ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?

Posted By:
Subscribe to Oneindia Kannada

ಕಲಿಗಾಲ ನಾವು ನೀವು ಅಂದುಕೊಂಡಿದ್ದಕ್ಕಿಂತ ವೇಗವಾಗಿದೆ. ಅದು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಸ್ಪೀಡ್ ಲಿಮಿಟ್ ಇಲ್ಲದ ಸೈಬರ್ ಹೆದ್ದಾರಿಯಲ್ಲಿ ಗಾಡಿ ಭರ್ರ್ ಅಂತ ನುಗ್ಗುತ್ತಿದೆ. ನ್ಯೂಸ್ ಪೇಪರ್ ಸರಕುಗಳು ಒಂದು ದಿನದ ನಂತರ ಹಳತಾಗುವ ಕಾಲ ಎಂದೋ ಹೋಯ್ತು. ಈ ಇಂಟರ್ನೆಟ್ ಜಮಾನಾದಲ್ಲಿ ಕೆಲವೇ ನಿಮಿಷಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂಬುದು ಕೊಳೆತ ಮೀನಾಗಿರುತ್ತದೆ.

ಈ ಮಧ್ಯೆ, ಅಸಮಕಾಲೀನ ಜಗತ್ತಿನಲ್ಲಿ ಸಮಾನಮನಸ್ಕರ ಖಾತೆಗಳನ್ನು, ಅವರ last seen ಚಲನವಲನಗಳನ್ನು ಗಮನಿಸುವುದರಲ್ಲೇ ಜನ್ಮ ಸವೆದು ಹೋಗುತ್ತಿದೆ. ಹಾಗಂತ ಕೆಲವರಿಗಾದರೂ ಭಾಸವಾಗಿರಬಹುದು. ಇದು ಕಾಲನ ಮಹಿಮೆಯಲ್ಲದೆ ಮತ್ತೇನಲ್ಲ. ಇರುವುದೊಂದೆ ಜನ್ಮ, ಅದೂ ಧಾವಂತಕ್ಕೆ ತುತ್ತಾದರೆ ಹೇಗೆ ಪರಮಾತ್ಮನೆ ಅನ್ಸಿರಬಹುದು.

ಮೊದಲು ಈಮೇಲು ಬಂತು. ಭಯಂಕರ ಬೋರು ಹೊಡೆಸಿಕೊಂಡು ಮೇಲು ಫೀಮೇಲುಗಳು ಪರಸ್ಪರ ವಿಮುಖರಾಗುತ್ತಿರುವ ಹೊತ್ತಿಗೆ ಪೇಜರು, ಮೊಬೈಲು, ಇಂಟರ್ನೆಟ್ ಚಾಟಿಂಗು, ಫೇಸ್ ಬುಕ್ಕು, ಮೆಸೆಂಜರ್, ಹ್ಯಾಂಗ್ ಔಟ್, ಸ್ಕೈಪು, ಟ್ವಿಟ್ಟರು, ಆಂಡ್ರ್ಯಾಡ್ ಫೋನು, ವಾಟ್ಸಾಪ್ಪು.... ಈಗ ಕಾಲ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಫೇಸ್ ಬುಕ್, ವಾಟ್ಸಾಪ್ ಕೂಡ ಬೇಸರ, ಕೆಲವೊಮ್ಮೆ ಅಸಹ್ಯ ತರಿಸುತ್ತಿದೆ.

ಕೆಲವು ಸಲವಂತೂ ತಲೆ ಚಿಟ್ಟುಹಿಡಿದು ಇದರಿಂದ ಮುಕ್ತಿಯೇ ಇಲ್ಲವೇ ಭಗವಂತ ಎಂದು ಮನಸ್ಸು ಮೌನದಲ್ಲಿ ಚೀರಿಕೊಳ್ಳುತ್ತದೆ. ಯಾವುದೋ ಒಂದು ಗಳಿಗೆಯಲ್ಲಿ ತೆರೆದ ಸೋಷಿಯಲ್ ಮೀಡಿಯಾ ಖಾತೆಯಿಂದ ಈಗ ದುಃಖ ಪಡುತ್ತಿರುವವರ ಲೆಕ್ಕ ಇಟ್ಟವರಿಲ್ಲ. ಡಿವೈಸ್ ಓಪನ್ ಮಾಡಿದರೆ ಸಾಕು ನೂರೆಂಟು ನೋಟಿಫಿಕೇಷನ್ನುಗಳ ರಾಶಿ. ಬೆಂಗಳೂರು ಕಸಕ್ಕಿಂತ ಅತ್ತತ್ತ! [ಗೂಗಲ್ ಭಾಷಾಂತರದಲ್ಲಿ ಪಾಲ್ಗೊಳ್ಳಿ ಫೋನ್ ಗೆಲ್ಲಿ!]

