್ರೀಯ ಭದ್ರತಾ ಕಚೇರಿಯನ್ನು ಸ್ಥಾಪಿಸುವುದಕ್ಕೆ ಚೀನಾ ಸರ್ಕಾರವು ತೀರ್ಮಾನಿಸಿದೆ. ಭದ್ರತಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ. ಹಿರಿಯ ನ್ಯಾಯಾಧೀಶರು ಹಾಂಗ್ ಕಾಂಗ್‌ನ ಸ್ವಾತಂತ್ರ್ಯ ನ್ಯಾಯಾಂಗ ವ್ಯವಸ್ಥೆಯ ಮೂಲಕ ರೋಸ್ಟರ್ ‌ಗಳನ್ನು ನಿಯೋಜಿಸುತ್ತಾರೆ. ಈ ಅಧಿಕಾರಿಗಳು ಹಾಂಗ್ ಕಾಂಗ್ ನಲ್ಲಿ ನಡೆಯುವ ಯಾವ ನಿರ್ದಿಷ್ಟ ಚಟುವಟಿಕೆಗಳನ್ನು ಕಾನೂನುಬಾಹಿರಗೊಳಿಸಬೇಕು. ಯಾವ ತಪ್ಪಿಗೆ ಯಾವ ರೀತಿ, ಪ್ರಮಾಣದ ಶಿಕ್ಷೆಯನ್ನು ವಿಧಿಸುತ್ತಾರೆ ಎನ್ನುವುದು ಇಂದಿಗೂ ಸ್ಪಷ್ಟವಾಗಿಲ್ಲ.

English summary
Hong Kong Security Law Expected To Come Into Force On July 1 In Most Radical Change To Semi-Autonomous Territory Since 1997 Handover. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X