Video: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಹೆಣಗಳ ರಾಶಿ!
ಕಾಬೂಲ್, ಆಗಸ್ಟ್ 26: ಉಗ್ರರ ಕೌರ್ಯ ಮತ್ತು ಅಟ್ಟಹಾಸಕ್ಕೆ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ. ಗುರುವಾರ ರಾತ್ರಿ ನಡೆದ ಎರಡು ಸ್ಫೋಟಗಳು ಏರ್‌ಪೋರ್ಟ್‌ನಲ್ಲಿ ನರಕ ಸದೃಶ್ಯ ವಾತಾವರಣವನ್ನು ಸೃಷ್ಟಿಸಿವೆ.
ಗುರುವಾರ ಸಂಭವಿಸಿದ ಎರಡು ಬಾಂಬ್ ಸ್ಫೋಟದ ಕರಿಛಾಯೆ ಮರೆಯಾಗುವ ಹೊತ್ತಿಗೆ ಏರ್‌ಪೋರ್ಟ್‌ನಲ್ಲಿ ಹೆಣಗಳ ರಾಶಿ ಬಿದ್ದಿತ್ತು. ಸುಮಾರು 40 ಮಂದಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡಿದ್ದರೆ 120ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
#Breaking another footage (Strong Graphics +18)
— Aśvaka - آسواکا News Agency (@AsvakaNews) August 26, 2021
The number of Injuries and deads cross 100#Kabulairport pic.twitter.com/63cgEOsj1o
ಕಾಬೂಲ್ ಏರ್‌ಪೋರ್ಟ್‌ನಲ್ಲಿ ಬಿದ್ದಿರುವ ಹೆಣಗಳ ರಾಶಿ ಎದುರಿನಲ್ಲಿ ಸಂಬಂಧಿಕರು ಕಣ್ಣೀರು ಹಾಕುತ್ತಾ ಆಕ್ರಂದಿಸುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಏರ್‌ಪೋರ್ಟ್ ಮತ್ತು ಖಾಸಗಿ ಹೋಟೆಲ್ ಬಳಿ ಸಂಭವಿಸಿದ ಸ್ಫೋಟದ ಹಿಂದೆ ಐಸಿಸ್ ಉಗ್ರರ ಕೈವಾಡವಿರುವ ಬಗ್ಗೆ ತಾಲಿಬಾನ್ ಶಂಕೆ ವ್ಯಕ್ತಪಡಿಸಿದೆ.

ಯುಎಸ್ ಪ್ರಜೆಗಳಿಗೆ ಸಂದೇಶ ರವಾನಿಸಿದ ರಾಯಭಾರಿ ಕಚೇರಿ:
ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಏರ್ ಪೋರ್ಟ್ ಗೇಟ್ ಬಳಿ ಸಂಭವಿಸಿದ ಸರಣಿ ಸ್ಫೋಟದ ಹಿನ್ನೆಲೆ ಪ್ರಜೆಗಳಿಗೆ ಯುಎಸ್ ಈ ಸಂದೇಶ ರವಾನಿಸಿದೆ. "ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲು ಪ್ರದೇಶದಲ್ಲಿ ಭಾರಿ ಸ್ಫೋಟ ಹಾಗೂ ಗುಂಡಿನ ದಾಳಿ ನಡೆಸುವ ಅಪಾಯವಿದೆ. ಈ ವೇಳೆ ಯುಎಸ್ ಪ್ರಜೆಗಳು ವಿಮಾನ ನಿಲ್ದಾಣ ಹಾಗೂ ಏರ್ ಪೋರ್ಟ್ ಗೇಟ್ ಬಳಿ ತೆರಳದಂತೆ ಜಾಗೃತರಾಗಿರಿ," ಎಂದು ಯುಎಸ್ ರಾಯಭಾರಿ ಕಚೇರಿ ಸಂದೇಶ ರವಾನಿಸಿದೆ.
