ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಗೆಲುವಿಗಾಗಿ ಹೋಮ-ಹವನ

|
Google Oneindia Kannada News

ಲಂಡನ್ ಆಗಸ್ಟ್ 9: ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ತನ್ನ ಪ್ರತಿಸ್ಪರ್ಧಿ ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ವಿರುದ್ಧ ಪ್ರಧಾನ ಮಂತ್ರಿ ಸ್ಪರ್ಧೆಯಲ್ಲಿ ಮುನ್ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ, ಭಾರತೀಯ ವಲಸೆಗಾರರು ಹವನಗಳನ್ನು ಆಯೋಜಿಸುವ ಮೂಲಕ ರಿಷಿ ಸುನಕ್ ಅವರ ಗೆಲುವಿಗಾಗಿ ಪೂಜಿಸುತ್ತಿದ್ದಾರೆ.

ಇಂಗ್ಲೆಂಡ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಗೆಲುವಿಗಾಗಿ ಭಾರತೀಯ ಮೂಲದ ಯುಕೆ ನಿವಾಸಿಗಳು ಹೋಮ ಹವನ ಮಾಡುತ್ತಿದ್ದಾರೆ. ರಿಷಿ ಸುನಕ್ ಗೆಲುವಿಗಾಗಿ ಪೂಜೆ ಪುನಸ್ಕಾರ ಮಾಡಿದ್ದಾರೆ. ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ರಿಷಿ ಸುನಕ್ ವಿರುದ್ಧ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಕಣದಲ್ಲಿದ್ದಾರೆ.

ಜಾನ್ಸನ್‌ರ ಹಗರಣಗಳು ಮತ್ತು ತಪ್ಪು ಹೆಜ್ಜೆಗಳನ್ನು ಪ್ರತಿಭಟಿಸಿ ಡಜನ್‌ಗಟ್ಟಲೆ ಕ್ಯಾಬಿನೆಟ್ ಮಂತ್ರಿಗಳು ರಾಜೀನಾಮೆ ನೀಡಿದರು. ಜೊತೆಗೆ ಅವರನ್ನು ಕೆಳಗಿಳಿಯುವಂತೆ ಒತ್ತಾಯಿಸಿದರು. ಹೀಗಾಗಿ ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದ ನಂತರ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುತ್ತಿದೆ. ಸದ್ಯ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಮತ್ತು ವಿದೇಶಾಂಗ ಸಚಿವ ಲಿಜ್ ಟ್ರಸ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಪಕ್ಷದ ನಾಯಕರು ಮತ ಚಲಾಯಿಸುತ್ತಿದ್ದಾರೆ.

Homa-Havana for England Prime Minister candidates Rishi Sunak victory

ಫೆಬ್ರವರಿ 2020 ಮತ್ತು ಜುಲೈ 2022 ರ ನಡುವೆ ಹಣಕಾಸು ಸಚಿವರಾಗಿದ್ದ ಸುನಕ್ ಅವರು ಕದನ ವಿರಾಮದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಮತದಾನ ತೋರಿಸುತ್ತದೆ. ಇಬ್ಬರೂ ಅಭ್ಯರ್ಥಿಗಳು ಮತಗಳನ್ನು ಗಳಿಸಲು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಈ ನಡುವೆ ಜುಲೈ 29 ರಂದು ರೆಕಾರ್ಡ್ ಮಾಡಲಾದ ನ್ಯೂ ಸ್ಟೇಟ್ಸ್‌ಮೆನ್ ನಿಯತಕಾಲಿಕೆ ಪ್ರಕಟಿಸಿದ ವಿಡಿಯೊದಲ್ಲಿ ಸುನಕ್ ಹೇಳಿಕೆ ಹೊರಬಿದ್ದಿದೆ.

ವಿಡಿಯೊದಲ್ಲಿ ಸುನಕ್ ಹೇಳುವುದನ್ನು ಕೇಳಬಹುದು, " ರಿಷಿ ಸುನಕ್ ಅವರು ಹಿಂದುಳಿದ ನಗರಗಳಿಂದ ಹಣವನ್ನು ಬೇರೆಡೆಗೆ ತಿರುಗಿಸಲು ನೀತಿ ಬದಲಾವಣೆಯನ್ನು ಈ ಹಿಂದೆ ಪ್ರೇರೇಪಿಸಿದ್ದಾರೆ'' ಎಂದು ಶುಕ್ರವಾರ ಟೀಕೆಗಳನ್ನು ಎದುರಿಸಿದರು.

