ಸಾಕ್ಷ್ಯಾಧಾರ ನೀಡದಿದ್ದರೆ ಹಫೀಸ್ ನನ್ನು ಬಂಧಮುಕ್ತಗೊಳಿಸುತ್ತೇವೆ: ಪಾಕ್ ಕೋರ್ಟ್!
ಲಾಹೋರ್, ಅಕ್ಟೋಬರ್ 12: 2008 ರ ಬಾಂಬೆ ಸ್ಫೋಟದ ಪ್ರಮುಖ ಆರೋಪಿ ಹಫೀಸ್ ಸಯ್ಯದ್ ವಿರುದ್ಧ ಸರಿಯಾದ ಸಾಕ್ಷ್ಯಾಧಾರ ನೀಡದಿದ್ದಲ್ಲಿ ಆತನನ್ನು ಬಂಧಮುಕ್ತಗೊಳಿಸುತ್ತೇವೆ ಎಂದು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಹೇಳಿದೆ.
ಜಮ್ಮತ್ ಉದ್ ದಾವಾ ಮುಖ್ಯಸ್ಥ ಹಫೀಸ್ ಸಯ್ಯದ್ ಮತ್ತು ಅವನ ನಾಲ್ಕು ಸಹಚರರನ್ನು ಗೃಹಬಂಧನದಲ್ಲಿಟ್ಟು ಬಹಳ ದಿನಗಳಾದರೂ ಅವನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಬಾಂಬೆ ಸ್ಫೋಟದ ಪ್ರಮುಖ ಆರೊಪಿ ಎಂದು ಆತನ ಮೇಲೆ ಕಣ್ಣಿಟ್ಟಿದ್ದರೂ, ಕೇವಲ ದಿನಪತ್ರಿಕೆಗಳಲ್ಲಿ ಬಂದ ವರದಿಯ ಮೇಲೆ ಅವನನ್ನು ಅಪರಾಧಿ ಎಂದು ನಿರ್ಧರಿಸುವುದಕ್ಕಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

2008 ನವೆಂಬರ್ 11 ರಂದು ಬಾಂಬೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 166 ಕ್ಕೂ ಹೆಚ್ಚು ಜನ ಅಸುನೀಗಿದ್ದರು. ಆತನಿಗೆ ಶಿಕ್ಷೆ ನೀಡುವಂತೆ, ಅಥವಾ ಭಾರತಕ್ಕೆ ಹಸ್ತಾಂತರಿಸುವಂತೆ ಪಾಕ್ ಸರ್ಕಾರವನ್ನು ಭಾರತ ಹಲವು ಬಾರಿ ಕೇಳಿದ್ದರೂ ಆತನಿಗೆ ಗೃಹಬಂಧನ ಶಿಕ್ಷೆಯನ್ನಷ್ಟೇ ನೀಡಿ ಪಾಕ್ ಸರ್ಕಾರ ಸುಮ್ಮನಾಗಿದೆ.












Click it and Unblock the Notifications