ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಲ್ಲ ಕೊರೊನಾ ಆಟ, ಮುಂದಿದೆ ಅಸಲಿ ಅಟ್ಟಹಾಸ: ವಾರ್ನಿಂಗ್ ಕೊಟ್ಟ WHO!

|
Google Oneindia Kannada News

ವಿಶ್ವದಾದ್ಯಂತ ಇಲ್ಲಿಯವರೆಗೂ 24,99,665 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೊರೊನಾ ವೈರಸ್ ನಿಂದ ಈಗಾಗಲೇ 171,338 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್-19 ನಿಂದ ಜಗತ್ತಿನ ಹಲವು ದೇಶಗಳು ಅಕ್ಷರಶಃ ಜರ್ಜರಿತವಾಗಿವೆ.

Recommended Video

ಬೆಂಗಳೂರಿನಲ್ಲಿ ರಸ್ತೆಗೇನಾದ್ರು ಇಳಿದ್ರೆ ಯಮ‌ ಮಾತ್ರ ನಿಮ್ಮನ್ನ ಬಿಡೋದಿಲ್ಲ | Oneindia kannada

ಹೀಗಿದ್ದರೂ, ಕೊರೊನಾ ಆಟ ಇದಲ್ವಂತೆ. ಕೊರೊನಾ ಅಸಲಿ ಅಟ್ಟಹಾಸ ಇನ್ಮೇಲೆ ಶುರುವಾಗಲಿದೆ. ನೋವೆಲ್ ಕೊರೊನಾ ವೈರಸ್ ಔಟ್ ಬ್ರೇಕ್ ನಿಂದಾಗಿ ಬೆಚ್ಚಿಬೀಳಿಸುವ, ಭಯಾನಕ ದಿನಗಳು ಮುಂದೆ ಬರಲಿವೆ ಎಂಬ ವಾರ್ನಿಂಗ್ ವಿಶ್ವ ಆರೋಗ್ಯ ಸಂಸ್ಥೆಯ ಕಡೆಯಿಂದಲೇ ಬಂದಿದೆ.

ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO! ಅಲರ್ಟ್ ಪ್ಲೀಸ್: ಕೊರೊನಾ ವಿಚಾರದಲ್ಲಿ ಮತ್ತೊಂದು ಕರೆಗಂಟೆ ಮೊಳಗಿಸಿದ WHO!

ಹೌದು, ''ಈಗಿನಕ್ಕಿಂತಲೂ ಘನ ಘೋರ ದಿನಗಳು ನಮ್ಮ ಮುಂದಿವೆ'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದ್ದಾರೆ.

ಘನ ಘೋರ ದಿನಗಳು ನಮ್ಮ ಮುಂದಿವೆ

ಘನ ಘೋರ ದಿನಗಳು ನಮ್ಮ ಮುಂದಿವೆ

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸೃಷ್ಟಿಸಿರುವ ಅವಾಂತರದ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್, ''ನಮ್ಮನ್ನ ನಂಬಿ.. ಘನ ಘೋರ ದಿನಗಳು ನಮ್ಮ ಮುಂದಿವೆ'' ಎಂದು ಹೇಳಿದ್ದಾರೆ.

ದುರಂತವನ್ನು ತಡೆಯಬೇಕಿದೆ

ದುರಂತವನ್ನು ತಡೆಯಬೇಕಿದೆ

''ಕೊರೊನಾ ವೈರಸ್ ವಿರುದ್ಧ ಹೋರಾಡಲು ಜಾಗತಿಕ ಒಗ್ಗಟ್ಟು ಮತ್ತು ರಾಷ್ಟ್ರೀಯ ಐಕ್ಯತೆ ಬಹಳ ಮುಖ್ಯ. ಅದಿಲ್ಲದಿದ್ದರೆ, ಹೆಚ್ಚು ಜನ ಸಾವನ್ನಪ್ಪುತ್ತಾರೆ. ಕೆಟ್ಟದ್ದು ನಮಗಾಗಿ ಕಾಯುತ್ತಿದೆ. ಈ ದುರಂತವನ್ನು ನಾವೆಲ್ಲರೂ ಸೇರಿ ತಡೆಯೋಣ'' ಎಂದು ಟೆಡ್ರೋಸ್ ಕರೆ ನೀಡಿದ್ದಾರೆ.

ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?

ಅಪಾಯಕಾರಿ ಕಾಂಬಿನೇಶನ್

ಅಪಾಯಕಾರಿ ಕಾಂಬಿನೇಶನ್

''ಸಾರ್ಸ್ ಮತ್ತು ಮೆರ್ಸ್ ಗೆ ಕಾರಣವಾಗುವ ವೈರಸ್ ನಂತೆ ನೋವೆಲ್ ಕೊರೊನಾ ವೈರಸ್ ಕೂಡ ಡೆಡ್ಲಿ. ಅಪಾಯಕಾರಿ ಕಾಂಬಿನೇಶನ್ ಗಳನ್ನು ಈ ವೈರಸ್ ಒಳಗೊಂಡಿದೆ. ಆದರೆ ಈಗಿನ ತಂತ್ರಜ್ಞಾನ ಯುಗದಲ್ಲಿ ಇದನ್ನು ತಡೆಗಟ್ಟಬಹುದಾಗಿದೆ'' ಎಂದು ಟೆಡ್ರೋಸ್ ತಿಳಿಸಿದರು.

ಎಚ್ಚರಿಕೆ ಕೊಟ್ಟ ಟೆಡ್ರೋಸ್

ಎಚ್ಚರಿಕೆ ಕೊಟ್ಟ ಟೆಡ್ರೋಸ್

''ಹಲವು ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಕಡಿಮೆ ಆಗ್ತಿದ್ದಂತೆ, ಲಾಕ್ ಡೌನ್ ಅನ್ನು ಸಡಿಲಗೊಳಿಸಲಾಗುತ್ತಿದೆ. ಆದ್ರೆ, ಇದರಿಂದ ದೊಡ್ಡ ಅಪಾಯ ಕಟ್ಟಿಟ್ಟಬುತ್ತಿ. ಲಾಕ್ ಡೌನ್ ತೆರವುಗೊಳಿಸಿದರೆ, ಸೋಂಕಿನ ಎರಡನೇ ಅಲೆ ಶುರುವಾಗಲಿದೆ'' ಎಂದೂ ಟೆಡ್ರೋಸ್ ಎಚ್ಚರಿಕೆ ನೀಡಿದ್ದಾರೆ.

English summary
Head of WHO Warns that the worst of Coronavirus is ahead of us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X