Homa-Havana for England Prime Minister candidates Rishi Sunak victory

ವಾಸ್ತವವಾಗಿ ಋಷಿ ಸುನಕ್ ನಿಜಕ್ಕೂ ಈ ಸ್ಪರ್ಧೆ ಗೆಲ್ಲಬಲ್ಲರಾ? ಎಂಬುದು ಪ್ರಶ್ನೆ. ಐದು ಸುತ್ತು ಗೆದ್ದರೂ ಋಷಿ ಅಂತಿಮ ಹಂತದ ಚುನಾವಣೆಯನ್ನು ಗೆಲ್ಲುತ್ತಾರೆಂದು ಹೇಳುವುದು ಕಷ್ಟ. ಕೆಲ ವಿಶ್ಲೇಷಣೆಗಳ ಪ್ರಕಾರ ಸುನಕ್ ಸೋಲುವ ಸಾಧ್ಯತೆ ದಟ್ಟವಾಗಿದೆಯಂತೆ. ಇದಕ್ಕೆ ಕಾರಣ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರೊಂದಿಗೆ ಋಷಿ ಸುನಕ್ ಹೆಚ್ಚು ಒಡನಾಟ ಹೊಂದಿಲ್ಲ ಎಂಬುದು. ಹಾಗೆಯೇ, ಋಷಿ ಸುನಕ್ ಜನಪ್ರಿಯತೆ ಕೂಡ ಸೀಮಿತ ಮಟ್ಟದ್ದು.

ಭಾರತ ಮೂಲದ ಋಷಿ ಸುನಕ್ ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿದ ಮೊದಲ ಬ್ರಿಟನ್ ಸಂಸದ ಅವರು. ಇದು ಋಷಿ ಇಮೇಜ್ ಅನ್ನು ಋಣಾತ್ಮಕವಾಗಿ ಬಿಂಬಿತವಾಗಲು ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ, ಋಷಿ ಸುನಕ್ ಕೆಲ ತಿಂಗಳ ಹಿಂದಷ್ಟೇ ಹಣಕಾಸು ಸಚಿವರಾಗಿದ್ದವರು. ಆ ಸ್ಥಾನದಲ್ಲಿ ಅವರು ತೆಗೆದುಕೊಂಡ ಕೆಲ ಕ್ರಮಗಳು ಬಹಳಷ್ಟು ಟೀಕೆಗೆ ಕಾರಣವಾಗಿದೆ. ಕೋವಿಡ್‌ನಿಂದ ಜರ್ಝರಿತವಾಗಿದ್ದ ಬ್ರಿಟನ್ ಆರ್ಥಿಕತೆಗೆ ಜೀವ ತುಂಬಿದ ಶ್ರೇಯಸ್ಸು ಅವರದ್ದೇ ಆದರೂ ಭಾರಿ ಮೊತ್ತದ ತೆರಿಗೆಗಳನ್ನು ಜನಸಾಮಾನ್ಯರಿಗೆ ಹೇರುತ್ತಾ ಹೋಗಿದ್ದರು.

Homa-Havana for England Prime Minister candidates Rishi Sunak victory

ತೆರಿಗೆ ಏರಿಸಬಾರದೆಂದು ಪ್ರಧಾನಿ ಬೋರಿಸ್ ಜಾನ್ಸನ್ ನೀಡಿದ ಸೂಚನೆಗೂ ಕಿವಿಗೊಡದೆ ಅವರು ಬಾರಿ ಬಾರಿ ತೆರಿಗೆ ಏರಿಕೆ ಮಾಡಿದ್ದರು. ಬ್ರಿಟನ್ ಆರ್ಥಿಕವಾಗಿ ಚೇತರಿಸಿಕೊಳ್ಳಲು ಹಣದ ಹರಿವು ಬೇಕಿದ್ದರಿಂದ ಈ ಕ್ರಮ ಕೈಗೊಂಡಿದ್ದರು. ಜೊತೆಗೆ ಹೊರಗಿನಿಂದ ಸಾಕಷ್ಟು ಸಾಲಗಳನ್ನು ತಂದು ಆರ್ಥಿಕತೆಗೆ ಸುರಿದರು. ಪರಿಣಾಮವಾಗಿ ಆರ್ಥಿಕತೆ ಚೇತರಿಕೆ ಕಂಡಿತಾದರೂ ಬ್ರಿಟನ್ ದೇಶದ ಸಾಲದ ಕೂಪಕ್ಕೆ ಸಿಲುಕಿತು ಎಂದೆನ್ನಲಾಗುತ್ತಿದೆ. ಈಗ ಆ ದೇಶಕ್ಕೆ ಹಣದುಬ್ಬರದ ಹೊಡೆತವೂ ಬಿದ್ದಿದೆ.

Recommended Video

Asia Cupಗಾಗಿ ಪ್ರಕಟವಾದ ಭಾರತ ತಂಡದಲ್ಲಿ ಏನೆಲ್ಲಾ ಸಮಸ್ಯೆಗಳಿವೆ | OneIndia Kannada

English summary
Amid reports of UK foreign secretary Liz Truss leading the prime ministerial race against her rival, former British Finance Minister Rishi Sunak, the Indian diaspora has stepped up efforts to ensure his well-being and victory by organising havans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X