"ವಿಮಾನ ನಿಲ್ದಾಣದ ಅಬ್ಬಿ ಗೇಟ್, ಪೂರ್ವ ಗೇಟ್ ಮತ್ತು ಉತ್ತರ ಭಾಗದ ಗೇಟ್ ಬಳಿಯಿರುವ ಯುಎಸ್ ಪ್ರಜೆಗಳು ತಕ್ಷಣವೇ ಅಲ್ಲಿಂದ ವಾಪಸ್ ಹೋಗಿ," ಎಂದು ಎಚ್ಚರಿಕೆ ನೀಡಲಾಗಿತ್ತು. ಯುಎಸ್ ರಾಯಭಾರ ಕಚೇರಿಯು ಹೆಚ್ಚಿನ ಜನಸಂದಣಿಯಲ್ಲಿರುವಾಗ ತಮ್ಮ ಸುತ್ತಮುತ್ತಲಿನ ಚಟುವಟಿಕೆ ಬಗ್ಗೆ ಜಾಗೃತರಾಗಿರಲು ತನ್ನ ನಾಗರಿಕರಿಗೆ ನಿರ್ದೇಶನ ನೀಡಿತು. "ಕರ್ಫ್ಯೂಗಳಿಗೆ ಸಂಬಂಧಿಸಿದ ಚಲನೆಯ ನಿರ್ಬಂಧಗಳನ್ನು ಒಳಗೊಂಡಂತೆ ಸ್ಥಳೀಯ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ" ಎಂದು ಯುಎಸ್ ರಾಯಭಾರ ಕಚೇರಿ ಹೇಳಿದೆ.
GRAPHIC: Video shows the aftermath of #Kabul airport bombing. pic.twitter.com/lzynpxITYO
— Ahmer Khan (@ahmermkhan) August 26, 2021
ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿ ದಾಳಿ:
ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಇಡೀ ದೇಶದಲ್ಲಿ ನರಕ ಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ಇಡೀ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿದ್ದು, ವಿಮಾನ ನಿಲ್ದಾಣವೊಂದು ಮಾತ್ರ ಅಮೆರಿಕಾ ಸೇನಾ ಪಡೆಯ ನಿಯಂತ್ರಣದಲ್ಲಿದೆ. ಈ ಹಿನ್ನೆಲೆ ತಾಲಿಬಾನ್ ಕ್ರೌರ್ಯಕ್ಕೆ ತಲುಗಿದ ಸಾವಿರಾರು ಪ್ರಜೆಗಳು ದೇಶವನ್ನು ತೊರೆದು ಹೋಗುವುದಕ್ಕಾಗಿ ಹಾತೊರೆಯುತ್ತಿದ್ದಾರೆ. ಸಾವಿರಾರು ಮಂದಿ ವಿಮಾನ ನಿಲ್ದಾಣದಲ್ಲಿ ನೆರೆದಿರುವುದನ್ನು ಸಹಿಸದ ಉಗ್ರರು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಐಸಿಸ್ ಉಗ್ರರ ಕಡೆಗೆ ತಾಲಿಬಾನ್ ಬೊಟ್ಟು:
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದ ಸ್ಫೋಟಗಳನ್ನು ತಾಲಿಬಾನ್ "ಭಯೋತ್ಪಾದಕ ಕೃತ್ಯ" ಎಂದು ಕರೆದಿದೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಫೋಟದ ಕುರಿತು ಅಮೆರಿಕಾಗೆ ಮಾಹಿತಿ ನೀಡಿದ್ದು, ದಾಳಿ ಹಿಂದೆ ಐಸಿಸ್(ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಉಗ್ರರು ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ತಾಲಿಬಾನ್ ಜಾಗತಿಕ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಅಫ್ಘಾನಿಸ್ತಾನದ ನೆಲದಲ್ಲಿ ಯಾವುದೇ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.












Click it and Unblock the Notifications