ಪಾಕ್ ನಲ್ಲಿ ಓಕೆ ಆದ ಪದ್ಮಾವತ್ ಗೆ ಮಲೇಷ್ಯಾ ಸೆನ್ಸಾರ್ ಬೋರ್ಡ್ ನಿಷೇಧ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಹಿಂದಿ ಸಿನಿಮಾವನ್ನು ಮಲೇಷ್ಯಾದ ಸೆನ್ಸಾರ್ ಬೋರ್ಡ್ ನಿಷೇಧಿಸಿದೆ. ಇಸ್ಲಾಮ್ ನ ಸೂಕ್ಷ್ಮ ವಿಚಾರಗಳು ಸಿನಿಮಾದಲ್ಲಿವೆ ಎಂದು ಕಾರಣ ಕೊಡಲಾಗಿದೆ.
ನ್ಯಾಷನಲ್ ಸೆನ್ಸಾರ್ ಷಿಪ್ ಬೋರ್ಡ್ ನ ಅಧ್ಯಕ್ಷ ಮೊಹ್ಮದ್ ಜಂಬೇರಿ ಅಬ್ದುಲ್ ಅಜೀಜ್ ಮಾತನಾಡಿ, ಮುಸ್ಲಿಮರಿಗೆ ಈ ಚಿತ್ರದಿಂದ ನೋವಾಗಬಹುದು ಎಂಬ ಕಾರಣಕ್ಕೆ ಸಿನಿಮಾಕ್ಕೆ ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ.
'ಸಿನಿಮಾದ ಕಥೆಯು ಇಸ್ಲಾಮ್ ನ ಸೂಕ್ಷ್ಮ ವಿಚಾರಗಳ ಬಗ್ಗೆ ಇದೆ. ಮುಸ್ಲಿಮರು ಬಹು ಸಂಖ್ಯೆಯಲ್ಲಿರುವ ಮಲೇಷ್ಯಾದಲ್ಲಿ ಇದು ಆತಂಕಕಾರಿಯಾದ ಸಂಗತಿ' ಎಂದು ಅಜೀಜ್ ಅಲ್ಲಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪದ್ಮಾವತ್ ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಹದಿನಾರನೇ ಶತಮಾನದ ಕಾವ್ಯವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಪದ್ಮಾವತ್ ನ ರಚಿಸಿದವರು ಮುಹ್ಮದ್ ಜಯಸಿ. ಈ ಸಿನಿಮಾ ಬಿಡುಗಡೆ ಭಾರತದಲ್ಲೂ ರಜಪೂತ ಸಮುದಾಯ ಹಾಗೂ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದವು.












Click it and Unblock the Notifications