How to deactivate Facebook and Twitter accounts

ಕೆಲವರಿಗಂತೂ ಈ ಜನಪ್ರಿಯ ಸೋಷಿಯಲ್ ಜಾಲತಾಣಗಳು ಜಿಗುಪ್ಸೆ ಹುಟ್ಟಿಸುವಷ್ಟು ತೊಂದ್ರೆ ಕೊಡುತ್ತಿರುವುದರಲ್ಲಿ ನನಗೆ ಯಾವುದೇ ಅನುಮಾನ ಉಳಿದಿಲ್ಲ. ತಪಸ್ಸು ಮಾಡದೆ ಋಷಿಗಳಾದವರೆಷ್ಟೋ? ವಿರಕ್ತಿಗೆ ದಾರಿ ಯಾವುದಯ್ಯ ಎಂದು ಮೆಜೆಸ್ಟಿಕ್ಕಿನ ಫುಟ್ ಪಾತ್ ನಲ್ಲಿ ನಿಂತು ಅಡ್ರೆಸ್ ಕೇಳಿದವರೆಷ್ಟೋ? ಫೋನಿನಲ್ಲಿ ಏನು ಬಂದಿದೆ, ಏನು ಬಿಟ್ಟಿದೆ ಎಂದು ತೆಗೆದು ನೋಡುವಷ್ಟರಲ್ಲಿ ಆಯಸ್ಸಿನ 300 ಸೆಕೆಂಡು ಕಳೆದುಹೋಗಿರುತ್ತದೆ. ಅಮ್ಮಾ ದೇವರೆ, ಎಷ್ಟು ದಿನಾ ಅಂತ ಫೇಸ್ ಬುಕ್, ವಾಟ್ಸಾಪುಗಳಲ್ಲೇ ಕಾಲಕಳೆಯುವುದು? ಹಳೆಯದನ್ನು ಹಿಂದೆತಳ್ಳಿ ಹೊಸತನ್ನು ಹುಡುಕುವ, ಹೊಸತನ್ನು ಯೋಚಿಸುವ ಉಮೇದು ಇಲ್ಲವೆ ನನಗೆ? ಅಂತ ಮನಸ್ಸು ಮಮ್ಮಲ ಮರುಗಿರಬಹುದು. ಇಲ್ಲಿ ಹೊಸತನ ಅಂದರೆ Far from the madding crowd. ಅದು ಖಾಸಗಿತನ.

ಬಿಸಿಬಿಸಿ ಸುದ್ದಿ ಕಳಿಸುವುದರಲ್ಲಿ, ಹಸಿಹಸಿ ಜಗಳಕ್ಕೆ ವೀಳ್ಯ ಕೊಡುವುದರಲ್ಲಿ, ಯಾರದೋ ಹುಟ್ಟುಹಬ್ಬದ ಕೇಕು ತಲುಪಿಸುವಲ್ಲಿ, ಗಾಸಿಪ್ಪು ಹಬ್ಬಿಸುವುದರಲ್ಲಿ, ಸೈಬರ್ ಪೊಲೀಸರು ಇದ್ದಾರೆ ಎಂಬ ಪ್ರಜ್ಞೆಯಿಲ್ಲದೆ ಅಮಾಯಕರ ತೇಜೋವಧೆ ಮಾಡುವಲ್ಲಿ, ವಿಡಿಯೋ ನೋಡುತ್ತಾ ಮೈಮರೆಯುವಲ್ಲಿ, ಇಬ್ಬರ ಮಧ್ಯೆ ತಂದಿಡುವುದರಲ್ಲಿ ಸೋಷಿಯಲ್ ಜಾಲತಾಣಗಳು ಮಾಡುತ್ತಿರುವ ಅಂಡಾವರಣದ ಬಗ್ಗೆ ದೂಸ್ರಾ ಮಾತಿಲ್ಲ, ಅವು ಯಶಸ್ಸನ್ನೂ ಕಂಡಿವೆ, ಸತ್ಯ.

