ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾದೇಶದಲ್ಲಿ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ

|
Google Oneindia Kannada News

ಢಾಕಾ, ನವೆಂಬರ್ 02: ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಆಘಾತಕಾರಿ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಬಾಂಗ್ಲಾದೇಶದ ಕ್ಯುಮಿಲ್ಲಾದ ಮುರಾದ್‌ನೋಜರ್‌ನಲ್ಲಿ ಫೇಸ್‌ಬುಕ್ ಪೋಸ್ಟ್ ನಲ್ಲಿ ಇಸ್ಲಾಂ ಧರ್ಮವನ್ನು ನಿಂದಿಸಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಸ್ಥಳೀಯರು ಅಲ್ಪಸಂಖ್ಯಾತರ ಮನೆಗಳನ್ನು ಸುಟ್ಟು ಧ್ವಂಸ ಮಾಡಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದಾರೆ ಎಂದು ಬಂಗ್ರಾ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ಕಮುರುಜಾಮನ್ ಟಲುಕ್ದರ್ ತಿಳಿಸಿದ್ದಾರೆ.

Hindu Homes Vandalized In Bangladesh

ಬಂಧಿತ ಇಬ್ಬರು ವ್ಯಕ್ತಿಗಳಲ್ಲಿ ಪುರ್ಬೊ ಧೌರ್ ನಲ್ಲಿರುವ ಶಿಶುವಿಹಾರ ಶಾಲೆಯ ಮುಖ್ಯೋಪಾಧ್ಯಾಯ ಮತ್ತು ಹತ್ತಿರದ ಆಂಡಿಕೋಟ್ ಗ್ರಾಮದ ನಿವಾಸಿ ಸೇರಿದ್ದಾರೆ. ಸದ್ಯ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಈ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಕ್ಯುಮಿಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಮೊಹಮದ್ ಅಬುಲ್ ಫಜಲ್ ಮಿರ್ ಯುಎನ್‌ಐಗೆ ತಿಳಿಸಿದ್ದಾರೆ.

ಬಾಂಗ್ಲಾದೇಶದ ಕ್ಯುಮಿಲ್ಲಾ ನಗರದಲ್ಲಿ ಘಟನೆ ನಡೆದಿದ್ದು, ಮುಸ್ಲಿಂ ಧರ್ಮ ನಿಂಧಿಸಿ ಫೇಸ್ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಕುರಿತು ವದಂತಿ ಹಿನ್ನೆಲೆ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ.

ಪ್ಯಾರಿಸ್‍ನಲ್ಲಿ ಶಿಕ್ಷಕನ ಶಿರಚ್ಛೇದನ ಮಾಡಿ, ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರನ್ನು ಫ್ರಾನ್ಸ್ ನಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಶ್ಲಾಘಿಸಿದ್ದು, ಇದಾದ ಬಳಿಕ ಬಾಂಗ್ಲಾದೇಶಿ ಮುಸ್ಲಿಮರು ಹಿಂದೂಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬಂಧಿತ ಇಬ್ಬರ ಮನೆಗಳು ಸೇರಿದಂತೆ ಮೂರು ಮನೆಗಳಿಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಸೈಯದ್ ನೂರುಲ್ ಇಸ್ಲಾಂ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

English summary
The houses of several Hindu families have been vandalised and burned by some radical Islamists in Bangladesh’s Comilla district over rumours about an alleged Facebook post slandering Islam, according to a media report on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X