Israel & Gaza: ಇಸ್ರೇಲ್ ವಿರುದ್ಧ ತಿರುಗಿಬಿದ್ದ ಹಮಾಸ್, ಗಾಜಾ ಪಟ್ಟಿಯಲ್ಲಿ ಮತ್ತೆ ಆತಂಕ ಶುರು!
ಗಾಜಾ ಪಟ್ಟಿಯಲ್ಲಿ ಇನ್ನೇನು ಶಾಂತಿ ಮರುಸ್ಥಾಪನೆ ಆಗಿದೆ. ಜನರು ನೆಮ್ಮದಿಯಾಗಿ ಮತ್ತೆ ತಮ್ಮ ತಮ್ಮ ಮನೆಗಳಿಗೆ ವಾಪಸ್ ಬರಬಹುದು, ಎಂಬ ನಿರೀಕ್ಷೆ ಮೂಡಿರುವ ಸಮಯದಲ್ಲೇ ದಿನಕ್ಕೊಂದು ಆಘಾತ ಅಲ್ಲಿನ ನಿವಾಸಿಗಳಿಗೆ ಎದುರಾಗುತ್ತಿದೆ. ಇದೇ ಸಮಯದಲ್ಲಿ ಹಮಾಸ್ ಕೂಡ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದು ಕೂತಿದೆ. ಈ ಮೂಲಕ, ಗಾಜಾ ಪಟ್ಟಿಯಲ್ಲಿ ಮತ್ತೆ ಯುದ್ಧ ಶುರುವಾಗುವ ಭಯ ಕಾಡುತ್ತಿದೆ.
ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿದ್ದ ಯುದ್ಧ ಇನ್ನೇನು ನಿಂತು ಹೋಯಿತು ಅಂತಾ ಇಡೀ ಜಗತ್ತು ನಂಬುವಾಗ, ದಿಢೀರ್ ಸಂಚಲನ ಸೃಷ್ಟಿ ಮಾಡುವ ಸುದ್ದಿ ಹೊರ ಬಿದ್ದಿದೆ. ಇಸ್ರೇಲ್ & ಗಾಜಾ ಕದನ ವಿರಾಮ ಒಪ್ಪಂದವನ್ನ ಇಸ್ರೇಲ್ ಸೇನೆ ಉಲ್ಲಂಘನೆ ಮಾಡಿದೆ ಎಂಬ ಗಂಭೀರ ಆರೋಪವನ್ನು ಇದೀಗ ಹಮಾಸ್ ಹೊರಿಸಿದೆ. ಇದರ ಪರಿಣಾಮ ಪರಿಸ್ಥಿತಿ ಇದೀಗ ಮತ್ತಷ್ಟು ಕೈಮೀರಿ ಹೋಗಿದ್ದು, ಇಬ್ಬರ ನಡುವೆ ಮತ್ತೆ ಕಲಹ ಶುರುವಾಗುತ್ತಾ? ಎಂಬ ಭಯ ಕೂಡ ಎದುರಾಗಿದೆ.

ಊಟ & ನೀರು ಅಂತಾ ಪರದಾಟ
ಯುದ್ಧದಲ್ಲಿ ಏನೂ ಸಿಗುವುದಿಲ್ಲ ಎಂಬುದು ಗೊತ್ತಿದ್ದರೂ, ಮನುಷ್ಯನಿಗೆ ಯುದ್ಧ ಬೇಕು. ಇಸ್ರೇಲ್ & ಹಮಾಸ್ ನಡುವೆ ಶುರುವಾಗಿದ್ದ ಜಗಳದಲ್ಲಿ ಗಾಜಾ ಪಟ್ಟಿ ಥೇಟ್ ನರಕದ ರೀತಿ ಆಗಿ ಹೋಗಿತ್ತು. ಗಾಜಾ ಪಟ್ಟಿ ಪರಿಸ್ಥಿತಿ ಅದೆಷ್ಟು ಕೈಮೀರಿ ಹೋಗಿತ್ತು ಅಂದ್ರೆ, ತುತ್ತು ಅನ್ನ ಕೂಡ ಸಿಗದೆ ಗಾಜಾ ಜನ ನರಳಾಡುವಂತೆ ಆಗಿತ್ತು. ಊಟ & ನೀರು ಅಂತಾ ಜನ ಪರದಾಡುತ್ತಿದ್ದರು & ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಹೀಗಿದ್ದಾಗ ಕಳೆದ ಕೆಲವು ದಿನಗಳಿಂದ ಯುದ್ಧ ನಿಂತ ಖುಷಿಯಲ್ಲಿ ಅಲ್ಲಿನ ಜನರು ಇದ್ದರು. ಆದರೆ ಇದೀಗ ದಿಢೀರ್ ಮತ್ತೆ ಕಿರಿಕ್ ಶುರುವಾಗಿ ಹೊಸ ಟೆನ್ಷನ್ ಎದುರಾಗಿದೆ.












Click it and Unblock the Notifications