ಕಳೆದು ಹೋದವರು ಸಿಕ್ಕಿದ್ದಾರೆ, ಹೊಸ ಸ್ನೇಹಗಳು ಹುಟ್ಟಿಕೊಂಡವೇನೋ ನಿಜ. ಆದ್ರೆ ಅವರೂ ಹಳಬರ ಅಂಗಳಕ್ಕೆ ಸರಿಯುತ್ತಿದ್ದಾರಲ್ಲ. ಸಾಕಪ್ಪಾ ಇವ್ರ ಸಹವಾಸ, ಈ ಫೇಸ್ ಬುಕ್ ಈ ಟ್ವಿಟ್ಟರುಗಳಿಂದ ಗಾವುದ ದೂರ ಹೋಗುವುದು ಹೇಗೆ ಕಂದಾ? ಎಂಬ ಚಿಂತೆ ಕಿವಿಯಲ್ಲಿ ಪಿಸುಗುಟ್ಟಿರಬಹುದು. ಆ ಒಳದನಿಗೆ ಓಗೊಡುವ ತವಕ ಇದ್ದರೆ ತಾವು ಈ ಕೆಳಗೆ ತಿಳಿಸಿದ ಹೆಜ್ಜೆಗಳನ್ನು ಅನುಸರಿಸಬಹುದು.

How to deactivate Facebook and Twitter accounts

How To deactivate Facebook account:

1) Click the account menu at the top right of any Facebook page.
2) Select Settings.
3) Click Security in the left column.
4) Choose Deactivate your account then follow the steps to confirm.

How to deactivate Facebook and Twitter accounts

How To deactivate Twitter account:

1) Sign in to twitter.com on the web.
2) Go to your Account settings and click on Deactivate my account at the bottom of the page.
3) Read the account deactivation information. Click Okay, fine, deactivate account.
4) Enter your password when prompted and verify that you want to deactivate your account.

ಸ್ಮಾರ್ಟ್ ಫೋನಲ್ಲದೆ ನಮ್ಮಗಳ Internal Memoryಯನ್ನು ತಿನ್ನುತ್ತಿರುವ ಪರಿವೆಯೂ ಇಲ್ಲ. ಇನ್ನು ಗುಡ್ ಮಾರ್ನಿಂಗ್ ಗುಡ್ ಈವಿನಿಂಗ್, ಹ್ಯಾಡ್ ಯುವರ್ ಲಂಚ್? ಮತ್ತದೇ ಸುಭಾಷಿತ ಮಂಜರಿಗಳು, ಬದುಕನ್ನು ತಿದ್ದುವ ವೇದವಾಕ್ಯಗಳ ಸುರಿಮಳೆಗರೆಯುವ ವಾಟ್ಸಾಪ್ ರೇಜಿಗೆಯಿಂದ ಉಪಾಯವಾಗಿ ಪಾರಾಗುವ ಬಾಲಪಾಠಗಳನ್ನು ನಿಮಗೆ ಹೇಳಿಕೊಡುವ ಅಗತ್ಯವಿಲ್ಲ. ಯಾಕಂದ್ರೆ, ಅದು ನಿಮ್ಮ ಅಂಗೈ ಹುಣ್ಣಿನ ಮೇಲೆ ಕುಣಿಯುತ್ತಿರುವ ರಂಭೆ. ಆಡಿಸಿದರೆ, ಬೀಳಿಸಿದರೆ, ಒಡೆದುಹೋಗುವ ಬೊಂಬೆ. [ವಾಟ್ಸಪ್, ಫೇಸ್ ಬುಕ್ ಮನೆಯಲಿರಲಿ, ರಸ್ತೆ ಮೇಲೆ ಗಮನವಿರಲಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If you’re longing to get away from social networks, this guide will tell you how to delete your profile for good. How to deactivate Facebook and Twitter accounts explained in easy steps, in Indian language Kannada, by S K Shama Sundara.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