ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20ನೇ ಶತಮಾನದ ಕ್ರಾಂತಿಕಾರಿ ವಿಜ್ಞಾನಿಗೆ ಹುಟ್ಟುಹಬ್ಬದ ವಿಶ್!

20ನೇ ಶತಮಾನದ ಕ್ರಾಂತಿಕಾರಿ ಬದಲಾವಣೆ, ಸಂಶೋಧನೆಗಳ ರೂವಾರಿ ಟಿಮ್ ಬರ್ನರ್ಸ್ ಲೀ ಅವರ ಹುಟ್ಟುಹಬ್ಬ.

By Mahesh
|
Google Oneindia Kannada News

ಬೆಂಗಳೂರು, ಜೂನ್ 08: ಇಂಟರ್ನೆಟ್ ಎಂಬ ಅಗಾಧ ಪ್ರಮಾಣದ ಮಾಹಿತಿ ಕಣಜವನ್ನು ಬೆಸೆಯುವ ಹಾಗೂ ಇಡೀ ವಿಶ್ವದ ಮುಂದೆ ಸಾದರ ಪಡಿಸುವ ಹೆಣಿಕೆಯಾದ ವರ್ಲ್ಡ್ ವೈಡ್ ವೆಬ್(www) ವಿನ್ಯಾಸಗೊಳಿಸಿದ ವಿಜ್ಞಾನಿ ಸರ್ ಟಿಮ್ ಬರ್ನರ್ಸ್ ಲೀ ಅವರಿಗೆ ಇಂದು(ಜೂನ್ 08) ಹುಟ್ಟುಹಬ್ಬದ ಸಂಭ್ರಮ.

ಬರೀ ಟೆಕ್ಸ್ ಸಂದೇಶಗಳಿಗೆ ಸೀಮಿತವಾಗಿದ್ದ, ಲ್ಯಾಬ್ ಮಟ್ಟದಲ್ಲಿದ್ದ ಅಂತರ್ಜಾಲವನ್ನು ಇಡೀ ವಿಶ್ವಕ್ಕೆ ಮುಕ್ತವಾಗಿ ಬಳಸಬಲ್ಲ ಅಪ್ಲಿಕೇಷನ್ ನೀಡಿದವರು ಬರ್ನರ್ಸ್ ಲೀ. [ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]

ಇಂಟರ್ನೆಟ್ ಮೇಲೆ ಅಮೆರಿಕ ಹೊಂದಿದ್ದ ಏಕಸ್ವಾಮ್ಯತೆಯನ್ನು ಹಿಡಿತವನ್ನು ತಡೆಗಟ್ಟಿ, ಜನಸಾಮಾನ್ಯರಿಗೂ ಇಂಟರ್ನೆಟ್ ತಲುಪುವ ಹಾಗೆ ಮಾಡಿದವರು ಲೀ. ಇದಕ್ಕಾಗಿ ಅವರು ಅಂದು ಬಳಸಿದ್ದು, ಟೆಲಿಫೋನ್ ಲೈನ್ ಹಾಗೂ ಸಾಧಾರಣ ಕಂಪ್ಯೂಟರ್.

ಸದ್ಯ ವರ್ಲ್ಡ್ ವೈಡ್ ವೆಬ್ ಒಕ್ಕೂಟದ ನಿರ್ದೇಶಕರಾಗಿರುವ ಸರ್. ಟಿಮ್ ಬರ್ನರ್ಸ್ ಲೀ ಅವರು ಇಂದಿನ ಯುಗದಲ್ಲಿ ಸದ್ದು ಮಾಡುತ್ತಿರುವ ಸಾಮಾಜಿಕ ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.[ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ: ಫೇಸ್ ಬುಕ್ ಸಿಇಒ]

WWW ಹುಟ್ಟಿನ ಮಜಲುಗಳು

WWW ಹುಟ್ಟಿನ ಮಜಲುಗಳು

* 1990ರಲ್ಲಿ ವಿಶ್ವದ ಮೊದಲ ವೆಬ್ ಬ್ರೌಸರ್ ವರ್ಲ್ಡ್ ವೈಡ್ ವೆಬ್ ಅನ್ನು ಬರೆಯಲು ಲೀ ಅವರು ಬಳಸಿದ್ದು ಸಾಧಾರಣ ಕಂಪ್ಯೂಟರ್.
* 'ಎನ್ಕ್ವಯರ್' (Enquire) ಎಂಬ ಸಾಫ್ಟ್ ವೇರ್ ಮೂಲಕ ಮಾಹಿತಿ ರವಾನೆಗೆ ಯತ್ನಿಸಿದ್ದ ಫಲವೇ ವರ್ಲ್ಡ್ ವೈಡ್ ವೆಬ್.
* Hyper text Markup Language(HTML) ಉದಯಕ್ಕೂ ಲೀ ಕಾರಣಕರ್ತರು.

www ನ ಜನಕ

* http://info.cern.ch ಆನ್‌ ಲೈನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ URL.
* ಬರ್ನರ್ಸ್ ಲೀ ಅವರು ವಲ್ಡ್ ವೈಡ್ ವೆಬ್ ಬಳಸಿ ಮೊದಲ ಫೋಟೋವನ್ನು 1992ರಲ್ಲಿ ವೆಬ್‌ಗೆ ಅಪ್‌ಲೋಡ್ ಮಾಡಿದರು.

ಮುಕ್ತ ತಂತ್ರಾಂಶದ ಪ್ರತಿಪಾದಕ

* 1993ರಲ್ಲಿ ಇಲಿನಾಯ್ ವಿವಿಯಲ್ಲಿ ವಿನ್ಯಾಸಗೊಂಡ ಮೊಸೈಕ್ ವೆಬ್ ಬ್ರೌಸರ್.
* 1994ರಲ್ಲಿ ಸಿಇಆರ್‌ಎನ್ ತೊರೆದ ಬರ್ನರ್ಸ್ ಲೀ ಅವರು ನಂತರ ವಲ್ಡ್‌ವೈಡ್ ವೆಬ್ ಒಕ್ಕೂಟ(ಡಬ್ಲ್ಯು3ಸಿ) ಸ್ಥಾಪಿಸಿದರು.

ಖ್ಯಾತ ವಿಜ್ಞಾನಿ

* ಟೈಮ್ ಮ್ಯಾಗಝಿನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ 100 ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ.

20ನೇ ಶತಮಾನದ ಪ್ರಭಾವಿ ಅಸ್ತ್ರ

ಟಿಮ್ ಬರ್ನರ್ಸ್ ಲೀ ಅವರು HTML, WWW ನೀಡುವ ಮೂಲಕ 20ನೇ ಶತಮಾನದ ಕ್ರಾಂತಿಕಾರಿ ಬದಲಾವಣೆಗೆ ಕಾರಣಕರ್ತರಾದರು.

ಸರ್ ಟಿಮ್ ಬರ್ನರ್ಸ್ ಲೀ

ವಿಜ್ಞಾನಿ ಸರ್ ಟಿಮ್ ಬರ್ನರ್ಸ್ ಲೀ ಅವರಿಗೆ ವಿವಿಧ ವೆಬ್ ಸೈಟ್, ದೇಶಗಳಿಂದ ಹುಟ್ಟುಹಬ್ಬದ ಶುಭಹಾರೈಕೆಗಳ ಟ್ವೀಟ್ ಗಳು ಬಂದಿವೆ.

English summary
Happy Birthday to Tim Berners-Lee, founder of the World Wide Web.Tim Berners-Lee was born on June 8, 1955
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X